ಹೊನ್ನಾಳಿ ಮೇ 3 ಪಟ್ಟಣದ ಮಧ್ಯಭಾಗದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಗಾದೆಗೆ ಚಂದ್ರಪ್ಪ ಟಿ ಬಿದರಹಳ್ಳಿ, ಉಪಾಧ್ಯಕ್ಷರ ಗಾದೆಗೆ ಕೂಲಂಬಿ ಲೋಕೇಶಪ್ಪ ಎಂ,ಜಿ ರವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು.
ಬೇರೆ ಯಾವ ಆಡಳಿತ ಮಂಡಳಿಯ ನಿರ್ದೇಶಕರುಗಳು ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಚಂದ್ರಪ್ಪ ಟಿ ಬಿದರಹಳ್ಳಿ, ಉಪಾಧ್ಯಕ್ಷರಾಗಿ ಕೂಲಂಬಿ ಎಂಜಿ ಲೋಕೇಶ್ ಅಪ್ಪ ಇವರನ್ನು ಚುನಾವಣಾ ಅಧಿಕಾರಿಗಳು ಹಾಗೂ ಹೊನ್ನಳ್ಳಿ ಸಿಡಿಓ ನವೀನ್ ರವರು ಶ್ರೀ ಯುತರುಗಳನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು.
ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ,ಗೆ ನಿರ್ದೇಶಕರಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಚುನಾವಣಾ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿ ನವೀನ್ ರವರು ವಿತರಿಸಿದರು.
ಅವಳಿ ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರುಗಳಾದ ಕೋಡಿ ಕೊಪ್ಪದ ಶಿವಪ್ಪ,ಹೆಚ್ ಎ ಗದಿಗೇಶ್, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಪ್ರಕಾಶ್ ಎಜಿ, ರಂಗನಾಥ ಡಿ ಪಿ, ಶಿವಮೂರ್ತಿ ಬಿಜಿ, ಗೀತಾ ಜಿ ಗುರುರಾಜ್, ಟಿ ಆರ್ ಪಟೇಲ್, ದಿನೇಶ್ ಪಟೇಲ್ ಜಿವಿ, ಮಂಜುಳಾ ವೀರಭದ್ರ ಪಟೇಲ್, ಸದಾಶಿವಪ್ಪ ಎಸ್, ನಾಗರಾಜಪ್ಪ ಟಿ, ಗೋಪಾಲ್ ನಾಯ್ಕ, ಶಿವಾನಂದ ಟಿ ಎಂ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್, ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಸಮಾಜದ ಬಾಂಧವರು ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗಳಿಗೆ ನಿರ್ದೇಶಕರಿಗೆ ಶುಭ ಹಾರೈಸಿದರು.
