ನ್ಯಾಮತಿ: ಪಟ್ಟಣದಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಮಲೆಬೆನ್ನೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಮುದಾಯ ಆಸ್ಪತ್ರೆ ಮತ್ತು ಕಡ್ಲಿ ಐ ವಿ ಎಫ್ ಸೆಂಟರ್ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಬಂಜೆತನ ನಿವಾರಣ ಶಿಬಿರ ಹಮ್ಮಿಕೊಳ್ಳಲಾಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ಜೆ ಜೆ ಎಂ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯೆ ವರದಾ ಕಿರಣ್ ಸಸಿಗೆ ನೀರು ಉಣಿ ಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಬಂಜೆತನ ಅನ್ನುವುದು ದೇವರ ಶಾಪವಲ್ಲ, ಇದು ಮದುವೆಯಾದ ಎಂಟು ಜೋಡಿಗಳ ಪೈಕಿ ಒಂದು ಜೋಡಿಗೆ ಈ ತರ ಸಮಸ್ಯೆ ಬರಬಹುದು, ಮದುವೆಯಾದ ಒಂದು ವರ್ಷದ ಒಳಗಡೆ ಮಹಿಳೆಯರಿಗೆ ಸಂತಾನ ಭಾಗ್ಯ ಆಗದಿದ್ದರೆ ವೈದ್ಯರನ್ನು ಕಂಡು ಆತ್ಮ ಸಮಾಲೋಚನೆಯ ಮೂಲಕ ಚಿಕಿತ್ಸೆಯನ್ನು ಪಡೆದು ಪರಿಹಾರ ಕಂಡಕೊಳ್ಳಬಹುದು. ವೈದ್ಯ ಲೋಕದಲ್ಲಿ ವಿಜ್ಞಾನ ಬಹಳ ಮುಂದುವರಿದಿದು,್ದ ಮಹಿಳೆಯರು ಮತ್ತು ಪುರುಷರು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು. ಪುರುಷರು ತಂಬಾಕು, ಗುಟುಕ, ಮದ್ಯಪಾನ, ದುಶ್ಚಟಕ್ಕೆ ಒಳಗಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಕ್ಕಳ ಹುಟ್ಟುಗೆ ಮಾರಕವಾಗಬಹುದು ಎಂದರು .
ಕಸಾಪದ ಅಧ್ಯಕ್ಷ ಡಿ ಎಂ ಹಾಲಾರಾಧ್ಯ ಮಾತನಾಡಿ ಬಂಜೆತನಕ್ಕೆ ಒಳಗಾದ ಪ್ರತಿಯೊಬ್ಬ ಮಹಿಳೆಯರು ಬಂಜೆತನ ನಿವಾರಣ ಸಮಾಲೋಚನೆ ಶಿಬಿರಕ್ಕೆ ಬಂದು ವೈದ್ಯರಿಂದ ಸಲಹೆ ಸೂಚನೆಯೊಂದಿಗೆ ಬಂಜೆತನ ನಿವಾರಣೆ ಮಾಡಿಕೊಳ್ಳುವುದು ಸಂತಸ ತಂದಿದೆ ಎಂದರು. ಸುಮಾರು 17ಕ್ಕಿಂತ ಹೆಚ್ಚು ಮಹಿಳೆಯರು ವೈದ್ಯರಿಂದ ಬಂಜೆತನ ಮತ್ತು ಆತ್ಮ ಸಮಾಲೋಚನೆಯಲ್ಲಿ ಭಾಗವಹಿಸಿ ವೈದ್ಯರಿಂದ ಮಾಹಿತಿ ಪಡೆದರು.
ತಾಲೂಕು ಆರೋಗ್ಯ ಅಧಿಕಾರಿ ರೇಣುಕಾ ಮೆಣಸಿನ ಕಾಯಿ, ಸ್ರೀ ತಜ್ಞ ತೇಜಸ್ವಿ, ಮಕ್ಕಳ ತಜ್ಞ ರವಿಕುಮಾರ,ಸಿದ್ದಪ್ಪ ಸಿರಿಗೆರೆ ಅಧ್ಯಕ್ಷರು ಲಯನ್ಸ್ ಕ್ಲಬ್ ಮಲೆಬೆನ್ನೂರು, ಕಾರ್ಯದರ್ಶಿ ಹುಳ್ಳಳ್ಳಿ ಸಿದ್ದೇಶ್, ನಾಗರಾಜ ಬಿ ಚಿಟ್ಟಕ್ಕಿ, ಆರೋಗ್ಯ ಸಮಿತಿಯ ಸದಸ್ಯರು ಗೀತಾ, ಉಮೇಶ ರೆಡ್ಡಿ, ಜಗದೀಶ್, ಕವಿರಾಜ್, ಚಂದು ಜಂಗ್ಲಿ, ಸುಸ್ರೂಷಕರು ಅನಿತಾ, ದೀಪ, ಜ್ಯೋತಿ, ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು, ಮತ್ತು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳು ಭಾಗವಹಿಸಿದ್ದರು
ನ್ಯಾಮತಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಬಂಜೆತನ ನಿವಾರಣ ಸಮಾಲೋಚನೆ ಶಿಬಿರ ಕಾರ್ಯಕ್ರಮ.
