ನ್ಯಾಮತಿ ಡಿಸೆಂಬರ್ 11 ತಾಲೂಕಿನ ಗೋವಿನಕೋವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದಿಗೆ ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದೆಗೆ ಚಂದ್ರಶೇಖರ್ ಎ ಎಸ್ ಉಪಾಧ್ಯಕ್ಷರಗಾದೆಗೆ ನಾಗರಾಜ್ ಪಿ ಬಿ ಬಸವನಹಳ್ಳಿ ಇವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ್ ಎ ಎಸ್ ಉಪಾಧ್ಯಕ್ಷರಾಗಿ ನಾಗರಾಜ್ ಪಿ ಬಿ ಬಸವನಹಳ್ಳಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಗಳು ಹಾಗೂ ಹೊನ್ನಾಳಿ ಸಿಡಿಓ ನವೀನ್ ರವರು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಡಿಸಿಸಿ ಬ್ಯಾಂಕಿನ ಜಿಲ್ಲಾ ನಿರ್ದೇಶಕರುಗಳಾದ ಡಿಎಸ್ ಸುರೇಂದ್ರ ಡಿಜಿ ವಿಶ್ವನಾಥರವರು ಶುಭ ಹಾರೈಸಿದ್ದಾರೆ.
ನಿರ್ದೇಶಕರು ಶಿವಕುಮಾರ್, ಮಂಜಪ್ಪ ಯಾಲಕ್ಕಿ, ಕುಮಾರಸ್ವಾಮಿ, ಲಲಿತಮ್ಮ ಎಕೆ,
ಸಿದ್ದಪ್ಪ ಎಸ್, ಲಲಿತಮ್ಮ, ರತ್ನಮ್ಮ, ಮಹೇಶ್ವರಪ್ಪ, ಧನಂಜಯ್, ಕೇಶವಮೂರ್ತಿ, ಮಾಜಿ ಅಧ್ಯಕ್ಷರಾದ ವಿ ಎಚ್ ರುದ್ರೇಶ್, ಸೂಪರ್ವೈಸರ್ ಪಾಲಾಕ್ಷ, ಕಾರ್ಯದರ್ಶಿ ಜಗದೀಶ್,ಸುತ್ತಮುತ್ತಲಿನ ಗ್ರಾಮದ ರೈತಾಪಿ ವರ್ಗದವರು ಸಹ ಭಾಗವಹಿಸಿದ್ದರು.

Leave a Reply

Your email address will not be published. Required fields are marked *