ದಾವಣಗೆರೆ ಜೂ. 28 ಬಂದ್‌ ಹಿನ್ನೆಲೆ ಪ್ರತಿಭಟನೆಗೆ ಬೆಂಬಲಿಸುವಂತೆ  ತೆರೆದ ವಾಹನದಲ್ಲಿ ಮನವಿ  ಮಾಡುತ್ತಾ ಹೋಗುತ್ತಿದ್ದ ಮಾಜಿ ಶಾಸಕ ರೇಣುಕಾಚಾರ್ಯಗೆ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಮುಖಂಡ ಸುರೇಶ್‌ ಜಾಧವ್‌ ತರಾಟೆಗೆ ತೆಗದುಕೊಂಡ ಘಟನೆ ನಡೆಯಿತು.  ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕರೆ ಅಜ್ಜಂಪುರ ತಾಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ವಿರೋಧ. ಭದ್ರಾ ಬಲದಂಡೆ ಸೀಳಿ ನೀರು ಹರಿಸುವುದಕ್ಕೆ ಬಿಜೆಪಿ ವಿರೋಧ ಮಾಡಿ ದಾವಣಗೆರೆ ಬಂದ್‌ ಗೆ ಕರೆ ನೀಡಿತ್ತು.  ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ರೈತ ಮೋರ್ಚಾ,  ಟೈರ್‌ಗೆ ಬೆಂಕಿ, ಗದ್ದಲ ಗಲಾಟೆ ಮೂಲಕ ಆಕ್ರೋಶ ವ್ಯಕ್ತಪಡಿಸತ್ತು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಂದ್‌ ಕರೆ ನೀಡಿದ್ದ ಹಿನ್ನೆಲೆ ಆಕ್ರೋಶಗೊಂಡ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಮುಖಂಡ ಸುರೇಶ್‌ ಜಾಧವ್‌ ಇದು ಬಿಜೆಪಿ ಸರ್ಕಾರದಲ್ಲಿ ಅನುಮೋದನೆಗೊಂಡು ಪ್ರಗತಿಯಲ್ಲಿರುವ ಕಾಮಗಾರಿ ನಿಮ್ಮ ಸರ್ಕಾರ ಆಡಳಿತ ನಡೆಸುವ ವೇಳೆ, ನೀವು ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿಯೇ ಜಾರಿಗೆಯಾಗಿದೆ ಎಂದು ಬೀದಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಭದ್ರಾ ಜಲಾಶಯದ ಬಲದಂಡೆಯಿಂದ ಕುಡಿಯುವ ನೀರು ಸರಬರಾಜು ಪೈಪ್‌ ಲೈನ್‌ ಕಾಮಗಾರಿಗೆ ವಿರೋಧಿಸಿ ನೀವು ನಡೆಸುತ್ತಿರುವ ದಾವಣಗೆರೆ ಬಂದ್‌  ಕೂಡ ಪ್ರಯೋಜನವಿಲ್ಲ. ನಿಮ್ಮ ಸರ್ಕಾರ ಈ ಯೋಜನೆಗೆ ಹೇಗೆ ಅನುಮೋದನೆ ನೀಡಿತು,ಮ ಒಂದು ಕಾಮಗಾರಿಗೆ ಸರ್ಕಾರ ಅನುಮತಿ ನೀಡಿ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಯೋಜನೆ ಬಗ್ಗೆ ಮಾಹಿತಿ ಇರಲಿಲ್ಲವೇ ಎಂದು ಸುರೇಶ್‌ ಜಾಧವ್‌ ರೇಣುಕಾಚಾರ್ಯಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ವಿಲ್ಲದೆ ರೇಣುಕಾಚಾರ್ಯ ಬೆಪ್ಪವಾಗಿ ಹೋದ ಘಟನೆ ನಡೆಯಿತು.  ಬಳಿಕ  ಬಿಜೆಪಿ ಬಂದ್‌ ಕರೆ ನೀಡಿದ್ದ ಹಿನ್ನೆಲೆ ಕಾಂಗ್ರೆಸ್‌ ಕೂಡ ಬಿಜೆಪಿ ವಿರುದ್ಧವೇ ಪ್ರತಿಭಟನೆ ನಡೆಸಿತು. ವಿನಃ ಕಾರಣ ಜಿಲ್ಲೆಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದವರು ಮತ್ತು ಮಾಜಿ ಶಾಸಕ ರೇಣುಕಾಚಾರ್ಯ ಈ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲದ ನಡೆಸುತ್ತಿರುವ ಹೋರಾಟ. ಇದಕ್ಕೆ ಜನರು ಕಿವಿಗೂಡಬಾರದು ಎಂದು ಸುರೇಶ್‌ ಜಾಧವ್‌ ಕಿವಿ ಮಾತು ಹೇಳಿದ್ದಾರೆ. ಈ ಯೋಜನೆಗೆ ನಮ್ಮ ವಿರೋಧವಿಲ್ಲ ಆದರೆ ಬಿಜೆಪಿ ಮಾಡುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ ಎಂದು ಟೀಕೆ ಕಿಸಾನ್‌ ಕಾಂಗ್ರೆಸ್‌ ಮುಖಂಡ  ಸುರೇಶ್‌ ಜಾಧವ್‌  ಮಾಡಿದ್ದಾರೆ.

Leave a Reply

Your email address will not be published. Required fields are marked *