filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.49537036, 0.60083336);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;

ದಾವಣಗೆರೆ ಫೆ.06 : ಯಾವುದೇ ವ್ಯಕ್ತಿ, ಕಂಪನಿ ದಿನಬಳಕೆಯ ಜೈವಿಕ ಸಂಪನ್ಮೂಲಗಳನ್ನು ಹೊರತುಪಡಿಸಿ, ಇತರೆ ಜೈವಿಕ ಸಂಪನ್ಮೂಲಗಳನ್ನು ತಮ್ಮ ಲಾಭಕ್ಕೆ ಅಥವಾ ವ್ಯಾಪಾರಕ್ಕೆ ಬಳಸುತ್ತಿದ್ದರೆ ಅವರು ಬಳಕೆ ಮತ್ತು ಲಾಭ ಹಂಚಿಕೆಯ ಶುಲ್ಕವನ್ನು ಪಾವತಿಸಬೇಕು ಎಂದು ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್ ಹೇಳಿದರು.
ಶುಕ್ರವಾರ(ಫೆ.6) ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಜೀವ ವೈವಿದ್ಯ ನಿರ್ವಹಣಾ ಸಮಿತಿಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರು ಶೇ.33 ರಷ್ಟು ಲಭ್ಯವಿದ್ದು, ಮುಂದಿನ ಪೀಳಿಗೆಗೆ ನೀರನ್ನು ಶೇ.22 ರಷ್ಟು ಮಾತ್ರ ಸಿಗುತ್ತದೆ. ಇನ್ನೂ 10 ವರ್ಷ ಹೋದರೆ ಬಹುತೇಕ ಇನ್ನೂ ಕಡಿಮೆ ಆಗುತ್ತದೆ. ಇದಕ್ಕೆ ಕಾರಣ ಕಾಡು, ಗಿಡಮರಗಳ ನಾಶವಾಗುತ್ತ ಇರುವುದರಿಂದ ನಮ್ಮ ಸುತ್ತಮುತ್ತಲಿನ ಪ್ರಾಣಿ, ಪಕ್ಷಿಗಳು, ಗಿಡ, ಮರಗಳು, ಸೂಕ್ಷ್ಮಾಣು ಜೀವಿಗಳು. ಜಲಚರ ಜೀವಿಗಳು, ಕ್ರಿಮಿಕೀಟಗಳು ಸೇರಿದಂತೆ ಅವುಗಳ ಉಳಿವಿಗೆ ಕಾರಣವಾಗಿರುವ ಬೆಟ್ಟ, ಗುಡ್ಡಗಳು, ನದಿ, ತೊರೆಗಳು. ಸಾಗರ, ಸಮುದ್ರ ಮಣ್ಣು ಮತ್ತು ಜೀವಿಗಳ ದೇಹದೊಳಗಿನ ಬ್ಯಾಕ್ಟಿರಿಯಾಗಳು, ಸಾಗರದ ಆಳದಲ್ಲಿ ಕಂಡು ಬರುವ ಜಲಚರ ಜೀವಿಗಳು. ಮಣ್ಣಿನ ಒಳಗೆ ಕಾಣಸಿಗುವ ಎರೆಹುಳು, ಗೆದ್ದಲು ಜೀವಿಗಳು, ವಿಷಕಾರಿ ಎಂದು ಕರೆಯುವ ಹಾವುಗಳು ಜೀವವೈವಿಧ್ಯತೆಯ ಭಾಗ ಎಂಬುದನ್ನು ನಾವು ಮರೆಯಬಾರದು. ಈ ಎಲ್ಲವೂ ಇದ್ದಲ್ಲಿ ಮಾತ್ರ ಜೀವವೈವಿಧ್ಯ ಎಂಬ ಪದಕ್ಕೆ ಸಂಪೂರ್ಣ ಅರ್ಥ ಬರುತ್ತದೆ. ಮತ್ತು ಪ್ರತಿಯೊಂದು ಜೀವಿಯ ಅಸ್ತಿತ್ವವೂ ಪರಿಸರದಲ್ಲಿ ಅವಶ್ಯವಾಗಿದೆ.
ಜೀವ ವೈವಿಧ್ಯ ನಿರ್ವಹಣಾ ಸಮಿತಿಯು ಸ್ಥಳೀಯ ಸಂಸ್ಥೆಯ ಮಟ್ಟದಲ್ಲಿ 7 ರಿಂದ 11 ಜನರ ಸಮಿತಿ, ತನ್ನ ವ್ಯಾಪ್ತಿ ಪ್ರದೇಶದಲ್ಲಿ ಬರುವ ಜೀವವೈವಿಧ್ಯತೆಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ನ್ಯಾಯ ಸಮ್ಮತ ಹಂಚಿಕೆ ಹಾಗೂ ಜನತಾ ಜೀವವೈವಿಧ್ಯ ದಾಖಲಾತಿ ತಯಾರಿಸುವುದು ಈ ಸಮಿತಿಯ ಜವಾಬ್ದಾರಿ. ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಸಮಿತಿಯನ್ನು ರಚಿಸಬೇಕು. ಸಮಿತಿಯ ಅಧಿಕಾರಾವಧಿ 5 ವರ್ಷ ಇದ್ದು, ಒಂದು ವೇಳೆ 5 ವರ್ಷಗಳ ಬಳಿಕ ಹೊಸ ಸಮಿತಿ ರಚನೆ ತಡವಾದಲ್ಲಿ ಅಲ್ಲಿಯವರೆಗೆ ಹಾಲಿ ಸಮಿತಿಯೇ ಅಸ್ಥಿತ್ವದಲ್ಲಿರುತ್ತದೆ.
ಸಮಿತಿಯ ವ್ಯಾಪ್ತಿ ಪ್ರದೇಶದಲ್ಲಿನ ವನ್ಯ ಪ್ರಾಣಿಗಳು ಮತ್ತು ಸಸ್ಯಗಳು ಹಾಗೂ ಮಾನವ ಪೆÇೀಷಿತ ಪ್ರಾಣಿಗಳು ಮತ್ತು ಸಸ್ಯಗಳು, ಜಲಚರ ಜೀವಿಗಳು, ಸೂಕ್ಷ್ಮಾಣು ಜೀವಿಗಳು, ನೈಸರ್ಗಿಕ ಸಂಪನ್ಮೂಲಗಳ ಮಾಹಿತಿಗಳನ್ನೊಳಗೊಂಡ ಒಂದು ದಾಖಲಾತಿ ಪುಸ್ತಕವಾಗಿರುತ್ತದೆ. ಜೀವ ವೈವಿಧ್ಯ ನಿರ್ವಹಣಾ ಸಮಿತಿಯು ರಚನೆಗೊಂಡ ನಂತರ ಸಮಿತಿಯ ಸದಸ್ಯರು ಮೂರು ತಿಂಗಳಿಗೆ ಒಂದು ಬಾರಿ ಸಭೆ ನಡೆಸಬೇಕು ಜೀವವೈವಿಧ್ಯತೆಗೆ ಧಕ್ಕೆ ಅಥವಾ ಹಾನಿ ತರುವಂತಹ ಚಟುವಟಿಕೆಗಳ ನಿಯಂತ್ರಣದ ಕುರಿತು ಚರ್ಚಿಸಬೇಕು. ಜನತಾ ಜೀವವೈವಿಧ್ಯ ದಾಖಲಾತಿ ತಯಾರಿಸಬೇಕು ಹಾಗೂ ಅದರಲ್ಲಿ ಪಾರಂಪರಿಕ ವೈದ್ಯರ ಜ್ಞಾನದ ಕುರಿತು ದಾಖಲಾತಿ ಮಾಡಬೇಕು.
ಜೀವವೈವಿಧ್ಯ ನಿರ್ವಹಣಾ ಸಮಿತಿಯಿಂದ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಕರ್ನಾಟಕ ಜೀವವೈವಿಧ್ಯ ಮಂಡಳಿ, ಆರ್.ಡಿ.ಪಿ.ಆರ್ ಇಲಾಖೆ, ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿ ಅನುದಾನವನ್ನು ಪಡೆಯಬಹುದು. ಇತರೆ ಸಂಸ್ಥೆಗಳಿಂದ ದೇಣಿಗೆಯ ರೂಪದಲ್ಲಿ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು ಎಂದರು.
ಜೀವವೈವಿಧ್ಯ ನಿರ್ವಹಣಾ ಸಮಿತಿಗಾಗಿ ಒಂದು ಕಚೇರಿಯನ್ನು ಮಾಡಿಕೊಳ್ಳಬೇಕು. ಸ್ಥಳೀಯವಾಗಿ ಸಿಗುವ ಜೈವಿಕ ಸಂಪನ್ಮೂಲಗಳನ್ನು ವ್ಯಾಪಾರದ ಉದ್ದೇಶಕ್ಕೆ ಯಾರೇ ಬಳಸಿಕೊಳ್ಳುತ್ತಿದ್ದರೂ ಸಮಿತಿಯೂ ಅದಕ್ಕೆ ಶುಲ್ಕ ವಿಧಿಸಬಹುದು ಹಾಗೂ ಅಂತಹ ವ್ಯಕ್ತಿ, ಕಂಪನಿಗಳ ಮಾಹಿತಿಯನ್ನು ಪಟ್ಟಿ ಮಾಡಿ ಮಂಡಳಿಗೆ ಕಳುಹಿಸಬೇಕು. ಅನುದಾನವನ್ನು ಪಿಬಿಆರ್ ತಯಾರಿಕೆಗೆ, ಉನ್ನತೀಕರಣಕ್ಕೆ, ಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ಚಟುವಟಿಕೆಗಳಿಗೆ ಉಪಯೋಗಿಸಬೇಕು. ಸಮಿತಿಗೆ ಬಂದಿರುವ ಅನುದಾನವನ್ನು ಬಳಸಲು ಮತ್ತು ಸಮಿತಿಯ ಕೆಲಸ ಕಾರ್ಯಗಳನ್ನು ನೊಂದಣಿ ಮಾಡಲು ಒಬ್ಬರನ್ನು ನೇಮಿಸಿಕೊಳ್ಳಬೇಕು.
ನಾಟಿ ವೈದ್ಯರು ವ್ಯಾಣಿಜ್ಯ ಉದ್ದೇಶ, ಆರ್ಥಿಕ ಲಾಭಕ್ಕಾಗಿ ಜೈವಿಕ ಸಂಪನ್ಮೂಲಗಳನ್ನು ಬಳಸುತ್ತಿದ್ದರೆ ಅವರು ಸಹ ಕಾಯ್ದೆಯ ಅಡಿಯಲ್ಲಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ವ್ಯಾಪಾರದ ಉದ್ದೇಶ ಇಲ್ಲವೆಂದರೆ ಶುಲ್ಕವನ್ನು ಪಾವತಿಸುವಂತಿಲ್ಲ. ವಿಶೇಷವಾದ, ಅಳಿವಿನಂಚಿನಲ್ಲಿರುವ, ಅತಿ ವಿರಳ ಸಂಖ್ಯೆಯ ಔಷಧೀಯ ಸಸ್ಯಗಳು ಬೆಳೆಯುವ, ಒಂದು ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿರುವ ಜೀವಸಂಕುಲ ಇತ್ಯಾದಿಗಳು ಕಂಡು ಬರುವ ಪ್ರದೇಶಗಳನ್ನು ಪಾರಂಪರಿಕ ತಾಣವೆಂದು ಘೋಷಿಸಿ ಸಂರಕ್ಷಿಸಬೇಕು. ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಅವೈಜ್ಞಾನಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ, ನಿಯಂತ್ರಿಸುವ ಅಧಿಕಾರ ಸಮಿತಿಗೆ ಇದೆ. ಮಂಡಳಿಗೆ ಪತ್ರದ ಮೂಲಕ ಮಾಹಿತಿಯನ್ನು ನೀಡಬೇಕು. ಬಳಿಕ ಮಂಡಳಿಯು ಕ್ರಮಕೈಗೊಳ್ಳುತ್ತೆವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಮತಾಹೊಸಗೌಡ್ರು, ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್, ದಾವಣಗೆರೆ ಪ್ರಾದೇಶಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ, ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಸಂಶೋಧನಾ ಸಹಾಯಕರಾದ ಡಾ.ಪ್ರೀತಮ್.ಎಸ್ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಹಾಗೂ ಗ್ರಾಮ ಪಂಚಾಯಿತಿಯ ಪಿಡಿಓಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *