ದಾವಣಗೆರೆ, ಜನವರಿ-9 – ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಬಾಕು ದಾಳಿ ಕೈಗೊಂಡು, ಜಯದೇವ ಸರ್ಕಲ್ ಮತ್ತು ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿ ಬರುವ ಎಲ್ಲಾ ಅಂಗಡಿ, ಹೋಟೆಲ್‌ಗಳಿಗೆ ಭೇಟಿ ನೀಡಿ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸೆಕ್ಷನ್ 6ಎ ಪ್ರಕಾರ 21 ವರ್ಷದ ಒಳಗಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಾಗೂ ಸೆಕ್ಷನ್ 6ಬಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ಅಂತರದೊಳಗೆ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿ ಕೋಟ್ಪಾದಡಿ 37 ಪ್ರಕರಣಗಳನ್ನು ದಾಖಲಿಸಿ ರೂ.6000/- ದಂಡ ವಿಧಿಸಲಾಗಿದೆ.
ದಾಳಿಯಲ್ಲಿ ಜಿಲ್ಲಾ ಜಾರಿ ಅಧಿಕಾರಿ ಮತ್ತು ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ರುದ್ರಸ್ವಾಮಿ ಎಂ.ಕೆ, ಎನ್.ಟಿ.ಸಿ.ಪಿ., ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ದೇವರಾಜ್ ಪಟಗಿ, ತಾಲ್ಲೂಕು. ಬಡಾವಣೆ ಪೋಲಿಸ್ ಠಾಣೆಯ ಲತಾ ತಾಳೇಕರ್, ಎಸ್.ಬಿ. ರಾಜಪ್ಪ, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಮಲ್ಲಿಕಾ ಗುಡೇಕೋಟೆ, ಲಕ್ಷಿö್ಮÃ ಎನ್.ಟಿ. ಮತ್ತು ಉಷಾ ಹೆಚ್. ಸಮಾಜ ಕಾರ್ಯಕರ್ತರಾದ ಶೈಲಾ ಶಾಮನೂರು, ತಾಲ್ಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ವೆಂಕಟಾಚಲಕುಮಾರ ಟಿ.ಎಸ್. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಉಮಾಪತಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಯಾದ ವಿಜಯಕುಮಾರ್ ಜೆ.ಓ. ದಾವಣಗೆರೆ ದಕ್ಷಿಣ ವಲಯ, ಹಾಜರಿದ್ದರು.

Leave a Reply

Your email address will not be published. Required fields are marked *