ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಬುಧವಾರದಂದು ಚುನಾವಣೆ ನಡೆಯಿತು.
ಮುಕ್ತೇನಹಳ್ಳಿ 2ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಪುಷ್ಪ ಜಿಸಿ ಚಂದ್ರಪ್ಪಗೌಡ್ರುರವರು ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಪುಷ್ಪಾ ಜಿ ಸಿ ಚಂದ್ರಪ್ಪಗೌಡ್ರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಗಳು ಹಾಗೂ ಕೆ ಆರ್ ಡಿ ಸಿ ಎಲ್ ಕಾರ್ಯ ನಿರ್ವಾಣಾಧಿಕಾರಿ ನಿತಿನ್ ಜಾದವ್ ರವರು ಘೋಷಣೆ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಶಾರದಮ್ಮ,ಗ್ರಾ ಪಂ ಸದಸ್ಯರು ಹನುಮಂತಪ್ಪ ಜಿ ಎಚ್, ಕಲ್ಲೇಶ್ ಕೆ ಎಸ್, ಯಶೋದಮ್ಮ ಎಸ್, ಸವಿತಾ ಆರ್, ಬಾಲಪ್ಪ ಎ ಕೆ, ಮಹಾಂತೇಶ್ ಕೆಬಿ, ರಮೀಜಾ ಬಿ, ಸರೋಜಮ್ಮ, ಹನುಮಂತಪ್ಪ ಟಿ ಬಿ, ಪಿಡಿಒ ಶಿವಕುಮಾರ್ ಡಿ , ಕಾರ್ಯದರ್ಶಿ ಹೇಮೇಶ್ ಎಂ ಬಿ, , ಮುಕ್ತೇನಹಳ್ಳಿ ಗ್ರಾಮದ ವರ್ತಕರಾದ ಸತೀಶ್ ಗೌಡ್ರು ಮತ್ತು ಅಣ್ಣ ತಮ್ಮಂದಿರು, ಬಂದು ಬಾಂಧವರು ಸೇರಿದಂತೆ ಕೆಂಗಲಹಳ್ಳಿ, ತಿಮ್ಮೇನಹಳ್ಳಿ ಗ್ರಾಮಸ್ಥರು ಹಿರಿಯರು, ಯುವಕರು ಮುಖಂಡರುಗಳು ಪಕ್ಷಾತೀತವಾಗಿ ನೂತನ ಅಧ್ಯಕ್ಷರುಗಳಿಗೆ ಶುಭ ಹಾರೈಸಿದರು.
ನೂತನ ಅಧ್ಯಕ್ಷರಿಗೆ ತಾಲೂಕಿನ ಶಾಸಕರು ಡಿ ಜಿ ಶಾಂತನಗೌಡ್ರುರವರು ಫೋನಿನ ಕರೆಯ ಮೂಲಕ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *