ಶಿವಮೊಗ್ಗ: ಏ: 08: ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಜಾನಪದ ಕಲಾವಿದರು ಏಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಪ್ರತಿಭಾವಂತ ಜಾನಪದ ಕಲಾವಿದರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಹೇಳಿದರು.
ಅವರು ಹೊಸಮನೆಯ ಪತಂಜಲಿ ಯೋಗ ಕಲಾ ಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನಪದ ಯುವಜನಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಆಧುನಿಕತೆಯ ಸಿನಿಮಾ ಟಿವಿ ಕಂಪ್ಯೂಟರ್ ಅಬ್ಬರದಲ್ಲಿ ಭಾರತೀಯ ಜಾನಪದ ಕಲೆ ಅಳಿವಿನಂಚಿನಲ್ಲಿ ಇದೆ. ಜಾನಪದ ಕಲೆ ಮತ್ತು ಕಲಾವಿದರು ಸಮಾಜದ ಕೈಗನ್ನಡಿ. ನಮ್ಮ ಸಂಸ್ಕøತಿ ಪರಂಪರೆಯ ಜೀವಾಳ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಪತಂಜಲಿ ಸಂಸ್ಥೆ ಕಳೆದ 27 ವರ್ಷಗಳಿಂದ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಪ್ರಾಸ್ಥಾವಿಕವಾಗಿ ಗೃಹರಕ್ಷಕದಳದ ಹಿರಿಯ ಅಧಿಕಾರಿ ರಾಷ್ಟ್ರಪತಿ ಪದಕ ವಿಜೇತ ವೀರಗಾಸೆ ಕಲಾವಿದ ಜಿ.ಈ.ಶಿವಾನಂದಪ್ಪ ಮಾತನಾಡಿ, ಜಾನಪದ ಕಲೆಯ ಮಹತ್ವವನ್ನು ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದರ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ಜಾನಪದ ಯುವಜನಮೇಳಅಭಿಯಾನದ ಮೂಲಕ ನಿರಂತರವಾಗಿ ಮಾಡಲಾಗುತ್ತಿದೆ. ಸಾಕಷ್ಟು ಕಲಾವಿದರು, ಕಲಾ ತಂಡಗಳು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯಕ್ತವನ್ನು ಪತಂಜಲಿ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಮಾತನಾಡಿ ಜಾನಪದ ಯುವಜನಮೇಳದ ಮೂಲಕ ಏಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕಲಾವಿದರನ್ನು ಗುರುತಿಸಿ ಸೂಕ್ತ ಮಾಹಿತಿ ಮಾರ್ಗದರ್ಶನವನ್ನು ಪತಂಜಲಿ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಏಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ನ್ಯಾಮತಿ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯರವರಿಗೆ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಸಿ.ಅಶ್ವಥ್ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕøತ ಹಿರಿಯ ಕಲಾವಿದ ಭವಾನಿಶಂಕರ್‍ರಾವ್, ಹಿರಿಯ ಕಲಾವಿದ ಮಂಜು ವಿಠಲ್ ಶೇಟ್, ಹಿರಿಯ ಜಾನಪದ ಕಲಾವಿದ ಶ್ರೀ ಕನಕದಾಸರ ಪಾತ್ರದಲ್ಲಿ ಎಂ.ಪೂವಯ್ಯ, ವಿಜಯಕುಮಾರಿ, ಸುರಹೊನ್ನೇಯ ಶ್ರೀ ಬಸವೇಶ್ವರ ಭಜನಾ ಸಂಘದ ವೀಣಾ, ಗೌರಮ್ಮ, ಮಾದನಬಾವಿಯ ಮಂಜುಳಾ, ಉಷಾದೇವಿ, ಲಲಿತ, ಬಸವರಾಜ್, ರುದ್ರೇಶಪ್ಪ, ಯಶಸ್ವಿಯಾಗಿ ಜಾನಪದ ಗೀತಾಗಾಯನವನ್ನು ನಡೆಸಿಕೊಟ್ಟರು.
ಬಿದರೆ ಗ್ರಾ.ಪಂ. ಮತ್ತು ಸಂತೆಕಡೂರು ಗ್ರಾ.ಪಂ.ಅಧ್ಯಕ್ಷ ಮಲರ್, ಎಂ.ಬಿ.ಕೆ. ಅಂಬಿಕಾ, ಪಾರ್ವತಿ, ಎಲ್‍ಸಿಆರ್‍ಪಿ. ಲತಾ, ಗೌರಮ್ಮ, ಕೃಷಿ ಸಖಿ ಅಮುದ, ಪಶುಸಖಿ ಓಮಲಾ, ಅಶ್ವಿನಿ, ಮಂಜುಳಾ, ಶಶಿಕಲಾ, ಅನಿತಾ, ಮಮತ, ಪಂಕಜಾ, ಸಹ್ಯಾದ್ರಿ ಮಲೆನಾಡು ಜಾನಪದ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.