ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್ನಲ್ಲಿ ನಡೆದ ಸಂತ ಸೇವಾಲಾಲ್ಅವರ 287ನೇ ಜಯಂತ್ಯುತ್ಸವಕ್ಕೆ ಭಾನುವಾರ ಹೋಮಕ್ಕೆ ಪೂರ್ಣಾಹುತಿ ಅರ್ಪಿಸುವುದರೊಂದಿಗೆ ತೆರೆ ಬಿದ್ದಿತು.
ಭಾನುವಾರ ಬೆಳಿಗ್ಗೆ ಹೋಮ ಕುಂಡದ ಆವರಣಕ್ಕೆಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್ ಉತ್ಸವ ಮೂರ್ತಿಗಳನ್ನು ತರಲಾಯಿತು. ವಿವಿಧ ಬಣ್ಣದ ರಂಗೋಲಿ, ಹೂವಿನಿಂದ ಆಲಂಕರಿಸಿದ್ದ ಹೋಮ ಕುಂಡಕ್ಕೆ(ಭೋಗ್) ಒಂಭತ್ತು ವಿವಿಧ ಜಾತಿಯ ಮರದ ಚೆಕ್ಕೆಗಳು, ಗಂಧದ ಚೆಕ್ಕೆ, ತುಪ್ಪ ತುಂಬಿದ ಇರುಮುಡಿ ಕಾಯಿಗಳನ್ನು ಧಾರ್ಮಿಕ ವಿಧಾನಗಳೊಂದಿಗೆ ಜೋಡಿಸಿ, ಕರ್ಪೂರದ ಮೂಲಕ ಕುಂಡವನ್ನು ಬೆಳಗಿಸಿ, ಗೋಧಿ ಪಾಯಸ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಲಾಯಿತು.
ಹೋಮ ಕುಂಡದ ಧಾರ್ಮಿಕ ವಿಧಿ-ವಿಧಾನಗಳನ್ನು ಸಾಧು ಸಂತರ ಮಾರ್ಗದರ್ಶನದಲ್ಲಿ ಸೇವಾಲಾಲ್ ದೇವಸ್ಥಾನದ ಆರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ ನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು.
ಹೋಮ ಕುಂಡದ ಬಳಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ‘ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಲಿ, ಮಳೆ,ಬೆಳೆ ಸಮೃದ್ದಿಯಾಗಿ, ಜನತೆ ಶಾಂತಿ ಸೌಹಾರ್ದದಿಂದ ಬಾಳುವಂತಾಗಲಿ’ ಎಂದು ಪ್ರಾರ್ಥಿಸಿದರು.
ಹೋಮ ಪೂಜೆಯಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ,ಮಹಾಮಠ ನಿರ್ವಾಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ತಾಂಡ ಅಭಿವೃದ್ದಿ ನಿಗಮ ಅಧ್ಯಕ್ಷ ಎನ್. ಜಯದೇವನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು, ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಅರುಣಕುಮಾರ, ಹರಪನಹಳ್ಳಿ ಹೀರಾಲಾಲ್, ಶಿವರಾಂನಾಯ್ಕ, ಸುರೇಂದ್ರನಾಯ್ಕ, ಮಾರುತಿನಾಯ್ಕ, ಮಲ್ಲಿಕಾರ್ಜುನ, ಗೋಪಾಲನಾಯ್ಕ, ಭೋಜ್ಯನಾಯ್ಕ, ಪ್ರತಿಷ್ಠಾನ ಯೋಜನಾ ನಿರ್ದೇಶಕ ಜೆ.ಹರೀಶ, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ,
ರಾಜ್ಯ ಸೇರಿದಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ರಾಜಸ್ಥಾನ, ಗೋವಾ ರಾಜ್ಯದಿಂದಲೂ ವಿವಿಧ ವಾಹನಗಳ ಮೂಲಕ ಲಕ್ಷಾಂತರ ಭಕ್ತರು ಆಗಮಿಸಿದ್ದು, ಶುಕ್ರವಾರ ರಾತ್ರಿ ಜಾಗರಣೆ, ಭಜನೆ ಸಂಗೀತ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಬುಧವಾರ ಬೋಗ್ಕಾರ್ಯಕ್ರಮದ ನಂತರತಮ್ಮ ಊರುಗಳಿಗೆ ವಾಪಸಾಗುತ್ತಿರುವ ದೃಶ್ಯ ಕಂಡುಬಂತು.ಮಹಾಮಠ್ ಸಮಿತಿ ಅಧ್ಯಕ್ಷರು ರುದ್ರಪ್ಪ ಮಾನಪ್ಪ ಲಮಾಣಿ, ಸಾಧು,ಸಂತರು, ಮಹಾಮಠ್ ಸಮಿತಿ ಸದಸ್ಯರು ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
