ನ್ಯಾಮತಿ :ಹೊನ್ನಾಳಿ ತಾಲೂಕಿನಲ್ಲಿ ಅ, 15ರ ಒಳಗಾಗಿ ಕನಿಷ್ಠ 100 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆ ಸೌಲಭ್ಯ ನೀಡುವ ಆಶಯ ಹೊಂದಲಾಗಿದೆ ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ತಾಲೂಕು ಬಿದರಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚಿನ್ನಿಕಟ್ಟೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸುಸ್ಥಿರ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಜೆಜೆ ಎಂ 247 ನೀರು ಸರಬರಾಜು ಘೋಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಜಲ ಜೀವನ್ ಕುಡಿಯುವ ನೀರು ಯೋಜನೆ, ಜಿಲ್ಲೆಯಲ್ಲಿ 24- 25ನೇ ಸಾಲಿನಲ್ಲಿ ಇಂಥ ಯೋಜನೆಗಳು ಗ್ರಾಮಗಳಲ್ಲಿ ಚಾಲನೆ ಗೊಂಡು ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ, ಜೊತೆಗೆ ಗ್ರಾಮದ ದೇಗುಲ ನಿರ್ಮಾಣಕ್ಕೆ 20 ಲಕ್ಷ ರೂ ವೆಚ್ಚದ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಅವಳಿ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಸೋಮಲಾ ನಾಯಕ್ ಮಾತನಾಡಿ ಬಿದರಳ್ಳಿ ಗ್ರಾಮದ 182 ಮನೆಗಳಿಗೆ 62 ಲಕ್ಷ ರೂ ತಾಂಡಾದ 54 ಮನೆಗಳಿಗೆ 24 ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಮೂಲಕ 247 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸೋಗಿಲು, ಕುರುವ, ಗಂಗನಕೋಟೆ, ಸೌವಳಂಗ ಗ್ರಾಮಗಳಿಗೂ ನೀರಿನ ಸೌಲಭ್ಯ ಯೋಜನೆ ಕಾರ್ಯ ಪೂರ್ಣಗೊಂಡು ಉದ್ಘಾಟನೆಯ ಹಂತ ತಲುಪಿವೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ಮಂಜುನಾಥ್ ಸದಸ್ಯರುಗಳಾದ ಶಶಿಕಲಾ ವಂಕಾರಪ್ಪ ಕವಿತಾ ಯೋಗೇಶ್ ನಾಯಕ್ ಕುಮಾರ್ ಕೇಟಿ ಮೂರ್ತಿ ರಮೇಶ್ ವೀರೇಶ್ ನಾಯಕ್ ಮುಖಂಡರಾದ ಜಮೀನಾಬಾಯಿ ತಾಲೂಕ ಪಂಚಾಯತಿ ಈ ಓ ರಾಘವೇಂದ್ರ ಜಿಲ್ಲಾ ಪಂಚಾಯಿತಿ ಯೋಜನೆ ವ್ಯವಸ್ಥಾಪಕ ಬಿಟಿ ಜಗದೀಶ್ ಪಿಡಿಒ ಜ್ಯೋತಿ ಶೆಟ್ಟಿ ಆಶಾ ಅಂಗನವಾಡಿ ಕಾರ್ಯಕರ್ತರು ಸಿದ್ದೇಶ್ವರ ದೇವಸ್ಥಾನ ಸಮಿತಿಯ ಮಹಿಳೆಯರು ಪಾಲ್ಗೊಂಡಿದ್ದರು
