ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಶುಕ್ರವಾರ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಪ್ರವೇಶದ್ವಾರದ ಬಳಿ ಕಾಟಿ ಆರೋಹಣ ಮತ್ತು ಭೋಗ್ ಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮುದಾಯದ ಮುಖಂಡರು ಚಾಲನೆ ನೀಡಿದರು.
ಬೆಳಿಗ್ಗೆ ಕೆಂಪು ಮತ್ತು ಬಿಳಿ ಬಣ್ಣದ ಕಾಟಿಗಳನ್ನು ಧರ್ಮದ ಸಂಕೇತವಾಗಿ ಆರೋಹಣ ಮಾಡಲಾಯಿತು. ನಂತರ ಹೋಮದ ಕುಂಡ ಪೂಜೆಯನ್ನು ನೆರವೇರಿಸಿ ಸೇವಾಲಾಲ್ ಅರ್ಚಕ ಸೇವ್ಯಾನಾಯ್ಕ, ಮರಿಯಮ್ಮದೇವಿ ಆರ್ಚಕ ಮಂಜುನಾಥನಾಯ್ಕ ಅವರು ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದರು.
ಈ ಸಂದರ್ಭದಲ್ಲಿ ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ವ್ಯವಸ್ಥಾಪಕ ಎನ್.ರಾಜು, ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ, ಮಹಾಮಠ ಸಮಿತಿ ಅಧ್ಯಕ್ಷ ಎನ್.ಹನುಮಂತನಾಯ್ಕ, ಮುಖಂಡರಾದ ಬಾಲರಾಜನಾಯ್ಕ, ವೈದ್ಯ ಈಶ್ವರನಾಯ್ಕ, ಸಾಲಬಾಳು ಗೋಪಾಲನಾಯ್ಕ, ಸಾಧು ಸೈನಾ ಭಗತ್, ಕೆ.ಟಿ. ನಾಗರಾಜ, ಹಡಗಲಿ ಹೀರಾಲಾಲ್, ಪ್ರತಿಷ್ಟಾನ ಯೋಜನಾ ನಿರ್ದೇಶಕ ಜೆ.ಹರೀಶ, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ ಹಾಗೂ ವಿವಿಧ ಕಡೆಯಿಂದ ಆಗಮಿಸಿರುವ ಭಕ್ತರು ಇದ್ದರು.
