ನ್ಯಾಮತಿ:ಪಟ್ಟಣದ ಗಾಂಧಿರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕಟ್ಟಡ ನಿರ್ಮಾಣದಲ್ಲಿ ಯಾವುದೇ ಒತ್ತುವರಿ ಆಗಿರುವುದಿಲ್ಲ, ನಿಯಮಬದ್ದವಾಗಿಯೇ ನಿರ್ಮಾಣವಾಗುತ್ತಿದೆ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸೊಸೈಟಿ ಅಧ್ಯಕ್ಷರಾದ ವೈದ್ಯ ಎಚ್.ಪಿ.ರಾಜಕುಮಾರ ಸ್ಪಷ್ಟಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ನಿರ್ಮಾಣವಾಗುತ್ತಿರುವುದು ಎರಡು ನಿವೇಶನಗಳ ಅಳತೆ ಇದ್ದು, 37 ಅಗಲ, ಉದ್ದ 80 ಮತು 93 ಎರಡು ಅಳತೆ ಇದ್ದು, ಪಟ್ಟಣ ಪಂಚಾಯಿತಿಯಿಂದ ಅಳತೆ ಮಾಡಿಸಿ ಅಧಿಕಾರಿಗಳ ಅನುಮತಿ ಪಡೆದು ದಾಖಲೆಗಳ ಪ್ರಕಾರವೇ ಕಟ್ಟಡಕ್ಕೆ ಆಯÁ ಮಾಡಿಸಿ ಅದರಂತೆ ನಿರ್ಮಾಣ ಮಾಡಲಾಗಿದೆ ಒತ್ತುವರಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಕೆರೆಗೆ ಹೋಗುವ ರಸ್ತೆಯಲ್ಲಿ ಒಂದುವರೆ ಅಡಿ Z್ಪರಂಡಿ ಇದ್ದು, ಕಾಮಗಾರಿ ಮಾಡುವಾಗ ದೊಡ್ಡ ಜೆಸಿಬಿ ಯಂತ್ರದಿಂದ ಹೆಚ್ಚು ಆಗಲ ತೆಗೆದಿದ್ದು, ಅಲ್ಲಿ ಸಾರ್ವಜನಿP್ಪರಿಗೆ ಅನುಕೂಲವಾಗುವಂತೆ Z್ಪರಂಡಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಚರಂಡಿ ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ, ಪಟ್ಟಣ ಪಂಚಾಯಿತಿ ದಾಖಲೆ ಪ್ರಕಾರ 10 ಅಡಿ ಅಗಲ ರಸ್ತೆ ಇದೆ ಎಂದರು.
ಎರಡುವರೆ ದಶಕಗಳಿಂದ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿಯೇ ಉತ್ತಮ ಹಣಕಾಸಿನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 3,500 ಸದಸ್ಯgನ್ನು ಹೊಂದಿದೆ. ಸೊಸೈಟಿಯಲ್ಲಿ ಸೇವೆ ಮಾಡುವ ಐದು ವರ್ಷದ ಧರ್ಮದರ್ಶಿಗಳು ನಾವುಗಳು, ಮುಂದೆ ಎಲ್ಲ ಷೇರುದಾರರು ಸೊಸೈಟಿ ನಿರ್ದೇಶಕರಾಗಬಹುದು. ಇದು ಸಾರ್ವಜನಿಕರ ಸ್ವತ್ತು ಇದರಲ್ಲಿ ನಮ್ಮ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನ್ಯಾಮತಿಗೆ ಒಂದು ಶೋಭೆಯಾಗುವಂತಹ ಕಟ್ಟಡ ಇರಲಿ ಎಂಬ ಉದ್ದೇಶದಿಂದ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು. ಸೊಸೈಟಿ ಕಟ್ಟಡದ ಬಗ್ಗೆಯಾಗಲಿ, ಪಕ್ಕದ ಕೆರೆಓಣಿಯ ರಸ್ತೆಯ ಬಗ್ಗೆ ಏನೇ ಅನುಮಾನ ಇದ್ದರೂ ಸೌಹಾರ್ಧಯುತವಾಗಿ, ಸಹಕಾರ ಮನೋಭಾವದಿಂದ ವರ್ತಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ವೀರೇಶಪ್ಪ, ಸಿಇಒ ಕುಮಾರ್, ನಿರ್ದೇಶಕರಾದ ಜಿ.ಆರ್.ಪ್ರಕಾಶ, ಎಚ್.ಎಂ.ಶಿವಮೂರ್ತಿ,ವೈದ್ಯ ಬಿ.ಎಚ್.ರಾಜಾನಾಯ್ಕ, ಬಿ.ಎಚ್.ಉಮೇಶ,ಎಚ್.ಬಿ.ಮೋಹನ, ಸಿ.ಕೆ.ರವಿಕುಮಾರ, ಕೆ.ಆರ್.ನಾಗರಾಜ, ಎಚ್.ಎಂ.ಅರುಣಕುಮಾರ, ಎಚ್.ಕೆ.ರೂಪಾ, ಎನ್.ಎನ್.ನಾಗರತ್ನ,ಎನ್.ಶಾಂತಲಾ, ಎಂಜಿನಿಯರ್ ಆನಂದ, ವ್ಯವಸ್ಥಾಪಕ ಆರ್.ಎಚ್.ರಂಗನಾಥ ಮತ್ತು ಸಿಬ್ಬಂದಿ ಇದ್ದರು.
