ಹೊನ್ನಾಳಿ : 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರರಾಂಭವಾಗಿದ್ದು ಇದರ ಯಾಪ್ ಬಿಡುಗೊಡೆಯಾಗಿದ್ದು ಗೊಲ್ಲರಹಳ್ಳಿ ಗ್ರಾಮದಲ್ಲಿ ಖಾಸಗಿ ನಿವಾಸಿಯವರು ಬೆಳೆಯ ಛಾಯ ಚಿತ್ರ ಸೆರೆಹಿಡಿಯುವ ಸಮಸ್ಯೆಯನ್ನು ಕ್ಷೇತ್ರ ಮಟ್ಟÀದಲ್ಲೆ ಪರಿಶೀಲಿಸಿ ಅದಕ್ಕೆ ತಾಂತ್ರಿಕ ಪರಿಹಾರದ ಮಾಹಿತಿ ತಿಳಿಸಿ ಮಾತನಾಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು ರೈತರು ತಾವು ಬೆಳೆದ ಬೆಳೆಯ ಸಮೀಕ್ಷೆಯನ್ನು ತಮ್ಮ ತಮ್ಮ ಗ್ರಾಮಗಳ ಪಿ.ಆರ್ (ಖಾಸಗಿ ನಿವಾಸಿ) ಗಳ ಜೋತೆಯಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸಮೀಕ್ಷೆÉ ಮಾಡಿಸಿಕೊಂಡು ಪಹಣಿಯಲ್ಲಿ ಬೆಳೆ ನಮೂದಾಗುವ ಹಾಗೆ ಜವಾಬ್ದಾರಿ ವಹಿಸಿಲು ತಿಳಿಸಿದರು. ಬೆಳೆÉ ವಿಮೆ ,ಬೆಳೆ ಸಾಲ, ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನ ಮಾರಲು ಮತ್ತು ಬೆಳೆ ಪರಿಹಾರಕ್ಕಾಗಿ ಮೊಬೈಲ್ ಬೆಳೆ ಸಮೀಕ್ಷೆ ಮಹತ್ತರವಾದ ಪಾತ್ರವಹಿಸಿದ್ದು ಇದರ ಉಪಯೋಗ ಮಾಡಿಕೊಳ್ಳಬೆಕೆಂದು ಸಲಹೆ ನೀಡಿದರು. ಕೃಷಿ ಅಧಿಕಾರಿ ಅತೀಕ್ ಉಲ್ಲಾ ಮಾತನಾಡಿ ಖಾಸಿ ನಿವಾಸಿಗಳು ನಮೂದಿಸಿರುವ ಬೆಳೆಯನ್ನು ಪರಿಶೀಲಿಸಲು ಪ್ಲೆ ಸ್ಟೋರ್ ನಲ್ಲಿ ಬೆಳೆ ದರ್ಶಕ್ ಯಾಪ್ ಡೌನಲ್ಲೋಡ ಮಾಡಿಕೊಂಡ ತಮ್ಮ ಜಮೀನಿನಲ್ಲಿ ಬೆಳೆ ನಮೂದಾಗಿರುವ ಕುರಿತು ಸ್ವತಃ ರೈತರೆ ಪರಿಶೀಲನೆ ಮಾಡಿಕೊಳ್ಳಬಹದು ಒಂದು ವೇಳೆ ಬೆಳೆ ವ್ಯತ್ಯಾಸವಾಗಿದಲ್ಲಿ ಆಕ್ಷೇಪಣೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ನೇಮಿಸಿರುವ ಮೇಲ್ವಿಚಾರಕರ ಮೂಲಕ ಬೆಳೆಯನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದರು ಈ ಗೊಲ್ಲರಹಳ್ಲಿ ಗ್ರಾಮದ ಖಾಸಗಿ ನಿವಾಸಿ ಸಂಜೀವ್ , ಸಂಜೀವಿನಿ ವಾಹನ ಚಾಲಕ ಮಂಜುನಾಥ್ ಮತ್ತು ಇತರರು ಹಾಜರಿದ್ದರು.
