ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಫೆ.೧೩,೧೪ ಮತ್ತು ೧೫ರಂದು ನಡೆಯಲಿರುವ ಸಂತ ಸೇವಾಲಾಲರ ೨೮೭ನೇ ಜಯಂತ್ಯುತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಉಪಸಭಾಧ್ಯಕ್ಷರು ಮತ್ತು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಮನವಿ ಮಾಡಿದರು.
ತಾಲ್ಲೂಕಿನ ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಗುರುವಾರ ಸಂತ ಸೇವಾಲಾಲರ ೨೮೭ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಡಳಿತ ಸಹಕಾರದೊಂದಿಗೆ ಮೂರು ದಿನದ ಜಾತ್ರೆಯನ್ನು ಯಶಸ್ವಿಗೊಳಿಸಲು ಸಮುದಾಯದವರು ಸಹಕಾರ ನೀಡಬೇಕು, ಫೆ. ೧೪ರಂದು ರಾಜ್ಯ ಸರ್ಕಾರದ ಮಂತ್ರಿಮAಡಲದ ಸಚಿವರು, ಶಾಸಕರು ಗಣ್ಯರು ಆಗಮಿಸಲಿದ್ದಾರೆ. ಫೆ೧೫ರಂದು ಬೋಗ್ ಕಾರ್ಯಕ್ರಮ ಇರುತ್ತದೆ. ಜಾತ್ರೆಯಲ್ಲಿ ನೀರು,ಆಹಾರ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಆಗಬೇಕು. ಸೇವಾಲಾಲರ ಮಹಿಮೆಯಿಂದ ಜಾತ್ರೆ ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸೇವಾಲಾಲರ ಜಯಂತ್ಯುತ್ಸವ ಸರ್ಕಾರದ ಕಾರ್ಯಕ್ರಮವಲ್ಲ, ಸಮುದಾಯದವರು ಆಚರಿಸು ಜಾತ್ರೆ, ಇದಕ್ಕೆ ಸಮುದಾಯದವ ಸಹಕಾರ ಮುಖ್ಯ, ಜಿಲ್ಲಾಡಳಿತ ಲಾ ಅಂಡ್ ಆರ್ಡರ್ ಮಾತ್ರ ನಿರ್ವಹಿಸುತ್ತದೆ. ಮೂರು ದಿನದ ಜಯಂತ್ಯುತ್ಸವದಲ್ಲಿ ನೀರು, ಆಹಾರ, ಬೆಳಕು, ಸಾರಿಗೆ, ಆರೋಗ್ಯ, ಶೌಚಾಲಯ ಹಾಗೂ ಹೆಲಿಪ್ಯಾಡ್ ನಿರ್ಮಾಣದ ವ್ಯವಸ್ಥೆಯನ್ನು ಸಂಬAಧಪಟ್ಟ ಇಲಾಖೆಯವರು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರೆಯ ಯಶಸ್ವಿಗೆ ಯಾವುದೆ ಇಲಾಖೆಗಳು ಗೊಂದಲ ಮಾಡದೆ ಎಲ್ಲ ಇಲಾಖೆಯವರು ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಚಿನ್ನಿಕಟ್ಟೆ, ಹಳೆಜೋಗ, ಸೂರಗೊಂಡನಕೊಪ್ಪದಿAದ ಭಾಯಾಗಡ್ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು. ಜಾತ್ರೆ ಸಂಬAಧಿಸಿದAತೆ ಯಾವುದೇ ಏಜೆನ್ಸಿಯವರಾದರೂ ಶುಕ್ರವಾರದಿಂದಲೇ ಕೆಲಸ ಆರಂಭಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಾಮಠ ಸಮಿತಿಯ ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ, ಅಧ್ಯಕ್ಷ ಎನ್.ಹನುಮಂತನಾಯ್ಕ, ಪ್ರದಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ರಿತ್ತಿ ವಿಠ್ಠಲ ಮಾಧವರಾವ್, ಎಸಿ ಎಚ್.ಬಿ.ಚನ್ನಪ್ಪ, ತಹಶೀಲ್ದಾರ್ ಎಂ.ಪಿ.ಕವಿರಾಜ, ತಾ.ಪಂ.ಇಒ ಎಚ್.ವಿ.ರಾಘವೇಂದ್ರ, ನಿರ್ದೇಶಕ ಡಾ.ಎಲ್.ಈಶ್ವರನಾಯ್ಕ, ಸುರೇಂದ್ರನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *