ನ್ಯಾಮತಿ:12ನೇ ಶತಮಾನದಲ್ಲಿ ವಚನಗಳನ್ನು ಬರೆದ ಶರಣರು, ಯಾವುದೇ ವಿಶ್ವವಿದ್ಯಾನಿಲಯದ ಪದವಿ ಪಡೆದಿರಲಿಲ್ಲ. ಅವರ ಅದ್ಬುತ ಜ್ಞಾನದಿಂದ ವಚನಗಳನ್ನು ರಚಿಸಿದರು. ಅಂದಿನ ಅವರ ವಚನಗಳ ಮೇಲೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿ ಪಿಎಚ್ಡಿ ಪದವಿ ಪಡೆಯುವಂತಾಗಿದ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಭರ್ಮಪ್ಪ ಮೈಸೂರು ತಿಳಿಸಿದರು.

ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ವಚನಗುಮ್ಮಟ ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆ ಮತ್ತು ವಚನ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಅತಿಯಾದ ಮೌಢ್ಯಚಾರಣೆ, ಬಹುದೇವ ಆಚರಣೆ, ಬಡವರ ಶೋಷಣೆ, ನೂರಾರು ಯುದ್ದಗಳ ತುಂಬಿ ತುಳುಕುತ್ತಿದ್ದ ಸಂದರ್ಭ 12ನೇ ಶತಮಾನದಲ್ಲಿ ವಚನಗಳ ರಚನೆಯಾಯಿತು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಸಾಕಷ್ಟು ಜನರು ವಚನ ರಚನೆ ಮಾಡಿದರು. ಆ ಸಮಯದಲ್ಲಿ ಮನಸ್ಸನ್ನು ತಿದ್ದಿಕೊಳ್ಳುವ ಅವಕಾಶ ಇತ್ತು, ಆಲೋಚನೆ ಮಾಡುವ ಅವಕಾಶವಿತ್ತು. ಅದನ್ನು ವಚನಯುಗ ಎಂದು ಕರೆಯುತ್ತವೆ.
12ನೇ ಶತಮಾನದಲ್ಲಿ ಜನಸಾಮಾನ್ಯರಿಗೆ ಅರ್ಥವಾಗದ ದೇವಭಾಷೆಯ ಬದಲು ಪ್ರಥಮವಾಗಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಕನ್ನಡದಲ್ಲಿ ವಚನ ಬರೆದವರು ನಮ್ಮ ಜನಸಾಮಾನ್ಯ ಶರಣರು ಅವರಲ್ಲಿ ಅಂಬಿಗರ ಚೌಡಯ್ಯ, ಲೋಹರ ಕಕ್ಕಯ, ಮಾದರ ಚನ್ನಯ್ಯ, ಸೂಳೆÉ ಸಂಕವ್ವ ಇನ್ನು ಅನೇಕ ನೂರಾರು ಶರಣರು ಕಾರಣರಾಗಿದ್ದಾರೆ ಎಂದರು.
ಶರಣ ಕ್ರಾಂತಿಯ ನಂತರ ಅದ್ಬುತ ವಚನಗಳು ಕಣ್ಮರೆಯಾಗಿದ್ದು. ಅಂತಹ ವಚನಗಳನ್ನು ಹುಡುಕಿ ಸಂಗ್ರಹ ಮಾಡಿ ಸಂರಕ್ಷಣೆ ಮಾಡುವಲ್ಲಿ ಫ.ಗು.ಹಳಕಟ್ಟಿಯವರು ತಮ್ಮ ಜೀವನವನ್ನೆ ಮುಡುಪಾಗಿಟ್ಟರು. ಅವರ ಜನ್ಮದಿನಾಚರಣೆ ಆಚರಿಸುವ ಮೂಲಕ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಪುಣ್ಯದ ಕೆಲಸ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಶಿವಯೋಗಿ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆರ ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ, ಬೆಳಗುತ್ತಿ ಕಸಾಪ ಘಟಕದ ಅಧ್ಯಕ್ಷ ಎಂ.ಜಿ.ಕವಿರಾಜ, ಪದವಿ ಕಾಲೇಜಿನ ಪ್ರಾಚಾರ್ಯ ಎ.ಪಿ. ಶಿವಕುಮಾರ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಬಿದರಕಟ್ಟೆ ಅಂಬಿಕಾ, ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಮಹೇಶ್ವರಪ್ಪ, ಮಾದಿಗ ದಂಡೋರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಮಂಜಪ್ಪ, ರಾಮೇಶ್ವರ ನಾಗರಾಜ,ಜಿ.ಷಡಕಪ್ಪ, ಎಂ.ಮಂಜಪ್ಪ, ಹರಮಘಟ್ಟ ಬೋಜರಾಜ, ಪಾಲಾಕ್ಷಪ್ಪ, ಬಾಲಬಸವ ಕರಿಬಸಪ್ಪ, ಉಮಾದೇವಿ, ಎಂ.ಎಚ್.ಮಂಜಪ್ಪ, ಮಾದನಬಾವಿ ಮಂಜುಳಾ, ಲಲಿತಾ, ರೇಖಾ, ಗಜಾನನ, ಉಪಸ್ಥಿತರಿದ್ದರು.
ವಚನಗಾಯನ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸದಸ್ಯರು ನಡೆಸಿಕೊಟ್ಟರು.
14 ಎನ್ ಎಮ್ ಟಿ ಪೋಟೋ ಸುದ್ದಿ1
ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ ಶನಿವಾರ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಮತ್ತು ವಚನ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕನ್ನಡಾಭಿಮಾನಿಗಳು.
