.ನ್ಯಾಮತಿ; ವಿಷಪೂರಿತ ಆಹಾರ ಸೇವಿಸಿದ 52 ಕುರಿಗಳು ಮಂಗಳವಾರ ಬೆಳಗಿನಜಾವ ಸಾವನ್ನಪ್ಪಿರುವ ದುರ್ಘಟನೆ ಜೀನಹಳ್ಖಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಇಂಡಿ ಮಹೇಶಪ್ಪ ಅವರಿಗೆ ಸೇರಿದ 52 ಕುರಿಗಳು ಸೋಮವಾರ ಕುರಿಗಳನ್ನು ಮೇಯಿಸಿಕೊಂಡು ಬಂದು ಕೊಟ್ಡಿಗೆಯಲ್ಲಿ ಸೇರಿಸಿದ ನಂತರ ಬೆಳಗಿನಜಾವ ಈ ದುರ್ಘಟನೆ ಸಂಭವಿಸಿದೆ.
ವಿಷಪೂರಿತ ಆಹಾರ ಸೇವನೆ ಶಂಕೆ : ಸೋಮವಾರ ಮೆಯ್ಯಲು ಹೋದಾಗ ಬಹುಶಃ ವಿಷಪೂರಿತ ಸೇವನೆ ಮಾಡಿರುವುರಿಂದ ಈ ದುಘ9ಟನೆ ಸಂಭವಿಸಿರಬಹುದು ಎಂದು ನ್ಯಾಮತಿ ತಾಲೂಕು ಪಶು ವೈಧ್ಯಾಧಿಕಾರಿ ಡಾ.ಚಂದ್ರಶೇಖರಪ್ಪ ತಿಳಿಸಿದರು.
ಪರಿಹಾರ ; ಸತ್ತ 52 ಕುರಿಗಳಿಗೆ ಶವ ಪರೀಕ್ಷೆ ಮಾಡಿಸಲಾಗಿದೆ. ಆರು ತಿಂಗಳ ಒಳಗೆ ಇರುವ ಕುರಿಗಳಿಗೆ 5000 ಹಾಗೂ ಆರು ತಿಂಗಳ ಮೇಲ್ಪಟ್ಟ ಕುರಿಗಳಿಗೆ 7.500 ಪರಿಹಾರವನ್ನು ಇಲಾಖೆಯಿಂದ ನೀಡಲಾಗುವುದು ಎಂದು ಜಿಲ್ಲಾ ಪಶು ವೈದ್ಯಾಧಿಕಾರಿ ಡ.ಮಹೇಶ್ ತಿಳಿಸಿದರು.
ಗೋಳಾಡಿದ ಕುರಿಗಾಯಿ : 52 ಕುರಿಗಳನ್ನು ಕಳೆದುಕೊಂಡ ಜೀನಹಳ್ಳಿ ಗ್ರಾಮದ ಕುರಿಗಾಯಿ ಇಂಡಿ ಮಹೇಶಪ್ಪ ಮಾತನಾಡಿ ನಾನು ಕುರಿಗಳಿಂದಲ್ಲೇ ನಾನು ನನ್ನ ಸಂಸಾರದ ಬಂಡಿ ನಡೆಯುತ್ತಿತ್ತು.ಈಗ ನಾನೇನು ಮಾಡಬೇಕು.ಇಡೀ ಕುಟುಂಬ ಹಾಗೂ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿತ್ತು.ಈಗ ನಾನು ಬೀದಿಗೆ ಬಂದಿದ್ದೇನೆ..ದಯಮಾಡಿ ಸರ್ಕಾರ ನಮಗೆ 10 ಲಕ್ಷ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಶಾಸಕ.ಜಿಲ್ಲಾಧಿಕಾರಿ ಭೇಟಿ: ಗ್ರಾಮದಲ್ಲಿ 52 ಕುರಿಗಳು ಸಾವನ್ನಪ್ಪಿರುವ ಘಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಿ.ಜಿ.ಶಾಂತನಗೌಡ.ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಪಂ.ಸಿಇಒ ಸುರೇಶ್ ಇಟ್ನಾಳ್ ನೀಡಿ ಕುರಿಗಾಯಿ ಇಂಡಿ ಮಹೇಶಪ್ಪ ಅವರಿಗೆ ಸಾಂತ್ವಾನ ಹೇಳಿ ಕೂಡಲೆ ಪರಿಹಾರ ನೀಡುವಂತೆ ಪಶು ಇಲಾಖೆಗೆ ಸೂಚಿಸಿದರು. ಇಟ್ನಾಳ್ನ್.ನ್ಯಾಮತಿ ತಹಸೀಲ್ದಾರ್ ಕವಿರಾಜ್.ಇಒ ರಾಘವೇಂದ್ರ ಉಪಸ್ಥಿತರಿದ್ದರು.
