ವೀರಭದ್ರೋ ಯಥಾ ರುದ್ರಸ್ತ÷್ವನ್ಯೇಚ ಗುರುವಃ ಸ್ಮೃತಾಃ |
ಗುರುರ್ಜಾತಾಶ್ಚ ಗುರುವೋ ವಿಖ್ಯಾತಾ ಭುವನತ್ರಯೇ ||
ಜಾನಪದ, ಬದುಕಿನ ರೀತಿಯನ್ನು ಬಿಂಬಿಸುವ ಜೀವಂತ ವ್ಯವಸ್ಥೆ, ಸಂಸ್ಕೃತಿಯ ಅವಿಭಾಜ್ಯ ಅಂಗ. ನಂಬಿಕೆ, ನಡವಳಿಕೆ, ವೇಷ-ಭೂಷಣ, ಕುಣಿತ, ಹಬ್ಬಗಳನ್ನು ಒಳಗೊಂಡಿದೆ. ಇದು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟಿದೆ. ಜನರನ್ನು ರಂಜನೆಯ ತುತ್ತತುದಿಗೇರಿಸಿ ಮನಸ್ಸಿಗೆ ಸಂಸ್ಕಾರ ಕೊಡುವ ಕಲೆ. ಶೈವ ಸಂಪ್ರದಾಯದ ಒಂದು ಗಂಡು ಕಲೆ ವೀರಗಾಸೆ ಅಥವಾ ಗುಗ್ಗಳ. ಇದು ಹುಟ್ಟಿದ್ದು ದೇವತಾ ಕೈಂಕರ್ಯಕ್ಕೆ ಎನ್ನಬಹುದು.
ವೀರಭದ್ರನ ಇತಿಹಾಸ ಶಾಸ್ತೊçÃಕ್ತವಾಗಿ ಲಭಿಸುವದು ೪ ನೇ ಶತಮಾನದ ಶಿಲ್ಪಗಳಲ್ಲಿ. ಬಾದಾಮಿ ಚಾಲುಕ್ಯ, ಚೋಳ, ಕದಂಬ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರ ಶಾಸನಗಳಲ್ಲಿ ಮತ್ತು ವಿಗ್ರಹಗಳಲ್ಲಿ ವೀರಭದ್ರನ ಕುರಿತು ಉಲ್ಲೇಖಗಳು ಕಂಡುಬರುತ್ತವೆ.
ಪರಶಿವನ ಅನಂತ ಲೀಲೆಗಳಲ್ಲಿ ವೀರಭದ್ರಾವತಾರ ಒಂದು. ಅಹಂಕಾರಿಯೂ, ಶಿವದ್ವೇಷಿಯೂ ಆದ ದಕ್ಷಬ್ರಹ್ಮನ ಸಂಹಾರಕ್ಕೆ ಶಿವನ ಉರಿನೇತ್ರದಿಂದ ವೀರಭದ್ರಸ್ವಾಮಿಯು ಅವತರಿಸಿದನು. ಹೀಗಾಗಿ ವೀರಭದ್ರೇಶ್ವರ ದುಷ್ಟರಿಗೆ ರೌದ್ರರೂಪಿಯಾಗಿ, ಶಿಷ್ಟರಿಗೆ ಶಾಂತರೂಪಿಯಾಗಿ ಪ್ರತಿಷ್ಠಾಪಿತನಾಗಿದ್ದಾನೆ. ವೀರಭದ್ರೇಶ್ವರನ ಹುಟ್ಟಿನ ಬಗ್ಗೆ, ಅವನ ಸಾಹಸದ ಬಗ್ಗೆ, ಪುರವಂತರು, ರುದ್ರನಂತೆ ವೇಷ ಧರಿಸಿ, ಕಾವಿ ಅಂಗಿ, ಕಾವಿ ರೇಷ್ಮೆ ಪಂಚೆ, ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ತಲೆಗೆ ಬಿಳಿ ಚೌರಿ, ಕಿರೀಟ, ಕಾವಿ ಬಣ್ಣದ ಕಸೆಯಂಗಿ, ಕೊರಳಿಗೆ ರುದ್ರಾಕ್ಷಿ ಮಾಲೆ, ತೋಳಿಗೆ ಬೆಳ್ಳಿ ನಾಗರ ಹೆಡೆ, ಸೊಂಟದಲ್ಲಿ ದಕ್ಷ ಬ್ರಹ್ಮನ ಶಿರ, ಹಣೆಗೆ ವಿಭೂತಿ, ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಲಿಂಬೆ ಹಣ್ಣು ಚುಚ್ಚಿದ ಶಸ್ತç ಹಿಡಿದು ಬಂದು ಒಡಪುಗಳನ್ನು ವೀರಭದ್ರ ದೇವರ ಕುರಿತು ಹೇಳುತ್ತಾರೆ. ಸಮಾಳು ಬಾರಿಸುವ ವ್ಯಕ್ತಿಯ ಮುಂದೆ ಪರಾಕು ಹೇಳುತ್ತ ಕತ್ತಿ ಹಿಡಿದು ಸಮಾಳಗಳ ಗತ್ತಿಗೆ ತಕ್ಕಂತೆ ರುದ್ರಾವೇಷದಿಂದ ಕುಣಿತ ನೃತ್ಯವೇ ವೀರಗಾಸೆ. ವೀರಭದ್ರನ ಕಥೆ ಹೇಳುತ್ತ ಮಧ್ಯದಲ್ಲಿ “ಅಹಹ ರುದ್ರಾ… ಅಹಹ ದೇವಾ .. ಅಹಹಾ ವೀರ.. ಅಹಹ ಶಂಭುವೇ” ಎಂದು ಹೇಳುತ್ತ ವಚನ ರೂಪದ ಕಥೆ ಹೇಳುವರು. ಮಧ್ಯೆ ನಿಲ್ಲಿಸಿ “ಖಡೆ ಖಡೆ “ ಎಂದು ಹೇಳಿ ಹುರುಪು ತುಂಬಿಸುವರು. ದೇವರ ಬಗ್ಗೆ ಭಾವನೆಯನ್ನು ಅಭಿವ್ಯಕ್ತಗೊಳಿಸುವ ಸ್ವಂತಿಕೆ, ಸೃಜನಶೀಲತೆಗೆ ಆಸ್ಪದ ನೀಡುವ ಒಂದು ವಿಶಿಷ್ಟ ಕಲೆ. ಈ ಕಲೆ ದೇವರಿಗರ್ಪಿಸಿದ ನೈವೇದ್ಯದ ಹಾಗೆ.
ಕರ್ನಾಟಕದಾದ್ಯಂತ ಅನೇಕ ವೀರಭದ್ರ ದೇವಾಲಯಗಳಿವೆ. ಹಳೇಬೀಡು ವೀರಭದ್ರ, ರಂಭಾಪುರಿ ಪೀಠದ ವೀರಭದ್ರ, ಹೊನ್ನಾಳಿ ಹಿರೇಕಲ್ಮಠದ ವೀರಭದ್ರ, ಕೆಳದಿ-ಇಕ್ಕೇರಿ ವೀರಭದ್ರ, ಲಕ್ಕುಂಡಿ ಕೋಟೆ ವೀರಭದ್ರ, ಹಾಸನ ಜಿ. ಹಲ್ಮಿಡಿ ವೀರಭದ್ರ, ಬಳ್ಳಾರಿ ಜಿ. ಕುರಗೋಡಿನ ಪಂಚಮುಖಿ ವೀರಭದ್ರ, ಕಾರಡಗಿ ವೀರಭದ್ರ, ಗೊಡಚಿ ವೀರಭದ್ರ, ಕೊಡದಗುಡ್ಡ ವೀರಭದ್ರ, ಬೆಂಗಳೂರಿನ ಪ್ರಳಯ ವೀರಭದ್ರ ಮುಖ್ಯವಾದವುಗಳು.
.ಹೊನ್ನಾಳಿ ಮಾರಿಕೊಪ್ಪ ರಸ್ತೆಯಲ್ಲಿದ್ದ ಶ್ರೀ ವೀರಭದ್ರÀಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಹೊಂದಿ ೩೧-೦೧-೨೦೨೫ರಂದು ಉದ್ಘಾಟನೆ ಹೊಂದಿದ್ದು, ಈ ಶ್ರೀ ಪೇಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ ೦೨-೧೨-೨೦೨೫ ರಂದು ೧೯ನೇವರ್ಷದ ರುದ್ರಾಭಿಷೇಕ, ಸೆರಬಿ ಗುಗ್ಗುಳ, ಧಾರ್ಮಿಕ ಕಾರ್ಯಕ್ರಮಗಳು ಬ್ರಾಹ್ಮಿ ಮುಹೂರ್ತ ೬-೩೦ ರಿಂದ ಪ್ರಾgಂಭವಾಗುವವು. ಸಂಜೆ ೦೮ ಘಂಟೆಗೆ ಶ್ರೀ ವೀರಭದ್ರಸ್ವಾಮಿಯ ಕಾರ್ತಿಕೋತ್ಸವ ನೆರವೇರುವದು. ಮಹಾ ಪ್ರಸಾದ ವ್ಯವಸ್ಥೆ ಇರುತ್ತದೆ. ಅಲ್ಲದೆ ಪ್ರತಿ ಹುಣ್ಣಿಮೆ ದಿನ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ನಾಮಾವಳಿ ಸ್ತೋತ್ರ ನಡೆಯುವದು. ಶ್ರೀ ಪೇಟೆ ವೀರಭದ್ರಸ್ವಾಮಿ ಪವಾಡ ಪುರುಷನಾಗಿದ್ದು , ಭಕ್ತರಿಗೆ ಹೂವಿನ ಪ್ರಸಾದ ಕರುಣಿಸುವ ಕಲಿಯುಗದ ಕಾಮಧೇನು, ಕಲ್ಪವೃಕ್ಷವಾಗಿದ್ದಾನೆ.
ಚಿಕ್ಕಜೋಗಿಹಳ್ಳಿ ನಾಗರಾಜ್
ಕಲಾವಿದ, ಲೇಖಕ . ಹೊನ್ನಾಳಿ
ಚರವಾಣಿ- ೯೪೪೯೦೯೩೯೦೨
