ನ್ಯಾಮತಿ: ತಾಲೂಕಿನ ಗೋವಿನಕೋವಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ೨೦೨೪- ೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಇಂದು ಜರುಗಿತು.
ಹಾಲು ಉತ್ಪಾದಕರ ರೈತರಿಗೆ ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಲಾಗುವುದು ಸರ್ವ ಸದಸ್ಯರ ನೇತೃತ್ವದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಯು ಎಸ್ ನಾಗರಾಜಪ್ಪ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದ ಅವರು ರೈತರಗಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬಂದು ಪ್ರತಿದಿನ ಹಸುವನ್ನು ಸಾಕಿ ಹಾಲನ್ನು ಉತ್ಪಾದಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಸದಾ ಬೆಂಬಲವಾಗಿ ಇರುತ್ತೇನೆ ಎಂದರು. ೨೦೨೪ ೨೫ ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸಿದ ರೈತರುಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನ ವಿತರಿಸಿದರು. ಸಂಘದ ನಿರ್ದೇಶಕ ವಿ ಎಚ್ ರುದ್ರೇಶ್ ಸಭೆ ಉದ್ದೇಶ ಮಾತನಾಡಿದ ಅವರು ೨೦೨೫- ೨೬ ನೇ ಸಾಲಿನ ವಾರ್ಷಿಕ ಮಹಾಸಭೆಗೆ ಆಹ್ವಾನ ನೀಡುವ ಮುನ್ನ ಷೇರುದಾರರ ಆಹ್ವಾನ ಪತ್ರಿಕೆಯಲ್ಲಿ ಕ್ರಮ ಸಂಖ್ಯೆ ಜೊತೆಗೆ ಸ್ಟಿಕರ್ ಲಗತಿಸಬೇಕು ಎಂದು ಸಭೆಯಲ್ಲಿ ತಿಳಿಸಿದಾಗ ಸರ್ವ ಸದಸ್ಯರು ಒಪ್ಪಿಗೆಗೆ ಸಮ್ಮತಿಸಿದರು.

ಡಾ. ಸಂಜಯ್ ಕೆಪಿ ಸಹಾಯಕ ವ್ಯವಸ್ಥಾಪಕರು ಶಿ,ಹಾ,ಓ ವಸಂತ್ ಕುಮಾರ್ ಮಾರ್ಗ ವಿಸ್ತರಣಾಧಿಕಾರಿಗಳು ವಿ,ಹಾ,ಓ ಉಪಾಧ್ಯಕ್ಷರು ಲಕ್ಷ್ಮಿ ಬಿ, ನಿರ್ದೇಶಕರು ಎಸ್ ಸಿದ್ದೇಶ್, ವಿ ಎಚ್ ರುದ್ರೇಶ್, ಎಚ್ ಆನಂದಪ್ಪ, ಎಸ್ ಬಾನಪ್ಪ ,ಜಿ ಪರಮೇಶ್ವರಪ್ಪ, ನಾಗರಾಜಪ್ಪ, ಹೆಚ್,ಸಿ ಶಾರದ, ಸುಜಾತ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ ಎಂ ರಾಹುಲ್, ಹಾಲು ಪರೀಕ್ಷಕ ಎಂ ಮೈಲಾರಪ್ಪ, ಗೌರವ ಸಲಹೆಗಾರ ವಿ ಆರ್ ವೀರೇಶ್, ಷೇರುದಾರರು ಸಹ ಭಾಗವಹಿಸಿದ್ದರು.
