ನ್ಯಾಮತಿ ತಾಲ್ಲೂಕಿನ:AC ವಿ ಅಭಿಷೆಕ್ ನೇತೃತ್ವದಲ್ಲಿ ಕಂದಾಯ, ಪೋಲಿಸ್ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ರಸಗೊಬ್ಬರ ವಿತರಣಾ ಕೇಂದ್ರಗಳಿಗೆ ಜಂಟಿ ತಪಾಸಣೆಉಪವಿಭಾಗಾಧಿಕಾರಿ ವಿ ಅಭಿಷೆಕ್ ನೇತೃತ್ವದಲ್ಲಿ ಕಂದಾಯ, ಪೋಲಿಸ್ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ರಸಗೊಬ್ಬರ ವಿತರಣಾ ಕೇಂದ್ರಗಳಿಗೆ ರಸಗೊಬ್ಬರ ವಿಶೇಷವಾಗಿ ಯೂರಿಯಾ ರಸಗೊಬ್ಬರ ಸಮರ್ಪಕ ದಾಸ್ತಾನು ಮತ್ತು ವಿತರಣೆ ಬಗ್ಗೆ ಜಂಟಿ ತಪಾಸಣೆ ಕೈಗೊಳ್ಳಲಾಯಿತು.
ಯೂರಿಯಾ ರಸಗೊಬ್ಬರವನ್ನು ಸರಬರಾಜು ಪಡೆಯುತ್ತಿರುವ ಎಲ್ಲಾ ವಿತರಕರು ಅಥವಾ ಮಾರಟಗಾರರು ಯಾವುದೇ ಕಾರಣಕ್ಕೂ ನಿಗಧಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಟ ಮಾಡುವುದು ಅಫರಾಧವಾಗಿದ್ದು ಯೂರಿಯಾ ರಸಗೊಬ್ಬರ ಮಾರಟ ಮಾಡುತ್ತಿರುವ ರೈತರ ವಿವರಗಳನ್ನು ಮತ್ತು ಆಧಾರ್ ಸಂಖ್ಯೆಯನ್ನು ಖಡ್ಡಾಯವಾಗಿ ಪಡೆದು ಪಿ.ಒ.ಎಸ್. (PಔS) ಯಂತ್ರದ ಮೂಲಕ ವಿತರಣೆ ಮಾಡಲು ಸೂಚಿಸಿದರು ಹಾಗೂ ಯೂರಿಯಾ ರಸಗೊಬ್ಬರವನ್ನು ರೈತರ ಅವóಷ್ಯಕತೆಯನ್ನು ಪರೀಗಣಿಸಿ ಪ್ರತಿಯೊಬ್ಬ ರೈತರಿಗೂ 2 ಚೀಲಗಳಂತೆ ಮೀತಿಗೊಳಿಸಿ ಬಿಲ್ಲು ನೀಡುವುದರ ಮೂಲಕ ಖಡ್ಡಾಯವಾಗಿ ಪಾಲಿಸಬೇಕು
ರೈತರು ಹಿಂದಿನಿಂದಲೂ ಬೆಳೆಗಳಿಗೆ ಹರಳು ರೂಪದ ಯೂರಿಯಾ ರಸಗೊಬ್ಬರಗಳನ್ನು ಹಾಕುತ್ತಾ ಬಂದಿದ್ದಾರೆ ಮತ್ತು ಪ್ರಸ್ತುತ ಮೆಲ್ಗೋಬ್ಬರವಾಗಿ ಹರಳು ಯೂರಿಯಾವನ್ನು ಬಳಸುತ್ತಿದ್ದಾರೆ, ಇದರಿಂದ ಭೂಮಿ ಫಲವತ್ತತೆ ಸಂಪೂರ್ಣ ನಾಶವಾಗುತ್ತಿದೆ, ಭವಿಶ್ಯದಲ್ಲಿ ಹೀಗೆ ರಸಗೊಬ್ಬರವನ್ನು ಹೆಚ್ಚಾಗಿ ಬಳಸಿದರೆ ಫಲ ನೀಡುವ ಭೂಮಿ ಬರಡಾಗಬಹುದು, ಪರಿಸರದ ಮೇಲೆ ಪರಿಣಾಮ ಹಾಗೂ ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರ ಎಂದು ಹೇಳಿದರು. ದೇಶದ ನವೀನ ತಾಂತ್ರಿಕತೆಯ ಉತ್ಪಾದನೆಯಾದ ದ್ರವರೂಪದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಬಳಸಿದರೆ ಕಡಿಮೆ ಖರ್ಚಿನಲ್ಲಿ, ಉತ್ತಮ ಇಳುವರಿಯನ್ನು ತಂದು ಕೊಡುತ್ತದೆ ಎಂದು ತಿಳಿಸಿದರು.
ಜಂಟಿ ತಪಾಸಣೆ ಸಮಯದಲ್ಲಿ ಅವಳಿ ತಾಲ್ಲೂಕಿನ ತಹಶೀಲ್ದಾರರಾದ ಕವಿರಾಜ್ ಎಂ.ಪಿ, ರಾಜೇಶ್ ಕುಮಾರ್, ಪೋಲಿಸ್ ನೀರಕ್ಷಕರಾದ ಸುನೀಲ್ ಕುಮಾರ್ ಜಿ ಹೆಚ್ , ರವಿ ಎನ್ ಎಸ್, ಸಹಾಯಕ ಕೃಷಿ ನಿರ್ದೇಶಕರಾದ ಬಿ ಎನ್ ವಿಶ್ವನಾಥ್ ಹಾಗೂ ಕೃಷಿ ಅಧಿಕಾರಿಗಳಾದ ಗೀರಿಶ್, ಅಥಿಕ್ ಉಲ್ಲಾ ಹಾಗೂ ಇತರೆÉ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
