“ಕಣ್ಣು ನಾಲಿಗೆ ಮನವು ತನ್ನವೆಂದೆನಬೇಡ
ಅನ್ಯರು ಕೊಂದರೆನುಬೇಡ ಇವು ಮೂರು
ತನ್ನ ಕೊಲ್ಲುವುದು ಸರ್ವಜ್ಞ”
ಕೂತುನ್ನುವವನಿಗೆ ಕುಡಿಕೆ ಹೊನ್ನು ಸಾಲದು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು, ಪಂಚಗೆ ಪಗಾರವಿಲ್ಲ ಕತ್ತೆಗೆ ಲಗಾಮಿಲ್ಲ. ಇದು ಅಂದೇ ಸರ್ವಜ್ಞ ಕವಿ ನಮ್ರವಾಗಿ ನಾಗರೀಕರಿಗೆ ಉಪದೇಶಿಸಿದ. ಹೇಡಂಗೆ ಹಿರೇತನವು, ಮೂಢರಿಗೆ ಗುರುತನವು, ನೀಚರಿಗೆ ದೊರೆತನವೂ ಬೇಡವೆಂದು ನಾಗರೀಕರಿಗೆ ಬುದ್ಧಿ ಹೇಳಿದ ಅಂದೇ ಎಚ್ಚರಿಸಿದ. ಇದು ಜಂಗಮ ಕವಿ, ತ್ರಿಪದಿಗಳ ಕವಿ, ಮಾನವತಾವಾದಿ ಸರ್ವಜ್ಞ ತನ್ನ ಸಿಟ್ಟನ್ನು ತನ್ನ ಕಿಚ್ಚನ್ನು ನಿಷ್ಟೂರತೆಯನ್ನು ತನ್ನ ತ್ರಿಪದಿಗಳೆಂಬ ಕಡ್ಗದಿಂದ ತಿವಿದಿದ್ದಾನೆ. ಸಾಮಾಜಿಕ ತುರಿಕೆಗೆ ದಾರ್ಶನಿಕ ದಾಹಕ್ಕೆ ಮದ್ದನ್ನು ಅರೆದಿದ್ದಾನೆ ಹೀಗಾಗಿಯೇ ಈತನನ್ನು ವಿಚಾರವಾದಿ, ನಿಷ್ಟೂರವಾದಿ, ಪ್ರಜಾ ಹಿತಕಾರಿ ಎಂದು ಗುರುತಿಸಿದ್ದು ಬದುಕಿನಾಳದ ಸತ್ಯಗಳನ್ನು ಮಂಡಿಸುತ್ತಾ ಬದುಕಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ವ್ಯಕ್ತಪಡಿಸುತ್ತಾ ಸಮುದಾಯಗಳಲ್ಲಿ ಬೆರೆತ ಸಹಜ ಮಾನವನಾಗಿದ್ದಾನೆ.
ಸರ್ವಜ್ಞನ ತಂದೆ ಕುಂಬಾರ ಮಲ್ಲ, ತಾಯಿ ಮಳಲಾದೇವಿ ಈತ ಯಾವುದೇ ರಾಜಾಶ್ರಯದಲ್ಲಿ ಬೆಳೆಯಲಿಲ್ಲ, ಬದುಕಲಿಲ್ಲ, ನಾಡಿನ ದೇವಾಲಯಗಳಲ್ಲಿ ಆಶ್ರಯ ಪಡೆಯುತ್ತಾ ಯಾರೋ ಕೊಟ್ಟ ಮುದ್ದೆ ಮೇಯುತ್ತಾ, ಯಾರೋ ಕೊಟ್ಟ ತುಂಡು ಕಂಬಳಿಯನ್ನು ಹೊದ್ದು ಕೈಯಲ್ಲಿ ಕಪ್ಪ ಹಿಡಿದು ಊರೂರು ಅಳೆಯುತ್ತಾ ಸಂದಿ ಗೊಂದಿಗಳಲ್ಲಿ ಓಡಾಡುತ್ತಾ ಜಂಗಮತ್ವವನ್ನೇ ತನ್ನ ವ್ಯಕ್ತಿತ್ವವನ್ನಾಗಿಸಿಕೊಂಡು ನೀತಿ ಬೋಧಕ ತತ್ವಜ್ಞಾನಿಯಾಗಿ ಸಾಮಾಜಿಕ ಅಂಕುಡೊAಕುಗಳನ್ನು ತನ್ನ ತ್ರಿಪದಿಗಳಲ್ಲಿ ರಚಿಸಿ ಅನಾಗರಿಕರನ್ನು ನಾಗರೀಕರನ್ನಾಗಿಸುವತ್ತ, ವಿಷವನ್ನು ಅಮೃತವಾಗಿಸುವತ್ತ, ದುರಾಗ್ರಹಿಗಳನ್ನು ಗ್ರಹಿಗಳಾಗಿಸುತ್ತಾ, ದುರಾಗಹಿಗಳನ್ನು ಸತ್ಯಾಗ್ರಹಿಗಳಾಗಿಸುತ್ತ, ಅನೀತಿವಂತರನ್ನು ನೀತಿವಂತರಾಗಿಸುತ್ತ, ಜಿಪುಣರನ್ನು ದಾನಿಗಳನ್ನಾಗಿಸುತ್ತಾ, ಅಧರ್ಮಿಯರನ್ನು ಧರ್ಮಿಗಳನ್ನಾಗಿಸುವತ್ತ ತನ್ನ ವಚನಗಳ ಮೂಲಕ ಪ್ರಯತ್ನಿಸಿದ್ದಾನೆ. ಹೀಗಾಗಿಯೇ ಈತ ಸಮಾಜ ಸುಧಾರಕನಾಗಿ ಪ್ರಜಾಹಿತಕಾರಿಯಾಗಿ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ.
ಬಡವ-ಬಲ್ಲಿದರೆಂಬ ವರ್ಗಭೇದ, ಹೆಣ್ಣು ಗಂಡೆAಬ ಲಿಂಗ ಭೇದ, ಉಚ್ಚ ನೀಚವೆಂಬ ಜಾತಿಭೇದ ಸಮಾಜದ ಅವಸ್ಥೆಯನ್ನು ತನ್ನ ತ್ರಿಪದಿಗಳೆಂಬ ವಚನಗಳ ಮೂಲಕ ಯತ್ನಿಸಿದ್ದಾನೆ. ಹೀಗಾಗಿ ಸರ್ವಜ್ಞನ ವಚನಗಳು ಹಳಸಲಿಲ್ಲ ಸವಕಾಗಲಿಲ್ಲ, ಇಂದಿಗೂ ನವೆನ್ವೇಷಣೆ ಶಾಲಿಯಾಗಿ ಕಂಗೊಳಿಸುತ್ತಿವೆ, ಇಂದಿಗೂ ವೈಚಾರಿಕ ಮತ್ತು ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಿವೆ, ಕಂಡದ್ದನ್ನು ಕಂಡAತೆ ಹೇಳುತ್ತಾ ಮಹಾಕಾವ್ಯ ಬರೆಯದೆ, ಮಹಾಜೀವನ ದರ್ಶನ ಮಾಡಿಸಿದ ಮಹಾದರ್ಶನಿಕನು. ವಚನ ಎಂದರೆ ಮಾತು ಕೊಡುವುದು, ವಚನ ಎಂದರೆ ನುಡಿವುದನ್ನು ಪಾಲಿಸುವುದು. ಇವನ ತ್ರಿಪದಿ ಸಾಹಿತ್ಯ ಅನುಭವ ಸಾಹಿತ್ಯವಾಗಿದೆ ಅಂದು ಈತ ಬಯಸಿದ್ದು ಜನತೆ ವಿವೇಚನೆ ವಿವೇಕಗಳಿಂದ ನಾಗರೀಕರಾಗಬೇಕು. ಹೀಗಾಗಿ ಸರ್ವಜ್ಞ ಅನ್ಯಾಯ ಅನಾಚಾರ ದಬ್ಬಾಳಿಕೆಗಳನ್ನು ಭಟ್ಟ ಬಯಲು ಮಾಡಿ ನಾಗರೀಕರ ಕಣ್ಣು ತೆರಿಸಿದ್ದಾನೆ. ಪರಿಸರದಲ್ಲಿನ ಮಡಿ ಮೈಲಿಗೆ ಜಾತಿ ವ್ಯವಸ್ಥೆಯನ್ನು ಮೌನವಾಗಿ ಪ್ರಶ್ನಿಸಿ ಭೌತಿಕ ಲೆಕ್ಕಾಚಾರ ಹುಟ್ಟು ಹಾಕಿ, ತಾರತಮ್ಯವಿಲ್ಲದೆ ಸಮಾಜವವೊಂದನ್ನು ತನ್ನ ಕಣ್‌ತುಂಬಿಕೊAಡಿದ್ದಾನೆ. ಇಹಪರಗಳ ಅರಿವು ಮೂಡಿಸಿ ಸಮಾಜೋನ್ನತಿಯೊಂದಿಗೆ ಅತ್ಯುನ್ನೋತೀಯ ಬೆಳಕು ಚೆಲ್ಲಿದ್ದಾನೆ.
ಸರ್ವಜ್ಞನ ಜೀವನಕ್ಕೆ ಸಂಬAಧಿಸಿದAತೆ ಭಿನ್ನಾಭಿಪ್ರಾಯಗಳಿವೆ, ದಂತಕಥೆಗಳಿವೆ, ಸತ್ಯದ ಬೆಳಕು ಮರೆಯಾಗಿ ಕಲ್ಪನೆಯ ಹಾಗೂ ಆಸತ್ಯದ ಕತ್ತಲು ಎಲ್ಲೆಲ್ಲೂ ಆವರಿಸಿದೆ. ಸತ್ಯವನ್ನು ಮರೆಮಾಚಿ ತಿರುಚಿ ಅವಹೇಳನಕಾರಿ ಚರಿತ್ರೆ, ಜನ್ಮ ರಹಸ್ಯವನ್ನು ಅಸತ್ಯದ ಕತ್ತಲಿನಿಂದ ಹೊರತರಬೇಕಾಗಿದೆ. ತಳ ಬುಡವಿಲ್ಲದ ಕುಹಕ ಕಪೋಲಕಲ್ಪಿತ ತೇಜೋವಧೆಯಿಂದ ಹೊರತರಬೇಕಾಗಿದೆ. ಈ ಸಮಾಜ ಸುಧಾರಕನನ್ನು ನೀತಿ ಬೋಧಕನನ್ನು ಸುಳ್ಳಿನ ಕಥೆಯಿಂದ ಹೊರತರಬೇಕಾಗಿದೆ. ಸರ್ವಜ್ಞನ ಜನ್ಮ ಭೂಮಿ, ಕರ್ಮಭೂಮಿ, ಐಕ್ಯ ಭೂಮಿಗಳ ಗೊಂದಲಗಳನ್ನು ಬಗೆಹರಿಸಬೇಕಾಗಿದೆ. ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕು ಮಾಸೂರಿನ ಕುಮದ್ವತಿ ನದಿ ಪಕ್ಕದಲ್ಲಿರುವ ಸವಜ್ಞನ ಸಮಾಧಿ ಕುಂಬಾರ ಹೊಳೆ, ಕಾಶಿ ವಿಶ್ವನಾಥ ದೇವಾಲಯ ಪಕ್ಕದ ಅಗಳ ಸರ್ವಜ್ಞನ ಜೀವನ ಪರಿಚಯಿಸುವ ಗ್ಯಾಲರಿ ಹಿರೇಕೆರೂರು. ಅಬಲೂರುಗಳು ಅಭಿವೃದ್ಧಿಯಿಂದ ವಂಚಿತವಾಗಿವಿದೆ. ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿಗಳ ಮೂಲಕ ಅಭಿವೃದ್ಧಿಪಡಿಸಬೇಕಾಗಿದೆ.
ಚಿಕ್ಕಜೋಗಿಹಳ್ಳಿ ನಾಗರಾಜು
ಕಲಾವಿದರು ಲೇಖಕರು, ಹೊನ್ನಾಳಿ.
೯೪೪೯೦೯೩೯೦೨
