ಸಾಸ್ವೆಹಳ್ಳಿ : ಗ್ರಾಮದ ಹೊರಲಯದ ಹಳ್ಳದ ದಡದ ಮೇಲೆ ಜನವರಿ 15ರಂದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪುರುಷನ ಅನಾಮಧೇಯ ಶವ
ಶುಕ್ರವಾರ ಗುರುತು ಪತ್ತೆಯಾಗಿದ್ದು.
ಮೃತ ದುರ್ದೈವಿ ಹೊನ್ನಾಳಿ ತಾಲೂಕು ಭೈರನಹಳ್ಳಿ ಗ್ರಾಮದ ಹಾಲೇಶಯ್ಯನವರ ಪುತ್ರ ಚೇತನ್ (29) ಎನ್ನಲಾಗಿದೆ.
ಮೃತನ ಕೈಯಲ್ಲಿ ಇದ್ದ ಬಿಳಿ ಲೋಹದ ಬ್ರಾಸ್ ಲೈಟ್, ಉಂಗುರ, ಕೊರಳಲ್ಲಿದ್ದ ಜೈನ್ ನಿಂದ ಮೃತರ ಸಂಬಂದಿಗಳು ಘಟನಾ ಸ್ಥಳಕ್ಕೆ ಬಂದು ಗುರುತು ಪತ್ತೆ ಮಾಡಲಾಗಿದ್ದು.
ಕೊಲೆಗೈದು, ಸಾಕ್ಷಾಧಾರಗಳ ನಾಶಕ್ಕಾಗಿ ಶವ ಸುಡುವ ಪ್ರಯತ್ನ ಮಾಡಿರುವುದಾಗಿ ಶಂಕಿಸಲಾಗಿದ್ದು, ಮೃತ ದುರ್ದೈವಿ ಹೊನ್ನಾಳಿ ತಾಲೂಕು ಬೆನಕನಹಳ್ಳಿ ಗ್ರಾಮದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮೃತ ದುರ್ದೈವಿ ಕಳೆದ ಒಂದು ವಾರದಿಂದ ನಾಪತ್ತೆ ಆಗಿದ್ದ ಎನ್ನಲಾಗಿದೆ. ಮೃತ ದೇಹವನ್ನು ಶುಕ್ರವಾರ ಶಿವಮೊಗ್ಗದ ಮೆಗನ್ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆದ ನಂತರ ಹೊನ್ನಾಳಿ ಪೊಲೀಸರು ಸಂಬಂಧಿಗಳಿಗೆ ಮೃತ ದೇಹ ಅಸ್ತಾಂತರ ಮಾಡಿದ ನಂತರ ಅಮೃತರ ಸ್ವಗ್ರಾಮ ಬೈರನಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಘಟನಾಸ್ಥಳಕ್ಕೆ
ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೊನ್ನಾಳಿ ಪಿಐ ಸುನಿಲ್ ಕುಮಾರ್, ಅವರ ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
