ನ್ಯಾಮತಿ; ತಾಲ್ಲೂಕಿನ ಗೋವಿನಕೋವಿ ಕಾಶಿ ಶಾಖಮಠದ ಹಾಲಸ್ವಾಮಿ ಬೃಹನ್ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಾಲಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಮುಳ್ಳುಗದ್ದಿಗೆ ಉತ್ಸವ ಫೆ.17ರಿಂದ ಎರಡು ದಿನ ನಡೆಯಲಿದೆ.
ಫೆ.17ರಂದು ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ಗಂಟೆಗೆ ಶ್ರೀಗಳ ತುಲಾಭಾರ ಸೇವೆ ನಂತರ ರಾತ್ರಿ 9 ಗಂಟೆಗೆ ಮಠದ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳವರ ಮುಳ್ಳುಗದ್ದಿಗೆ ಉತ್ಸವ ಪ್ರಮುಖ ಬೀದಿಗಳಲ್ಲಿ ಜರುಗಲಿದೆ.
ಸಂಜೆ ನಡೆಯುವ ಧರ್ಮಸಭೆಯಲ್ಲಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿUಳವರು ನೇತೃತ್ವ ವಹಿಸುವರು. ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಸ್ವಾಮೀಜಿ, ಕಾರ್ಜುವಳ್ಳಿ ಸದಾಶಿವ ಸ್ವಾಮೀಜಿ, ರಾಂಪುರ ಶಿವಕುಮಾರ ಸ್ವಾಮೀಜಿ, ಗದಗ ವೀರಭದ್ರ ಸ್ವಾಮೀಜಿ, ನಾಗವಂದ ಶಿವಯೋಗಿ ಶಿವಾನಂದ ಸ್ವಾಮೀಜಿ, ಚನ್ನಗಿರಿ ಕೇದಾರಲಿಂಗ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಸ್ವಾಮಿಜಿಯವರು, ಅರಕೆರೆ ಚನ್ನವೀರ ಸ್ವಾಮಿಜಿ, ಹೊಟ್ಯಾಪುರ ಓಂಕಾರೇಶ್ವರ ಮರಿದೇವರು, ದಿಡಗೂರು ಅಣ್ಣಪ್ಪ ಸ್ವಾಮಿಜಿ ಉಪಸ್ಥಿತರಿರುತ್ತಾರೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *