ದಾವಣಗೆರೆ, ಡಿಸೆಂಬರ್ 21 :ಇಂದು ಜಿಲ್ಲಾಮಟ್ಟದ 2025 ಡಿಸೆಂಬರ್ 21ರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ದಾವಣಗೆರೆಯ ಎಸ್.ಎಂ.ಕೆ ನಗರ ಆರೋಗ್ಯ ಕೇಂದ್ರದಲ್ಲಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ದಾವಣಗೆರೆ ಇವರು 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕುವುದರ ಮೂಲಕ ಉದ್ಘಾಟಿಸಿದರು. ಇವರೊಂದಿಗೆ ಡಾ|| ಚಂದ್ರಶೇಖರ್, ರಾಜ್ಯ ಮಟ್ಟದ ಜಿಲ್ಲಾ ನೋಡಲು ಅಧಿಕಾರಿಗಳು, ಡಾ|| ಷಣ್ಮುಖಪ್ಪ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಆರ್.ಸಿ.ಎಚ್.ಒ ,ಎ ಎಂ ಓ, ಆರೋಗ್ಯ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
