ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನಾದ್ಯಾಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಲಿದೆ, ಹೊನ್ನಾಳಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ೨೬೭.೩ ಮಿಮಿ ಗೆ ೪೦೮.೩ ಮಿಮಿ (ಶೇ.೫೩ ರಷ್ಟು ಹೆಚ್ಚಿನ ಮಳೆ) ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ೩೬೯.೬ ಮಿಮಿ ಗೆ ೩೦೫.೭ ಮಿಮಿ (ಶೇ.೧೭ ರಷ್ಟು ಕಡಿಮೆ ಮಳೆ) ಬಂದಿರುತ್ತದೆ. ಪ್ರಸ್ತುತ ೩೦ ರಿಂದ ೫೦ ದಿವಸಗಳ ಹಂತದ ಬೆಳೆಗಳು ಇದ್ದು ಪ್ರಮುಖವಾಗಿ ಮುಸುಕಿನ ಜೋಳ ಬೆಳೆಗೆ ಸಾರಜನಕ (ಯೂರಿಯಾ) ರಸಗೊಬ್ಬರವನ್ನು ಮೇಲು ಗೊಬ್ಬರವನ್ನಾಗಿ ನೀಡಲಾಗುತ್ತಿದೆ, ನ್ಯಾಮತಿ ತಾಲ್ಲೂಕಿನಾಂದ್ಯ0ತ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಅತೀ ಶೀತಾಂಶಕ್ಕೆ ತುತ್ತಾಗಿ ಮುಸುಕಿನ ಜೋಳ ಬೆಳೆಗೆ ರೈತರು ಹೆಚ್ಚು ಪ್ರಮಾಣದ ಯೂರಿಯಾ ಗೊಬ್ಬರವನ್ನು ಹಾಕುತ್ತಿರುವುದು ಕಂಡುಬAದಿರುತ್ತದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿಗೆ ಅಗತ್ಯ ಪ್ರಮಾಣದ ಯೂರಿಯಾ ಗೊಬ್ಬರ ಪೂರೈಕೆಯಾಕಗಲಿದ್ದು, ಯೂರಿಯಾ ರಸಗೊಬ್ಬರದ ಕೊರತೆ ಇಲ್ಲ ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ನ್ಯಾಮತಿ ತಾಲ್ಲೂಕು ತಹಶಿಲ್ದಾರ ಶ್ರೀ ಕವಿರಾಜ್ ಎಂ ಪಿ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಬಿ ಎನ್ ವಿಶ್ವನಾಥರವರು ಮಾತನಾಡಿ, ಈ ಭಾರಿ ಹೊನ್ನಾಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚು ಪ್ರಮಾಣದಲ್ಲಿ ಆಗಿರುತ್ತದೆ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಸಹ ಸತತವಾಗಿ ಪ್ರತಿದಿನ ಮಳೆ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಾದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೊಂದರೆ ಉಂಟಾಗಿರುತ್ತದೆ, ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಅತಿ ಹೆಚ್ಚು ರಸಗೊಬ್ಬರವನ್ನು ಮಳೆಯಲ್ಲಿಯೇ ಅಥವಾ ಕೊಂಚ ಮಳೆ ಕಡೆಮೆಯಾದಾಗ ಕೊಡುತ್ತಿರುವುದಯ ಗಮನಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡೂಬAದರೂ ಸಹ ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾದ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳೆವಣಿಗೆ ಕುಂಟಿತವಾಗಿ ಗಿಡಗಳ ಬೆಳೆವಣಿಗೆಯೂ ಸಹ ಕುಂಟಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಆದ್ದರಿಂದ ರೈತರು ೪ ರಿಂದ ೫ ತಾಸು ಮಳೆ ಕಡಿಮೆ ಯಾದಾಗ ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.೨೦% ಸಾರಜನಕ) ೫೦೦ ಮಿಲಿ ಬಾಟಲಿನಲ್ಲಿ ಲಭ್ಯವಿದ್ದು ಅಥವಾ ನ್ಯಾನೋ ಡಿ ಎ ಪಿ (ಶೇ ೮ ಸಾರಜನಕ ಮತ್ತು ಶೇ. ೧೬ ರಂಜಕ ) – ೫೦೦ ಮಿಲಿ ಬಾಟಲಿನಲ್ಲಿ ಲಭ್ಯವಿರುವ ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ ೩ ರಿಂದ ೫ ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ. ಈ ದ್ರವ ಗೊಬ್ಬರವನ್ನು ೩೦-೩೫ ದಿನಗಳು ಮೊದಲನೇ ಹಂತ ಮತ್ತು ೫೦-೬೦ ದಿನಗಳಲ್ಲಿ ಸಿಂಪಡಿಸುವುದರಿAದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳೆವಣಿಗೆ ಮತ್ತು ಉತ್ತಮ ಇಳುವರಿ ಸಾದ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ ಎ ಪಿ ಅಧಿಕ ಹರಡುವಿಕೆ ಸಾಮರ್ಥೈ ಹೊಂದಿರುವುದರಿAದ ಇವುಗಳನ್ನು ಇತರೆ ಕೀಟನಾಶಕ, ಶಿಲಿಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದಾಗಿದೆ. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.೫೦ ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರರಾದ ಶ್ರೀ ಗೋವಿಂದಪ್ಪ ಹೆಚ್, ಕೃಷಿ ಅಧಿಕಾರಿ ಮಂಜುನಾಥ್ ಡಿ ಕೆ, ತಾಲ್ಲೂಕು ತಾಂತ್ರಿಕ ವ್ಯಸ್ಥಾಪಕರಾದ ಸಚಿನ್ ಟಿ ಬಿ ಹಾಜರಿದ್ದರು.
