ದಾವಣಗೆರೆ,ಜನವರಿ.21: ಅಂಬಿಗ ಚೌಡಯ್ಯನವರ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಶಾಲಾ, ಕಾಲೇಜು ಮಟ್ಟದಲ್ಲಿ ಜಯಂತಿ ಆಚರಿಸಿ ಅವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಶಾಸಕರಾದ ಕೆ.ಎಸ್ ಬಸವಂತಪ್ಪ ಹೇಳಿದರು.
ಬುಧುವಾರ(ಜ.21) ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯವನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಪ್ರತ್ಯೇಕ ವಿಷಯವನ್ನಾಗಿಡಬೇಕು. ಸಮಾಜದಲ್ಲಿ ಹಲವಾರು ಶ್ರಮಿಕ ಸಮುದಾಯಗಳಿದ್ದು ಅದರಲ್ಲಿ ಗಂಗಾಮತ ಸಮುದಾಯ ಕೂಡಾ ಒಂದಾಗಿದೆ. 12ನೇ ಶತಮಾನದಲ್ಲಿ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು, ಕಲ್ಯಾಣದ ಶರಣರು ಅಂತಹವರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕೂಡ ಒಬ್ಬರು ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಸಮಾಜದ ಅಂಕು ಡೊಂಕುಗಳನ್ನು ನಿರ್ಭಿತಿಯಿಂದ ಟೀಕಿಸಿದ ವ್ಯಕ್ತಿ ಅಂಬಿಗರ ಚೌಡಯ್ಯನವರು, ನೇರ ನಿಷ್ಠುರವಾದಿಗಳಾಗಿ ಸಮ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದವರು. ನಿಜಶರಣ ಅಂಬಿಗರ ಚೌಡಯ್ಯ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ರಸ್ತೆಯ ಸುರಕ್ಷತೆ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು. ಮಕ್ಕಳಿಗೆ ವಾಹನ ಚಲಾಯಿಸಲು ತಾವೇ ಪ್ರೋತ್ಸಾಹವನ್ನು ನೀಡಲಾಗುತ್ತಿದೆ, ಇದರಿಂದ ರಸ್ತೆ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ನಿಮ್ಮ ನಿಮ್ಮ ನಾಗರಿಕ ಪ್ರಜ್ಞೆಯನ್ನು ಅರಿತುಕೊಳ್ಳಬೇಕು ಎಂದರು.
ಪ್ರಾಧ್ಯಾಪಕರಾದ ಕಾವ್ಯಾಶ್ರೀ ಅವರು ಪ್ರಾಸ್ತವಿಕ ನುಡಿಗಳಾನ್ನಾಡಿದರು. ವಿಜಯಕುಮಾರ್ ಮತ್ತು ಸಂಗಡಿಗರಿಂದ ಅಂಬಿಗರ ಚೌಡಯ್ಯನವರ ಗೀತೆಗಳನ್ನು ಪ್ರಸ್ತುತ್ತಪಡಿಸಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಜಿ.ಪಂ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಗಂಗಾಮತ ಸಂಘದ ಅಧ್ಯಕ್ಷ ಮಾಗಾನಹಳ್ಳಿ ಮಂಜುನಾಥ ಉಪಸ್ಥಿತರಿದ್ದರು.
filter: 0; fileterIntensity: 0.000000; filterMask: 0; captureOrientation: 0;
hdrForward: 0; shaking: 0.071559; highlight: 1; algolist: 0;
multi-frame: 1;
brp_mask: 8;
brp_del_th: 0.0094,0.0000;
brp_del_sen: 0.1000,0.0000;
delta:null;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 317.0;aec_lux_index: 0;albedo: ;confidence: ;motionLevel: 0;weatherinfo: null;temperature: 38;zeissColor: bright; 