ನ್ಯಾಮತಿ :ತಾಲೂಕು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಬಾಕಿ ಇರುವ ವೈದ್ಯಕೀಯ ವೆಚ್ಚದ ಅನುದಾನ 1 , 80 ಲಕ್ಷ ರೂಗಳನ್ನು ಶಾಸಕ ಡಿಜಿ ಶಾಂತನಗೌಡ್ರುರವರು ಶಿಕ್ಷಕರ ಮೇಲಿರುವ ವಿಶೇಷ ಕಾಳಜಿ ಮತ್ತು ಅವರ ಅವಿರತ ಪ್ರಯತ್ನದಿಂದಾಗಿ ಅನುದಾನ ಮಂಜೂರು ಮಾಡಿಸಿ
ಕೊಟ್ಟು, ಶಿಕ್ಷಕರ ಬಹುದಿನದ ಬೇಡಿಕೆಯನ್ನ ಈಡೇರಿಸಿ ಅವಳಿ ತಾಲೂಕಿನ ಶಿಕ್ಷಕರ ವೈದ್ಯಕೀಯ ಅನುದಾನವನ್ನ ಸರಕಾರದಿಂದ ತಕ್ಷಣವೇ ಮರುಪಾವತಿ ಮಾಡಿಸಿಕೊಟ್ಟಿದ್ದಕ್ಕೆ ಶಾಸಕ ಡಿ ಜಿ ಶಾಂತನಗೌಡ್ರು ಅವರಿಗೆ ಅವಳಿ ತಾಲೂಕಿನ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಅವಳಿ ತಾಲೂಕಿನ ಶಿಕ್ಷಕರ ವತಿಯಿಂದ ಹೆಚ್ಚುವರಿ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನ್ಯಾಮತಿ ತಾಲೂಕಿನ ಶಿಕ್ಷಕ ಸಂಘದ ಅಧ್ಯಕ್ಷ ಜ್ಞಾನೇಶ್ ಕೆ.ಎನ್, ಕಾರ್ಯದರ್ಶಿ ಅನ್ನಪೂರ್ಣ, ಗೌರವಾಧ್ಯಕ್ಷ ಸಿದ್ದಪ್ಪ ಎಂ, ಹಾಗೂ ಪದಾಧಿಕಾರಿಗಳಾದ ವಿ ಮಹೇಶ್, ಆದರ್ಶ್, ಶ್ರೀಧರ ಡಿಪಿ, ಶೇಖರಪ್ಪ ಸುರೇಶ್, ಪ್ರಭು ಕೆ, ಡೊಂಕತ್ತಿ ನಾಗರಾಜ್, ಪುಟ್ಟಪ್ಪ, ಸುರೇಶ್ ಜಿ ಎಚ್ ಬಿ ಸತೀಶ್, ಚಂದ್ರಶೇಖರ್. ಹಾಗೂ ಅವಳಿ ತಾಲೂಕಿನ ವಿವಿಧ ಸಂಘದ ಪದಾಧಿಕಾರಿಗಳು ಶಿಕ್ಷಕರು ಹಾಜರಿದ್ದರು.

Leave a Reply

Your email address will not be published. Required fields are marked *