ನ್ಯಾಮತಿ:ರಾಜ್ಯದಲ್ಲಿ ಕಾಂಗ್ರ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ2 ತಿಂಗಳು ಪೂರೈಸಿದ್ದು, ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಸರ್ಕಾರ ಯಶಸ್ವಿಯಾಗಿ ಅನುμÁ್ಠನಗೊಳಿಸಿದ್ದು, ಇದರಲ್ಲಿ ವಿಶೇಷವಾಗಿ ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಟಿಕೇಟ್‍ಗಳು ಈ ಯೋಜನೆಯಡಿ ವಿತರಿಸಲ್ಟಟ್ಟು ರೂ .12,669 ಕೋಟಿ ಸರ್ಕಾರ ಶಕ್ತಿ ಯೋಜನೆಗೆ ವಿನಿಯೋಗಿಸಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಮಹಾಂತೇಶ್ವರ ಬಸ್ ನಿಲ್ದಾಣದಲ್ಲಿ ಸೋಮವಾರ ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣದ ಹಂv ತಲುಪಿದ್ದg ಕುರಿತು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಜನತೆಗೆ ನೀಡಿದ್ದ 5 ಗ್ಯಾರಂಟಿಗಳ ಭರವಸೆಯಂತೆ ಮಾತಿಗೆ ಬದ್ದವಾಗಿ ನಡೆದುಕೊಂಡಿದೆ, ಶಕ್ತಿ ಯೋಜನೆ ಸೇರಿದಂv ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಕೂಡ ಮಾತಿಗೆ ತಪ್ಪz ÉಅನುμÁ್ಠನಗೊಳಿಸಿದ ಶ್ರೇಯಸ್ಸು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲಬೇಕು ಎಂದರು.
ಮೊಟ್ಟ ಮೊದಲ ಬಾರಿಗೆ ಶಕ್ತಿ ಯೋಜನೆ 2023 ಜುಲೈ 14ರಂದು ತಾಲೂಕಿನ ಬಸ್ ನಿಲ್ದಾಣದಲ್ಲಿ ಉದ್ಘಾಟನೆ ಮಾಡಲಾಗಿತ್ತು, ಇದರ ಸಂಭ್ರಮಾಚರಣೆಯನ್ನು ಇಂದು ಮಾಡಲಾಗುತ್ತಿದೆ. ಪ್ರಪಂಚದಲ್ಲಿ ಅಂದಾಜು 375 ಕೋಟಿ ಜನಸಂಖ್ಯೆಯಲ್ಲಿ ಕರ್ನಾಟಕದಲ್ಲಿ 500ಕೋಟಿ ಮಹಿಳೆಯರು ಶಕ್ತಿ ಯೋಜನೆ ಅಡಿ ಸಂಚರಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಳೆದ ಹಿಂದಿನ ಸರ್ಕಾರ ಹೆಚ್ಚು ಆರ್ಥಿಕ ಸಾಲ ಮಾಡಿದ್ದು, ಒಂದು ವರ್ಷದ ಅವಧಿಯಲ್ಲಿ ಸಾಲ ತೀರಿಸಲಾಗಿದೆ. ಈಗ ಅಭಿವೃದ್ದಿಗೆ ಗಮನಹರಿಸಲಾಗಿದೆ ಮುಂದಿನ ಬಾರಿಯು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಯಾವ ಅನುಮಾನ ಇಲ್ಲ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಸಾರಿಗೆ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಂದ ಕೂಡ ಅನೇಕ ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ 10 ನೂತನ ಬಸ್ ಗಳನ್ನು ಹೊನ್ನಾಳಿ ಡಿಪೆÇೀಗೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಬಸ್ ಪೂಜೆ ನೆರವೇರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ್ಲದಾವಣಗೆರೆ ವಿಭಾಗೀಯ ಯಾಂತ್ರಿಕ ಅಭಿಯಂತರ ತಾರಾನಾಥ್,ಹೊನ್ನಾಳಿ ಡಿಪೆÇೀ ವ್ಯವಸ್ಥಾಪಕ ಎ.ಬಿ.ರಾಮಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ನ್ಯಾಮತಿ ತಾಲೂಕು ಘಟಕದ ಅಧ್ಯಕ್ಷ ಜಿ.ಶಿವರಾಮನಾಯ್ಕ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ.ವಿಶ್ವನಾಥ, ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ, ಸ್ಥಳೀಯ ಮುಖಂಡರಾದ ನುಚ್ಚಿನ ವಾಗೀಶ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಆರ್.ನಿತಿನ್, ಎಂ.ಎಸ್.ಭಾರತಿ, ಗೀತಾ,ಸುನಿತಾ, ಶಾಂತಮ್ಮ, ಎಚ್.ಮಲ್ಲಿಕಾರ್ಜುನ, ಯತೀಶಗಾದೇರ, ಯುನುಷ್‍ಬಾಷ್, ಕೆ.ವಿರೇಶ, ಬಿ. ರುದ್ರಪ್ಪ, ಸುರಹೊನ್ನೆ ಉಮೇಶ, ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ.ರಾಘವೇಂದ್ರ ಮತ್ತು ಸಿಬ್ಬಂದಿಗಳು, ಬೆಸ್ಕಾಂ ಎಂಜಿನಿಯರ್ ಬಿ.ಕೆ.ಶ್ರೀನಿವಾಸ ಇದ್ದರು.

Leave a Reply

Your email address will not be published. Required fields are marked *