ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದೆಗೆ ನಾಮ‌ ಪತ್ರ ಅರ್ಜಿಯನ್ನು ಮಂಜುನಾಥ್ ಎಸ್ ಆರ್ ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರುಗಳು ಅಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಮಂಜುನಾಥ್ ಎಸ್ ಆರ್ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಮೃತ್ಯುಂಜಯ ಸ್ವಾಮಿ ಘೋಷಣೆ ಮಾಡಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿ ಎಸ್ ಸುರೇಂದ್ರರವರು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.
ಉಪಾಧ್ಯಕ್ಷೆ ಅನಿತಾ ಡಿ ಕೆ, ಸದಸ್ಯರುಗಳು ಸುರೇಶ್ ಎಂ, ಪಿ ಎಸ್ ನಾಗರಾಜ್, ರೇಣುಕಮ್ಮ, ಕರಿಯಮ್ಮ, ಮಲ್ಲೇಶ್ ಕೆ ವಿ, ಹಳದಮ್ಮ, ಜಯಮ್ಮ ಡಿ ಎಂ, ಯು ಬಿ ಚಂದ್ರಮ್ಮ, ಶ್ರೀನಾಥ್ ಡಿ ಬಿ ಗ್ರಾಮ ಪಂಚಾಯಿತಿಯ ಪಿಡಿಒ ಶ್ವೇತ ವಿ ಆರ್, ಕಾರ್ಯದರ್ಶಿ ಕಾಂತರಾಜ್ ಜೆ ಬಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಅರಬಗಟ್ಟೆ ಸುಂಕದಕಟ್ಟೆ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *