ನ್ಯಾಮತಿ ಅವಳಿ ತಾಲೂಕಿನಾಧ್ಯಂತ ರೈತರ ಹಲವಾರು ಸಮಸ್ಯೆಗಳನ್ನು ನಾನು ಖುದ್ದಾಗಿ ಅಧಿಕಾರಿಗಳ ಬಳಿ ಚರ್ಚಿಸಿ ಸಮಸ್ಯೆಗಳನ್ನು ಬಗೆ ಹರಿಸಿದ್ದೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಏರ್ಪಡಿಸಿದ ಜಿಲ್ಲಾಧಿಕಾರಿಗಳ ನಡೆ ತಾಲೂಕಿನಡೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಅನೇಕ ಜ್ವಲಂತ ಸಮಸ್ಯೆಗಳನ್ನು ಬಗೆ ಹರಿಸಿರುವ ತೃಪ್ತಿ ನನಗಿದೆ, ಆದರೂ ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಬಗೆ ಹರಿಸಬೇಕಿದೆ, ಇದಕ್ಕೆ ಅಧಿಕಾರಿಗಳು ಕೆಲವು ಸಮಸ್ಯೆಗಳನ್ನು ಬಗೆ ಹರಿಸಲಿಕ್ಕೆ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಕೆಲವು ಕಾನೂನಾತ್ಮಕವಾಗಿ ಬಗೆ ಹರಿದರೂ ಇನ್ನು ಕೆಲವು ಸಮಸ್ಯೆಗಳು ಮಾನವಿಯತೆಯ ನೆಲಗಟ್ಟಿನಲ್ಲಿ ಬಗೆಹರಿಸಬೇಕಾಗುತ್ತದೆ ಎಂದರು.
ತಾಲೂಕಿನ ಕುಳಗಟ್ಟೆ,ಹನುಮಸಾಗರ ಹಾಗೂ ಹೊಸಕಟ್ಟೆ ಇನಾಂ ಗ್ರಾಮಗಳನನು ಆಗಿದೆ,ಈಗಲಾದರೂ ಅತೀ ಶೀಘ್ರವಾಗಿ ಕಂದಾಯ ಗ್ರಾಮಗಳನ್ನಾಗಿ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಆ ಗ್ರಾಮಗಳಲ್ಲಿ ಸಾಕಷ್ಟು ಜಮೀನು ಇದ್ದರೂ ಸಹ ಆ ಗ್ರಾಮಸ್ಥರ ಹೆಸರಿಗೆ ಖಾತೆಗಳಾಗಿಲ್ಲ,ಇದರಿಂದ ಜಮೀನು ಮಾರಿ ಮಧುವೆ ಅಥವಾ ಇತರ ಶುಭಾ ಕಾರ್ಯಗಳು ಮಾಡಲಿಕ್ಕೆ ಆಗದೆ ಗ್ರಾಮಸ್ಥರು ಅಸಾಹಯಕರಾಗಿದ್ದಾರೆ,ಕೂಡಲೆ ಈ ಸಮಸ್ಯೆಯನ್ನು ಅತೀ ಜರೂರಾಗಿ ಬಗೆ ಹರಿಸಲಿಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಾನೂ ಮಾಡುತ್ತೇನೆ, ನೀವು ಸಹ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಕಂದಾಯ ಗ್ರಾಮಗಳನ್ನು ಮಾಡಿಕೊಡಲಿಕ್ಕೆ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕಂದಾಯ ಹಾಗೂ ಅರಣ್ಯ ದಲ್ಲಿ ನೂರಾರು ರೈತರು ಉಳುಮೆ ಮಾಡುತ್ತಿದ್ದಾರೆ, ಅರಣ್ಯ ಇಲಾಖೆಯವರು ಅವರನ್ನು ತಡೆಯುತ್ತಿದ್ದಾರೆ, ಶೀಘ್ರ ಕಂದಾಐ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಜಮೀನು ಯಾರಿಗೆ ಸೇರಿಬೇಕೆಂಬುದನ್ನು ನಿರ್ಣಹಿಸಿ,ಪದೇ ಪದೇ ರೈತರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅವಳಿ ತಾ;ಲೂಕಿನಾಧ್ಯಂತ ಇ- ಸ್ವತ್ತುಗಳ ಸಮಸ್ಯೆ ಇದ್ದು, ಇದಕ್ಕಾಗಿ ರೈತರು ಹಾಗೂ ಸಾರ್ವಜನಿಕರು ಕಚೇರಿಗೆ ಅಲೆದಾಡುವುದೇ ಆಗಿದೆ, ಇದಕ್ಕೆ ಕೂಡಲೆ ಕಡಿವಾಣ ಹಾಕಿ ಇ-ಸ್ವತ್ತು ಮಾಡಿಕೊಡಲಿಕ್ಕೆ ಅಗತ್ಯ ಕ್ರಮ ಕೈಗೊಳ್ಳಿ,
ಅಧಿಕಾರಿಗಳಿಗೆ ತಾಕಿತ್ತು ; ಅವಳಿ ತಾಲೂಕಿನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಕಚೇರಿ ಕೆಲಸಗಳಿಗೆ ದಿನಗಟ್ಟಲೆ ಬಂದು ಹೋಗುತ್ತಾರೆ ಆದರೂ ಅವರ ಕೆಲಸ ಅಪೂರ್ಣವಾಗಿರುತ್ತದೆ, ಇದಕ್ಕೆ ಯಾರು ಹೊಣೆ ಎಂದ ಅವರು ಆಗುವ ಕೆಲಸ ಇದ್ದರೆ ಕೂಡಲೆ ಮಾಡಿಕೊಡಿ,ಇಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳಿ ಕಳುಹಿಸಿ ಆದರೆ ಅಲೆದಾಡಿಸಿದರೆ ನಾನು ಸುಮ್ಮನಿರುವುದಿಲ್ಲ ಎಂದು ಅವಳಿ ತಾಲೂಕಿನ ಅಧಿಕಾರಿಗಳಿಗೆ ತಾಕೀತ್ತು ಮಾಡಿದರು.
ರಸಗೊಬ್ಬರ ಹಾಗೂ ಬಿತ್ತನೆಬೀಜಕ್ಕೆ ತೊಂದರೆ ಇಲ್ಲ ; ಅವಳಿ ತಾಲೂಕಿನಲ್ಲಿ ಅವಧಿಗೂ ಮುನ್ನ ಮಳೆಯಾಗಿದೆ, ರೈತರು ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ, ಈಗಾಗಲೆ ರಸಗೊಬ್ಬರ ಹಾಗೂ ಬಿತ್ತನೆ ಬೀಜವನಬನು ಅವಳಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ,ರೈತರು ಯಾವುದಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ದಾರಿ ಸಮಸ್ಯೆ,ಅಥವಾ ಖಾಸಗಿ ದಾರಿ ಹಾಗೂ ನಕಾಶೆ ಕಂಡ ದಾರಿಗಳ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಬಗೆಹರಿಸಿ, ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ನಾವು ಸದಾ ಸಿದ್ದರಾಗಿರಬೇಕು ಅದಕ್ಕಾಗಿಯೇ ನಾವು ನಿಯೋಜನೆಗೊಂಡಿರುತ್ತೇವೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಸರ್ವೆ ಮಾಡಲಿಕ್ಕೆ ಸಿಬ್ಬಂಧಿಗಳ ಕೊರತೆ ಇದೆ ಎಂದು ಹೊನ್ನಾಳಿ ಹಾಗೂ ನ್ಯಾಮತಿ ತಹಸೀಲ್ದಾರ್ ಹೇಳಿಕೊಂಡಾಗ ದಾವಣಗೆರೆಯ ದೂಡ ಹಾಗೂ ಮಹಾನಗರ ಪಾಲಿಕ್ಕೆಯಲ್ಲಿರುವ ಸರ್ವೆ ಅಧಿಕಾರಿಗಳ:ನ್ನು ಹದಿನೈದು ದಿನಗಳ ಮಟ್ಟಿಗೆ ಎರಡು ತಾಲೂಕಿಗೆ ನಿಯೋಜನೆ ಮಾಡುತ್ತೇವೆ, ಅಷ್ಟರಲ್ಲಿ ಸರ್ವೆ ಕಾರ್ಯ ಸಂಪೂರ್ಣವಾಗಿ ಮುಗಿಯಬೇಕು ಎಂದು ತಹಸೀಲ್ದಾರ್‍ಗಳಿಗೆ ಸೂಚಿಸಿದರು.
ಕಂದಾಯ ಸಚಿವ ಕೃಷ್ಣಬೈರೆಗೌಡ ಅವರ ಆದೇಶದನ್ವಯ ನಾವು ತಾಂಡಗಳನ್ನು ಕಂದಾಯ ಗ್ರಾಮಜಗಳನ್ನಾಗಿ ಮಾಡುತ್ತಿದ್ದೇವೆ, ಅಷ್ಟೆ ಅಲ್ಲದೆ ಸಚಿವರ ಸೂಚನೆಯಂತೆ ಸಾಕಷ್ಟು ಮಾರ್ಪಡುಗಳನ್ನು ಮಾಡುತ್ತಿದ್ದೇವೆ,ಶೀಘ್ರವೇ ರೈತರ ಎಲ್ಲಾ ಸಮಸ್ಯೆಗಳು ಬಗ್ಗೆ ಹರಿಯುತ್ತವೆ ಎಂದರು.
ಅವಳಿ ತಾಲೂಕಿನಲ್ಲಿ ಮೂರು ಲಕ್ಷ ಜನರಿದ್ದಾರೆ,ಆದರೆ 62 ಅಧಿಕಾರಿಗಳು ಇದ್ದಾರೆ,ಐದು ಸಾವಿರಕ್ಕೆ ಒಬ್ಬ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದಾರೆ,ಜನಸಂಕ್ಯೆ ಹೆಚ್ಚಾಗುತ್ತಿದೆ,ಇತ್ತ ಸಮಸ್ಯೆಗಳು ಬೆಳೆಯುತ್ತಿದೆ, ಹಂತಹಂತವಾಗಿ ಸಮಸ್ಯೆಗಳನ್ನು ಬಗ್ಗೆಹರಿಸುತ್ತೇವೆ ಎಂದು ಭರವಸೆ ನಿಡಿದರು.
ರೈತರ ಸಮಸ್ಯೆಗಳನ್ನು ನಾವು ಬಗ್ಗೆ ಹರಿಸಬಹುದಾದ ಎಲ್ಲಾ ಸಮಸ್ಯೆಗಳನ್ನು ಬಗ್ಗೆಹರಿಸಿ,ಇದು ಸಂವಿಧಾನದಲ್ಲಿ ಆಗುವುದೇ ಇಲ್ಲ ಎಂಬುದನ್ನು ಬೇಡ, ಆದರೆ ಮಾಡಬಹುದು ಎಂಬುನ್ನು ಖಂಡಿತಾ ಮಾಡಿಕೊಡಿ,ರೈತರು ಹಾಗೂ ಸಾರ್ವಜನಿಕರು ನಿಮ್ಮನ್ನು ಸ್ಮರಿಸುತ್ತಾರೆ ಎಂದರು.
ಇ-ಖಾತೆಗೆ ರೈತರು ಅರ್ಜಿ ಸಲ್ಲಿಸಲೇಬೇಕು ಎಂದೆನಿಲ್ಲ, ನಾವೇ ಅವರ ದಾಖಲಾತಿಗಳನಮ್ನು ಸಂಗ್ರಹಿಸಿ ಇ-ಸ್ವತ್ತು ಮಾಡಿಕೊಡಬೇಕು,ಅರ್ಜಿದಾರರು ಅರ್ಜಿ ಕೊಡುವವರೆಗೂ ಕಾಯುವ ಅವಶ್ಯಕತೆ ಇಲ್ಲ, ಪಿಡಿಒಗಳು ಇದನ್ನು ಗಮನಿಸಬೇಕು ಎಂದರು.
ಖಡಕ್ ಮಾತು ; ಕೆಲವು ಸಾರ್ವಜನಿಕರು ಸುಖಾಸುಮ್ಮನೆ ಸಿಬ್ಬಂಧಿಗಳ ಮೇಲೆ ಆರೋಪ ಮಾಡಲು ಪದೇ ಪದೇ ಯತ್ನಿಸಿದಾಗ ತಕ್ಷಣ ಜಿಲ್ಲಾಧಿಕಾರಿಗಳು ಮಾತನಾಡಿ, ಯಾವ ಸರ್ಕಾರಿ ನೌಕರ ಲಂಚ ತೆಗೆದುಕೊಂಡಿದ್ದಾರೋ ಅಂತಹವರ ಹೆಸರು ಹೇಳಿ,ನಾವೇ ಈಗಲೇ ಕ್ರಮ ಜರುಗಿಸುತ್ತೇವೆ,ಇಲ್ಲದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಖಡಕ್ ಆಗಿ ಹೇಳಿದಾಗ ಆರೋಪ ಮಾಡುತ್ತಿದ್ದವರು ಸುಮ್ಮನಾದರು.
ಜಿ.ಪಂ. ಸಿಇಒ ಸುರೇಶ್ ಬಿ ಇಟ್ನಾಳ್ ಮಾತನಾಡಿ,ಅವಳಿ ತಾಲೂಕಿನಲ್ಲಿ ಇ-ಸ್ವತ್ತು ಶೇ 35 ರಷ್ಟು ಮಾಡಿಕೊಟ್ಟಿಒದ್ದೇವೆ, ಇನ್ನೂ ಮಾಡಿಕೊಡುತ್ತಿದ್ದೇವೆ, ಪಿಡಿಒಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ನ್ಯಾಮತಿ ತಹಸೀಲ್‍ದಾರ್ ಕವಿರಾಜ್,ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ,ಇಒಗಳಾದ ರಾಘವೇಂದ್ರ,ಪ್ರಕಾಶ್,ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ,ಅಧಿಕಾರಿಗಳಾದ ಸೋಮ್ಲನಾಯ್ಕ್,ಡಾ.. ಗಿರೀಶ್,ತುಂಗಾ ಮೇಲ್ದಂಡೆ ಎಇಇ ಮಂಜುನಾಥ್,ಬೆಸ್ಕಾಂ ಎಇಇಗಳಾದ ಜಯಪ್ಪ,ಶ್ರೀನಿವಾಸಮೂರ್ತಿ,ರಾಜಸ್ವನಿರೀಕ್ಷಕರಾದ ಸಂತೋಷ್,ದಿನೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
