ನ್ಯಾಮತಿಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸಾಧನೆ ಮಾಡುವ ಮೂಲಕ ಬೇರೆಯವರಿಗೆ ಯಶೋಗಾಥೆ ಆಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.
ನ್ಯಾಮತಿ ತಾಲ್ಲೂಕು ಬೆಳಗುತ್ತಿ ಗ್ರಾಮದಲ್ಲಿ ಗುರುವಾರ ಎನ್.ಆರ್.ಎಲ್.ಎಂ.ಭವನ, ಸ್ವಚ್ಛ ಸಂಕೀರ್ಣ ಹಾಗೂ ಮಲ್ಲಿಗೇನಹಳ್ಳಿ ಶಾಲಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ 10 ಕೋಟಿ ಮಹಿಳಾ ಸ್ವ-ಸಹಾಯ ಇವೆ. ಜಿಲ್ಲೆಯ 94 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಬಲೀಕರಣಕ್ಕೆ ಒತ್ತು ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರ ರೂಪಿಸಿದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ’ಯಿಂದ ಮಹಿಳೆಯರು ಸ್ವಯಂ ಉದ್ಯೋಗಿಗಳಾಗುವುದುರ ಜೊತೆಗೆ ಸಾಮಾಜಿಕ ಕೆಲಸಗಳಿಗೆ ಹಣವನ್ನು ಬಳಸಿದ್ದಾರೆ. ಮಲ್ಲಿಗೇನಹಳ್ಳಿ ಗ್ರಾಮದ ದೇವಸ್ಥಾನ ನಿರ್ಮಾಣಕ್ಕೆ 450 ಕುಟುಂಬಗಳು ತಮ್ಮ ಗೃಹಲಕ್ಷ್ಮಿ ಹಣವನ್ನು ಸಂಗ್ರಹಿಸಿ 9 ಲಕ್ಷ ಹಣವನ್ನು ದೇಣಿಗೆ ನೀಡಿರುವುದು ಶ್ಲಾಘನೀಯ. ಇದನ್ನು ನಾನು ಎಲ್ಲಾ ಕಡೆಯೂ ಹೇಳುವ ಮೂಲಕ ಗ್ರಾಮದ ಮಹಿಳೆಯರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.
ಗ್ರಾಮಗಳಲ್ಲಿ ಸಮುದಾಯ ಭವನ ಹಾಗೂ ದೇವಸ್ಥಾನ ನಿರ್ಮಾಣಕ್ಕಿಂತ ಶಾಲೆಗಳಿಗೆ ಹೆಚ್ಚು ಆಧ್ಯತೆ ನೀಡಬೇಕು,ಶಾಲೆಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಮಕ್ಕಳ ಓದಿಗೆ ಅನುಕೂಲವಾಗುತ್ತದೆ, ಶೈಕ್ಷಣಿಕ ಹಾಗೂ ಸ್ವಚ್ಚತೆಗೆ ಹೆಚ್ಚು ಆಧ್ಯತೆ ನೀಡಿ. ಬೆಳಗುತ್ತಿ ಬಸ್ ನಿಲ್ದಾಣದ ಸಮೀಪ ಶೌಚಾಲಯ ನಿರ್ಮಾಣಕ್ಕೆ ಹಾಗೂ ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ವಾಹನವನ್ನು ಒದಗಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು..
ನೂತನ ಶಾಲಾ ಕೊಠಡಿ ಮತ್ತು ಸಿಸಿ ರಸ್ತೆಗಳ ಉದ್ಘಾಟನೆ ನೆರವೇರಿಸಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ತಮ್ಮ ಅನುದಾನದಲ್ಲಿ ಬೆಳಗುತ್ತಿ ಗ್ರಾಮದಲ್ಲಿ 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿ,ಕ್ಷತ್ರಿಯ ಸಮುದಾಯಕ್ಕೆ 10 ಲಕ್ಷ,ಅರಸು ಸಮುದಾಯ ಭವನಕ್ಕೆ 10 ಹಾಗೂ ಮಲ್ಲಿಗೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ಸೇರಿದಂತೆ ಒಟ್ಟು 70 ಲಕ್ಷ ಅನುದಾನವನ್ನು ಅವಳಿ ಗ್ರಾಮದ ಅಭಿವೃದ್ದಿಗೆ ನೀಡಿದ್ದೇನೆ ಎಂದರು.
ನಾಲ್ಕು ತಿಂಗಳಲ್ಲಿ ಬಹುಗ್ರಾಮ ಯೋಜನಡಿಯಲ್ಲಿ ಈ ಭಾಗದ 57 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಟಿ.ನಾಗರತ್ನ ರಂಗನಾಥ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *