ದಾವಣಗೆರೆ ಡಿಸೆಂಬರ್ 17 : ಕೇಂದ್ರ ಪುರಸ್ಕೃತ ಅಮೃತ್ ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮದಡಿ ಪುರಸಭೆ ಮಲೇಬೆನ್ನೂರು ವ್ಯಾಪ್ತಿಯಲ್ಲಿನ ಉದ್ಯಾನವನ ನಿರ್ವಹಣೆ, ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ನೀರು ಶುದ್ದೀಕರಣ ಘಟಕಗಳ ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ರಚಿಸಲಾದ ಅರ್ಹ ಮಹಿಳಾ ಸ್ವ ಸಹಾಯ ಸಂಘಗಳಿಂದ ಒಂದು ವರ್ಷದ ಅವಧಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮಹಿಳಾ ಸ್ವ ಸಹಾಯ ಸಂಘಗಳು ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು ಪ್ರಸ್ತಾವವನ್ನು ಮುಚ್ಚಿದ ಲಕೋಟೆಯಲ್ಲಿ ಡಿಸೆಂಬರ್ 26 ರೊಳಗಾಗಿ ಪುರಸಭೆ ಕಚೇರಿಯಲ್ಲಿ ಸಲ್ಲಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ನಿರಂಜನಿ.ಹೆಚ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *