ನ್ಯಾಮತಿ :ತಾಲೂಕು ಗೋವಿನಕೋವಿ ಗ್ರಾಮದ ವಾಸಿ ಎಚ್ ಎಮ್ ಅರುಣ್ ಕುಮಾರ್ ರವರ ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ತಿಂಗಳು ಹಸಿವಿನ ಕರುವಿಗೆ ಮಂಗಳವಾರ ತಡರಾತ್ರಿ ಬೀದಿ ನಾಯಿಗಳು ಕಚ್ಚಿದ್ದವು. ಹಸುವಿನ ಮಾಲೀಕ ಪಶುವೈದ್ಯಾನಿಕಾರಿಗಳಿಗೆ ತೋರಿಸಿ ಲಸಿಕೆ ಹಾಕಿಸಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ,ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಒ ಕಾರ್ಯದರ್ಶಿಗಳು ಸೇರಿದಂತೆ ಬೀದಿ ನಾಯಿಗಳ ತಜ್ಞರನ್ನು ಕರೆಸಿ ಅವುಗಳನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮದ ಮುಖಂಡ ವಿ.ಎಚ್ ರುದ್ರೇಶಪ್ಪ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ,
