ನ್ಯಾಮತಿ: ತಾಲ್ಲೂಕು ಸವಳಂಗ ಹೊಸಕೆರೆ(ಕಾಯಕಕೆರೆ) ತುಂಬಿ ಕೋಡಿ ಬಿದ್ದಿರುವ ಸಲುವಾಗಿ ಶಾಸಕ ಡಿ.ಜಿ.ಶಾಂತನಗೌಡರು ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಿದರು.
ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆ ಕಳೆದ ವರ್ಷವೂ ಕೋಡಿ ಬಿದ್ದಿದ್ದು. ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದಿರುವುದು ಈ ಭಾಗದ ರೈತರ ಮೊಗದಲ್ಲಿ ಹರ್ಷಮೂಡಿದೆ. ಕೆರೆ ನೀರು ಕೊನೆಯ ಗ್ರಾಮz ಅಚ್ಚುಕಟ್ಟು ಬಳಕೆದಾರರಿಗೆ ಸಮನಾಗಿ ನೀರು ಸಿಗುವಂತೆ ಗಮನಹರಿಸಿ ಎಂದರು.
ಏತ ನೀರಾವರಿ ಯೋಜನೆ ಬಗ್ಗೆ, ಕೆರೆ ತುಂಬಿಸುವ ಯೋಜನೆಗೆ ತಾಂತ್ರಿಕ ತೊಂದರೆಗಳಿದ್ದು. ಆದಷ್ಟು ಬೇಗನೆ ಪರಿಹರಿಸಿ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು.
ಹೊಸ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಸಿ.ಶಿವಕುಮಾರ ನೇತೃತ್ವದಲ್ಲಿ ಕೆರೆ ಬಾಗಿನ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ, ಕಾರ್ಯದರ್ಶಿ ಎಸ್.ಎಂ.ಮಂಜುನಾಥ, ಸದಸ್ಯರಾದ ಚನ್ನಬಸಪ್ಪ, ತೋಟಮ್ಮ, ಮಲ್ಲಿಕಾರ್ಜುನ ಡಿ. ಡಿ.ಎಂ.ಚಂದ್ರಪ್ಪ, ಹಾಲಮ್ಮ, ಕೆ.ಎಂ.ಮೇಲಗಿರಿಯಪ್ಪ, ಸಾಲಬಾಳು ಗೋಪಾಲನಾಯ್ಕ, ಕೆ.ಸುರೇಶ, ಕೆ.ಪಿ.ಪ್ರಕಾಶ, ಸಿದ್ದಪ್ಪ, ಬಿ.ಪರಮೇಶ್ವರಪ್ಪ, ಟಿ.ಕಮಲಮ್ಮ, ಮುಖಂಡರಾದ ಡಿ.ಜಿ.ವಿಶ್ವನಾಥ, ಕರಿಬಸಪ್ಪಗೌಡ,ಎಸ್.ಪಿ.ಚಂದ್ರಶೇಖರಗೌಡ, ಗ್ರಾ.ಪಂ.ಸದಸ್ಯ ಟಿ.ಮಲ್ಲೇಶಪ್ಪ, ದೊಡ್ಡಮನೆ ರಾಜಪ್ಪ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳಾದ ಹರೀಶ, ಮನು ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಪಾಲ್ಗೊಂಡಿದ್ದರು.
