ನ್ಯಾಮತಿ;
ಪಟ್ಟಣದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ನ್ಯಾಮತಿ-ಸುರಹೊನ್ನೆ ವತಿಯಿಂದ ಜ. 26ರಂದು ಹಿಂದು ಸಂಗಮ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಸಂಗಮ ಆಯೋಜನಾ ಸಮಿತಿ ಹೊನ್ನಾಳಿ-ನ್ಯಾಮತಿ ಘಟಕದ ಅಧ್ಯಕ್ಷ ಲಿಂಗರಾಜ ಹವಳದ ತಿಳಿಸಿದರು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ ಪ್ರಭೋದನೆ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಠಾಚಾರ ಇವುಗಳ ಮುಖಾಂತರ ಸ್ವಯಂ ಹಾಗೂ ಸಮಾಜದಿಂದ ದೇಶವನ್ನು ಪರಮ ವೈಭವ ಭಾರತಕ್ಕಾಗಿ ಹಿಂದೂ ಸಮಾಜವನ್ನು ಒಗ್ಗೂಡಿಸುವುದು ಹಿಂದೂ ಸಂಗಮದ ಉದ್ದೇಶವಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಅಖಿಲ ಭಾರತೀಯ ಕಾರ್ಯದರ್ಶಿ ಹಾಗೂ ರಾಮಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಗೋಪಾಲ್ ಜೀ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಸ್ತುತ ಗುಜರಾತ್ ಗಡಿಪ್ರದೇಶದಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಅನುಷಾ ಅವರು ಉಪಸ್ಥಿತರಿರುತ್ತಾರೆ ಎಂದರು.
ಈ ಸಂಬಂಧ ಜ.25ರಂದು ಬೆಳಿಗ್ಗೆ 10-30ಕ್ಕೆ ಬನಶಂಕರಿ ದೇವಸ್ಥಾನದ ಬಳಿ ಭಗವಾಧ್ವಜಾ ಆರೋಹಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಜ. 26ರ ಮದ್ಯಾಹ್ನ 3 ಗಂಟೆಯಿಂದ ವೀರಭದ್ರೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬನಶಂಕರಿ ದೇವಸ್ಥಾನದ ವೇದಿಕೆ ತಲುಪಿದ ನಂತರ ಸಂಜೆ 5 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ ಪ್ರತಿಯೊಬ್ಬರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಭಾಗವಹಿಸುವ ಮೂಲಕ ಭಾರತಾಂಬೆಯ ಉತ್ಸವವನ್ನು ಯಶಸ್ವಿಗೊಳಿಸಲು ಸರ್ವರು ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ನಂತರ ಸಾಮೂಹಿಕ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಎಸ್.ಪಿ.ರವಿಕುಮಾರ, ನ್ಯಾಮತಿ ನಾಗರಾಜ, ಎಚ್.ಎನ್.ವಿರೂಪಾಕ್ಷಪ್ಪ, ಕುಮಾರ ತಿಳಿಸಿದರು.
ಮುಖಂಡರಾದ ಶ್ರೀನಿವಾಸರಾವ್, ರತ್ನಾಕರ ರಾಯ್ಕರ್, ಪೂಜಾರ ಚಂದ್ರಶೇಖರ, ಸಿ.ವಿಜಯಕುಮಾರ, ಎಚ್. ಪ್ರವೀಣ, ಮಹಾಂತೇಶ ರೆಡ್ಡಿ, ಗುಡ್ಡಪ್ಪ ರೆಡ್ಡಿ ಉಪಸ್ಥಿತರಿದ್ದರು.
