ನ್ಯಾಮತಿ: ಒಳ ಮೀಸಲಾತಿಯಲ್ಲಿ ಬಣಜಾರ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ತಾಲೂಕು ಬಣಜಾರ ಸಮಾಜದ ಸೇವಾ ಸಂಘದ ಮುಖಂಡರುಗಳಿಂದ ಶುಕ್ರವಾರ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ತೆರಳಿ ಕಾಟಿ ಹಿಡಿದು ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂಟಪ ಬಳಿ ನೂರಾರು ಬಣಜಾರ ಕೊರಚ ಕೊರಮ ಬೋವಿ ಸಮಾಜದ ಬಾಂಧವರು ಜಮಾಯಿಸಿ, ಕೆಂಪು ಮತ್ತು ಬಿಳಿ ಕಾಟಿ ಹಿಡಿದು ತಮಟೆ ಬಾರಿಸುವುದೊಂದಿಗೆ ಉಗ್ರವಾದ ಪ್ರತಿಭಟನಾ ಮೆರವಣಿಗೆ ಮೂಲಕ ತಹಿಸಿಲ್ದಾರ್ ಕಚೇರಿ ತಲುಪಿ ತಾಲೂಕು ದಂಡಾಧಿಕಾರಿ ಕವಿರಾಜ್ ಎಂ.ಪಿ. ರವರಿಗೆ ಸರಕಾರಕ್ಕೆ ತಕ್ಷಣವೇ ತಲುಪಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ನಾಯ್ಕ ಮುಸೇನಾಳ ಮಾತನಾಡಿ, ಒಳ ಮೀಸಲಾತಿಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ತಲಾ ಶೇ.6ರಷ್ಟು ಮೀಸಲಾತಿ ನೀಡಲಾಗಿದೆ. ಉಳಿದ 59 ಸೇರಿದಂತೆ ಈ ನಾಲ್ಕು ಜಾತಿಗಳಿಗೆ ಕೇವಲ ಶೇ.5ರಷ್ಟು ಒಳಮೀಸಲಾತಿ ನೀಡಲಾಗಿದೆ. ಇದನ್ನು ನಾಲ್ಕು ಸಮುದಾಯಗಳಿಗೆ ಘೋರ ಅಪರಾಧವನ್ನು ಈ ಸರ್ಕಾರ ಮಾಡಿದೆ . ಸಚಿವ ಸಂಪುಟದಲ್ಲಿ ಜಾರಿ ಮಾಡಿರುವ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈಗಾಗಲೇ ಸಾಮಾಜಿಕ , ಆರ್ಥಿಕ , ನಿರುದ್ಯೋಗದಿಂದ ಬಳಲುತ್ತಿರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಮಾರಕ ವಾಗಿದೆ ಎಂದು ತಿಳಿಸಿ.
‘ಜನ ಸಂಖ್ಯೆಗೆ ಅನುಣವಾಗಿ ಜಾರಿ ಆಗಬೇಕಿದ್ದು ಒಳಮೀಸಲಾತಿಯನ್ನು ಪ್ರಭಾವಿ ಸಮಾಜದ ಒತ್ತಡಕ್ಕೆ ಮಣಿದು 63 ಜಾತಿಗಳನ್ನು ಸೇರಿಸಿ ಕೇವಲ ಶೇ.5 ಒಳ ಮೀಸಲಾತಿ ನೀಡಿದ್ದು ಈ ಸಮುದಾಯಗಳಿಗೆ ಮಾಡಿದ ಘೋರ ಅಪರಾಧವಾಗಿದೆ. ಬಂಜಾರ ಸಮುದಾಯ ಶೇ.90ರಷ್ಟು ಜನ ಕಟ್ಟಿಗೆಯನ್ನ ಹೊಡೆದು ಬದುಕನ್ನ ಸಾಗಿಸುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಳಮೀಸಲಾತಿ ಬಿಲ್ ವಾಪಸ್ ಪಡೆದು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದರು.

, ದುದ್ಯಾನಾಯ್ಕ, ಭೋಜ್ಯಾ ನಾಯ್ಕ್ ,ಗೋಪಾಲ್ ನಾಯ್ಕ್, ತತ್ಯಾ ನಾಯ್ಕ, ಕಾರ್ಯದರ್ಶಿ ಸಂತೋಷ್ ನಾಯ್ಕ , ಪ್ರಭುದೇವ ನಾಯ್ಕ, ಗಿರೀಶ್ ನಾಯ್ಕ, ಸುರೇಂದ್ರ ನಾಯ್ಕ್, ಮಾರುತಿ ನಾಯ್ಕ ಸೇರಿದಂತೆ ಸಮಾಜದ ಹಿರಿಯರು ಕಿರಿಯರು ಮುಖಂಡರು ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *