ದಾವಣಗೆರೆ ಜನವರಿ 20 ಎಂ.ಎಸ್.ಎಂ.ಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಜನವರಿ 22 ರಂದು ಬೆಳಿಗ್ಗೆ 10.30ಕ್ಕೆ ಹರಿಹರದಲ್ಲಿ ಸೆಲೆಬ್ರೆಷನ್ಸ್ ಫಂಕ್ಷನ್ ಹಾಲ್ನಲ್ಲಿ ಟ್ರೇಡ್ ರಿಸೀವೆಬಲ್ ಡಿಸ್ಕೌಂಟಿಂಗ್ ಸಿಸ್ಟಂ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷರು ಮತ್ತು ಕಾಸಿಯಾ ಸದಸ್ಯರಾದ ಸಿದ್ದನಗೌಡ ಡಿ.ಮುದಿಗೌಡರ ಉದ್ಘಾಟಿಸುವರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್.ಆರ್ ಅಧ್ಯಕ್ಷತೆ ವಹಿಸುವರು.
ಟೆಕ್ಸಾಕ್ ಸಿ.ಇ.ಒ ಮತ್ತು ಮುಖ್ಯ ಸಲಹೆಗಾರರಾದ ಸಿದ್ದರಾಜು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರಾದ ಪಿ.ಸಿ ಹಿರೇಮಠ್, ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಜಂಬಣ್ಣ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ರವಿನಾಯ್ಕ, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ನಿರ್ದೇಶಕರಾದ ಅಣ್ಣಪ್ಪ.ಶಾವಿ, ಪ್ಯಾನಲ್ ಅಧ್ಯಕ್ಷರು ಮತ್ತು ಕಾಸಿಯಾ ಕೌನ್ಸಿಲ್ ಸದಸ್ಯರಾದ ಡಿ.ಸಿ.ಶ್ರೀನಿವಾಸ್, ಮತ್ತು ಮಹೇಶ್ವರಪ್ಪ.ಒ ಉಪಸ್ಥಿತರಿರುವರು.
