ಹೊನ್ನಾಳಿ : 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಗುಚ್ಚ ಪ್ರಾತ್ಯಾಕ್ಷಿಕೆ ಯೋಜನೆಯಡಿಯಲ್ಲಿ ಎಸ್.ಮಲ್ಲಾಪುರ ,ಹೊನ್ನೂರು ವಡ್ಡರಹಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಇಲಾಖೆಯಿಂದ ವಿಶಿಷ್ಟ (ಟಿಸಿಜಿಎಸ್-1694) ತಳಿಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು ಮಳೆಯಾಶ್ರಿತ ಪ್ರದೇಶದಲ್ಲಿ ಉತ್ತಮವಾಗಿ ಬಂದಿದ್ದು ರೈತರು ಉತ್ತಮ ಇಳುವರಿಯ ಜೋತೆಯಲ್ಲಿ ಉತ್ಕøಷ್ಟ ಮೇವಿನ ನಿರಿಕ್ಷೆಯಲ್ಲಿದ್ದಾರೆ.
ಕೇಂದ್ರ ಪುರಸ್ಕøತ ಯೋಜನೆಯಡಿಯಲ್ಲಿ ಈ ವರ್ಷ ರೈತರಿಗೆ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗಿದ್ದು, ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಬೆಳೆಯು ಹಲುಸಾಗಿ ಬೆಳೆದಿದೆ. ಈ ಯೋಜನೆಯು ಎರಡು ಅಂಶಗಳನ್ನು ಹೊಂದಿದೆ ಒಂದು ಮಣ್ಣಿನ ಆರೋಗ್ಯ ಮತ್ತು ಮನುಷ್ಯನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಎಣ್ಣೆ ಕಾಳು ಬೆಳೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ, ಇದರಿಂದ ದೇಶದಲ್ಲಿ ಖಾದ್ಯ ತೈಲದ ಉತ್ಪಾದನೆ ಹೆಚ್ಚಾಗಿ ನಮ್ಮ ಖಾದ್ಯತೈಲವನ್ನು ನಾವೆ ಬಳಸಿಕೊಂಡು ಕಲಬೆರೆಕೆ ಎಣ್ಣೆಗಳಿಂದ ನಮ್ಮ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿÀ ಈ ಯೋಜನೆಯು ಸಹಕಾರಿಯಾಗಿದೆ. ಎಣ್ಣೆ ಕಾಳು ಬೆಳೆಗಳಿಂದ ನಮ್ಮ ಭೂಮಿ ಫಲವತ್ತತೆಯ ಹೆಚ್ಚಾಗುವ ಜೊತೆಗೆ ನಾವು ಬೆಳೆದ ಬೆಳಯಿಂದ ಖಾದ್ಯ ತೈಲ ಬಳಸಿದ್ದಲ್ಲಿ ನಮ್ಮಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಕಲಬೆರಕೆ ಎಣ್ಣೆಗಳಿಂದಾಗುವ ಸಮಸ್ಯೆಗಳನ್ನು ತಡೆಯಬಹುದು, ಶೇಂಗಾ ಬೆಳೆಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಣ್ಣಿನ ಆರೋಗ್ಯವನ್ನು ಸುದಾರಿಸುತ್ತದೆ. ಇದು ಸಾರಜನಕವನ್ನು ಮಣ್ಣಿನಲ್ಲಿ ಸ್ವಿಕರಿಸುತ್ತದೆ ಮತ್ತು ಸಾವಯುವ ಪದಾರ್ಥಗಳನ್ನು ಸೇರಿಸುತ್ತದೆ, ಇದು ಮಣ್ಣಿನ ರಚನೆ ಮತ್ತು ತೇವಾಂಶದಾರಣ ಸಾಮಥ್ರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಶೇಂಗಾ ಸಸ್ಯಗಳು ಮಣ್ಣಿನಲ್ಲಿ ಸಾರಜನಕವನ್ನು ಸ್ಥರೀಕರಿಸುವ ಬ್ಯಾಕ್ಟೆರಿಯಾಗಳೊಂದಿಗೆ ಸಹಜೀವನ ಸಂಬಂಧವನ್ನು ಹೊಂದಿವೆ. ಈ ಬ್ಯಾಕ್ಟೇರಿಯಾಗಳು ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಸಸ್ಯಗಳಿಗೆ ಲಭೈವಾಗುವಂತೆ ಮಾಡುತ್ತವೆ, ಇದು ಮಣ್ಣಿನ ಸಾರಜನಕ ಅಂಶವನ್ನು ಹೆಚ್ಚಿಸುತ್ತದೆ ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪಡೆದುಕೊಂಡು ಉತ್ತಮ ಮಳೆಯಿಂದ ಈ ವರ್ಷ ಬೆಳೆಯನ್ನು ಬೆಳೆದಿದ್ದೇವೆ ಉತ್ತಮ ಇಳುವರಿಯ ಜೊತೆಯಲ್ಲಿ ನಮಗೆ ಹಾಲು ಹಿಂಡುವ ರಾಸುಗಳಿಗೆ ಪೌಷ್ಟಿಕ ಹೊಟ್ಟು ಸಿಗುವ ನಿರೀಕ್ಷೆಯಲ್ಲಿದ್ದೇವೆ ಮತ್ತು ಬೆಳೆ ಬದಲಾವಣೆಯಿಂದ ಮುಳ್ಳು ಸಜ್ಜೆಯ ಸಮಸ್ಯೆ ಕೂಡ ಇಲ್ಲ ಮುಂದಿನ ಬೆಳೆ ಹಿಂಗಾರಿ ಜೋಳ ಹಾಕಿದರೆ ಅದು ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ದೊಡ್ಡೇರಹಳ್ಳಿ ಗ್ರಾಮದ ರೈತ ವಸಂತಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
