ನ್ಯಾಮತಿ:ಮಾದನಬಾವಿ ದಾಸ ಶ್ರೇಷ್ಠ ಸಂತಕವಿ ಕನಕದಾಸರು ರಚಿಸಿರುವ ಕೀರ್ತನೆಗಳನ್ನು ಒಳಗೊಂಡ ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕದಾಸರ ಕೀರ್ತನೆಗಳ ಕೈಗನ್ನಡಿಯಾಗಿದ್ದು ಅದ್ಬುತವಾಗಿ ನೃತ್ಯರೂಪಕದೊಂದಿಗೆ ಮೂಡಿಬಂದಿದೆ ಎಂದು ನಿವೃತ್ತ ಕೆ.ಇ.ಬಿ.ನೌಕರ ಸಮಾಜ ಸೇವಕ ಬೆಳ್ಳುಳ್ಳಿ ಸಿಂಗಪ್ಪ ಹೇಳಿದರು.
ತಾಲ್ಲೂಕಿನ ಮಾದನಬಾವಿಯಲ್ಲಿ ಸೋಮವಾರ ಬೀರಲಿಂಗೇಶ್ವರ ಸೇವಾ ಸಮಿತಿ, ಗವಿಸಿದ್ದೇಶ್ವರ ಸೇವಾ ಸಮಿತಿ, ವೀರಭದ್ರೇಶ್ವರ ಜಾನಪದ ಕಲಾ ಸ್ವಸಹಾಯ ಸಂಘ, ರಂಗನಾಥ ಜಾನಪದ ಸಾಂಸ್ಕøತಿಕ ಕಲಾ ಸ್ವಸಹಾಯ ಸಂಘ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಯುಗಾದಿ ಸಂಭ್ರಮ ಜಾನಪದ ಯುವಜನಮೇಳ ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕನ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


537 ವರ್ಷಗಳ ಹಿಂದೆ ಕನಕದಾಸರು ರಚಿಸಿರುವ ಕೀರ್ತನೆಗಳನ್ನು ಆಕಾಶವಾಣಿ ಮತ್ತು ದೂರದರ್ಶನದ ಪತಂಜಲಿ ಜೆ.ನಾಗರಾಜ್ ಮತ್ತು ಪತಂಜಲಿ ಕಲಾ ತಂಡದ ಕಲಾವಿದರು ಅದ್ಭುತವಾಗಿ ಗೀತಾಗಾಯನ ನೃತ್ಯರೂಪಕದೊಂದಿಗೆ ಹಾರ್ಮೋನಿಯಂ, ತಬಲ, ರಿದಂ ಪ್ಯಾಡ್ ಮೂಲಕ ಯಶ್ವಸಿಯಾಗಿ ನಡೆಸಿಕೊಟ್ಟಿದ್ದಾರೆ. ಪತಂಜಲಿ ಸಂಸ್ಥೆ ಕಳೆದ 27 ವರ್ಷಗಳಿಂದ ನಿರಂತರವಾಗಿ ಕೀರ್ತನೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತ ಜಾನಪದ ಕಲಾವಿದ ಪತಂಜಲಿ ಜೆ.ನಾಗರಾಜ್ ಮಾತನಾಡಿ, ಪತಂಜಲಿ ಸಂಸ್ಥೆಯ ಮೂಲಕ ಕಳೆದ 27ವರ್ಷಗಳಿಂದ ನಿರಂತರವಾಗಿ ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಗೀತಾಗಾಯನ ನೃತ್ಯರೂಪಕವನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕ ರಾಜ್ಯಾದ್ಯಂತ ನಡೆಸಿಕೊಂಡು ಬಂದಿರುತ್ತೇವೆ. ರಾಷ್ಟ್ರಮಟ್ಟದಲ್ಲಿ ಭಾರತ ಸರ್ಕಾರದ ಸಂಸ್ಕøತಿ ಇಲಾಖೆ, ರಾಜ್ಯಮಟ್ಟದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಧನಸಹಾಯವನ್ನು ಪಡೆದು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಶ್ರೇಷ್ಠ ಸ್ಥಾನಮಾನ ಪಡೆದಿದೆ ಎಂದು ಹೇಳಿದರು.
ಕನಕದಾಸರ ಪಾತ್ರದಲ್ಲಿ ಸಾವಿರ ಹಾಡುಗಳ ಸರದಾರ ಹಿರಿಯ ಜಾನಪದ ಕಲಾವಿದ ಎಂ.ಪೂವಚಿiÀ್ಯು, ಕನಕದಾಸರ ಪಾತ್ರದಲ್ಲಿ ಮನೋಜ್ಞವಾಗಿ ನೃತ್ಯರೂಪಕದೊಂದಿಗೆ ಅಭಿನಯಿಸಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಬೀರಪ್ಪನ ಪಾತ್ರದಲ್ಲಿ ಪತಂಜಲಿ ಜೆ.ನಾಗರಾಜ್, ಹಿನ್ನೆಲೆ ಗಾಯಕರಾಗಿ ಹಿರಿಯ ಕಲಾವಿದ ಜಿ.ಎಂ.ಚನ್ನರಾಜ್, ಗಾಯಕಿ ನಾಗರತ್ನ, ತಬಲ ಕಲಾವಿದ ಶ್ಯಾಮ್‍ಮಿರಜ್‍ಕರ್, ಕೀಬೋರ್ಡ್ ಕಲಾವಿದ ನವನೀತ್, ರಿದಂ ಪ್ಯಾಡ್ ಕಲಾವಿದ ವಿಟ್ಟು ಮಿರಜ್‍ಕರ್, ಆಕ್ರೇಷ್ಟಾ ಸೌಂಡ್ಸ್ ಸಿಸ್ಟಂನ ವಿಜಯ್‍ಕುಮಾರ್, ನಮ್ಮ ಟಿವಿಯ ಶ್ರೀ ಕಾಂತ್, ಶ್ರೀ ವೀರಭದ್ರೇಶ್ವರ ಜಾನಪದ ಕಲಾ ಸ್ವಸಹಾಯ ಸಂಘ, ಶ್ರೀ ರಂಗನಾಥ ಜಾನಪದ ಸಾಂಸ್ಕøತಿಕ ಕಲಾ ಸ್ವಸಹಾಯ ಸಂಘದ ಕಲಾವಿದರಾದ ರಂಗನಾಥ್, ಬಸವರಾಜ್, ರುದ್ರೇಶಪ್ಪ, ಮಂಜುಳಾ, ಉಷಾದೇವಿ, ಲಲಿತ 32ಜನ ಕಲಾವಿದರು ಗೀತಾಗಾಯನಕ್ಕೆ ಸಾಥ್ ನೀಡಿದರು.
ಪತಂಜಲಿ ಸಂಸ್ಥೆ ಅಧ್ಯಕ್ಷೆ ಎ.ಹೆಚ್.ಶ್ಯಾಮಲಾ, ಬಾಲ ಕಲಾವಿದೆ ಎನ್.ಯೋಗೀತಾ ಅವರÀ ಗೀತಾಗಾಯನ ನೃತ್ಯರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಬಾಲ ಕಲಾವಿದೆ ಕು:ಎನ್.ಯೋಗೀತಾಗೆ ಸಹ್ಯಾದ್ರಿ ಮಲೆನಾಡು ಜಾನಪದ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

You missed