ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕು ಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ರೂ49 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರು ಯೋಜನೆ ಸೆಪ್ಟೆಂಬರ್ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ದಾವಣಗೆರೆ (ಸಿಇಒ) ಜಿಪಂ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಅವರು ಬುಧವಾರ ಬೆಳಗ್ಗೆ ಹೊಸಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಜಾಕ್ವೆಲ್ ಹಾಗೂ ಪಂಪ ಹೌಸ್ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ಹೋಗುವಂತೆ, ಗುತ್ತಿಗೆದಾರ ಮತ್ತು ಇಲಾಖೆ ಇಂಜಿನಿಯರ್ ಗಳಿಗೆ ಸೂಚಿಸಿ ಮಾತನಾಡಿದರು.
ಇದಕ್ಕೂ ಮೊದಲು ಹೊನ್ನಾಳಿ ತಾಲೂಕು ಕ್ಯಾಸಿನಕೆರೆ, ಹುಣಸಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಸತಿ ರಹಿತರ ಕುಂದು ಕೊರತೆ ಆಲಿಸಿ, ಸರ್ಕಾರಿ ಶಾಲೆ, ಆಸ್ಪತ್ರೆ, ಗ್ರಂಥಾಲಯಗಳಿಗೆ ಭೇಟಿಕೊಟ್ಟು, ಜಲಜೀವನ್ ಮಿಷನ್ ನಳಗಳ ಪರಿಶೀಲನೆ ನಡೆಸಿದರು.
ಜೊತೆಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಎಇಇ ಸೋಮಲಾನಾಯ್ಕ್, ಎಇ ಕಿರಣ್, ಹೊನ್ನಾಳಿ ತಾಪಂ ಇಓ ಡಿ.ಜಿ.ಅಶೋಕ್ ಕುಮಾರ್, ಗ್ರಾಪಂ ಪಿಡಿಒ ಗಳಾದ ಹೆಚ್.ಎಸ್.ಶಿವಕುಮಾರ್, ಬಿ.ಧನಪತಿ, ಕಾರ್ಯದರ್ಶಿ ಪಾಲಕ್ಷಪ್ಪ, ನಾಗರಾಜ್ ಇದ್ದರು.

Leave a Reply

Your email address will not be published. Required fields are marked *