ರಸಗೊಬ್ಬರ ಪೂರೈಕೆ ಮತ್ತು ಸಮರ್ಪಕ
ವಿತರಣೆ ಕ್ರಮದ ಬಗ್ಗೆ ಮಾನ್ಯ ತಹಶೀಲ್ದಾರರು
ಕವಿರಾಜ್ ಎಂ ಪಿ ಹಾಗೂ ಸಹಾಯಕ ಕೃಷಿ
ನಿರ್ದೇಶಕರು ಬಿ ಎನ್ ವಿಶ್ವನಾಥ್ ರವರ
ನೇತೃತ್ವದಲ್ಲಿ ಅಧಿಕಾರಿಗಳು ನ್ಯಾಮತಿ ತಾಲ್ಲೂಕಿನ
ವಿವಿಧ ರಸಗೊಬ್ಬರದ ಮಳಿಗೆಗಳಿಗೆ ಭೇಟಿ ನೀಡಿ,
ಯೂರಿಯಾ ದಾಸ್ತಾನು ಪರಿಶೀಲಿಸಿದರು. ಇದುವರೆಗೆ
ಪೂರೈಕೆಯಾಗಿರುವ ರಸಗೊಬ್ಬರ, ಮಾರಾಟವಾದ
ಪ್ರಮಾಣ ಮತ್ತು ದಾಸ್ತಾನು ಕುರಿತು ಪರಿಕರ
ಮಾರಾಟಗಾರರನ್ನು ಪ್ರಶ್ನಿಸಿ ಮಾಹಿತಿ ಪಡೆದರು.
ತಾಲ್ಲೂಕಿಗೆ ಪೂರೈಕೆಯಾಗಿರುವ ಯೂರಿಯಾ
ರಸಗೊಬ್ಬರವನ್ನು ತಾಲ್ಲೂಕಿನಿಂದ ಹೊರಗಡೆಗೆ
ಕಳುಹಿಸುತ್ತಿರುವುದು ಗಮನಕ್ಕೆ ಬಂದಿದ್ದು,
ಅದನ್ನು ಈ ಕೂಡಲೆ ನಿಲ್ಲಿಸಬೇಕು ಹಾಗೂ ಹೊನ್ನಾಳಿ
ಮತ್ತು ನ್ಯಾಮತಿ ತಾಲ್ಲೂಕಿನ ರೈತರಿಗೆ ಮಾತ್ರ
ವಿತರಿಸಿ ಯಾವುದೇ ರಸಗೊಬ್ಬರದ
ಕೊರತೆಯಾಗದಂತೆ ಕ್ರಮವಹಿಸಬೇಕು.
ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೊ
ಯೂರಿಯಾ ಮತ್ತು ನ್ಯಾನೊ ಡಿ.ಎ.ಪಿ. ಬಳಕೆಯ
ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ
ಮಾಡಿಕೊಡಬೇಕು ಎಂದು ಪರಿಕರ ಮಾರಾಟಗಾರರಿಗೆ
ಸೂಚಿಸಿದರು. ಕೃಷಿ ಅಧಿಕಾರಿ ಅತಿಕ್ ಉಲ್ಲಾ, ತಾಲ್ಲೂಕು
ತಾಂತ್ರಿಕ ವ್ಯವಸ್ಥಾಪಕ ಸಚಿನ್ ಟಿ ಬಿ ಹಾಜರಿದ್ದರು.
