ನ್ಯಾಮತಿಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಸಾಮಾಗ್ರಿಗಳನ್ನು ಬಿಜೆಪಿ ಮುಖಂಡ ಎಂ.ಆರ್.ಮಹೇಶ ವಿತರಿಸಿದರು.
ಗ್ರಾಮೀಣ ಪ್ರದೇಶಗಳ ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ, ಗುಡಿ ಕೈಗಾರಿಕೆಯಂತಹ ಉಪಕಸುಬುಗಳನ್ನು ಅವಲಂಭನೆ ಮಾಡುವ ಮೂಲಕ ಆರ್ಥಿಕಾಭಿವೃದ್ದಿ ಹೊಂದುವಂತೆ ಬಿಜೆಪಿ ಮುಖಂಡ ಎಂ.ಆರ್.ಮಹೇಶ ಸಲಹೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಅಜಾದ್ ಮತ್ತು ಬಾಲ ಗಂಗಾಧರ ತಿಲಕ್ ಅವರ ಜನ್ಮದಿನಾಚರಣೆ ಅಂಗವಾಗಿ ಸಂಸ್ಥೆಯಿಂದ ಉಚಿತವಾಗಿ ಹೊಲಿಗೆ ತರಬೇತಿ ಪಡೆದ 56 ಮಹಿಳೆಯರಿಗೆ ಹೊಲಿಗೆ ಸಾಮಾಗ್ರಿಗಳನ್ನು ವಿತರಿಸಿ ಅವರು ಸ್ವಯಂಉದ್ಯೋಗ ಮಾಡುವಂತೆ ತಿಳಿಸಲಾಯಿತು ಎಂದರು.
ಪುಷ್ಪಗಿರಿ ಧಾರ್ಮಿಕ ಪರಿಷತ್ ಪದಾಧಿಕಾರಿಗಳಾದ ಎಂ.ಎಚ್.ಮಂಜಪ್ಪ, ಗೀತಾ ಭರ್ಮಗೌಡ, ಕೆ.ಸಿ. ರುದ್ರಗೌಡ್ರು, ಹೊಲಿಗೆ ತರಬೇತಿ ಶಿಕ್ಷಕಿ ಗಂಜೀನಹಳ್ಳಿ ಆಶಾ, ಸಿಂಪಿ ಸಮುದಾಯದ ಎನ್.ಟಿ.ಜ್ಞಾನೋಬರಾವ್, ಕೋಟೆಕೇರಿ ಮೇಘರಾಜ ಉಪಸ್ಥಿತರಿದ್ದರು.
