ನ್ಯಾಮತಿ:ಗೋವಿನಕೋವಿ ಹಾಲಸ್ವಾಮಿ ಮ ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರಾ ಮಹೋತ್ಸವ ಮತ್ತು 2ನೇ ವರ್ಷದ ಮುಳ್ಳು ಗದ್ದುಗೆ ಉತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಭಕ್ತರು ಸಿದ್ದಪಡಿಸಿರುವ ಮುಳ್ಳು ಗದ್ಗುಗೆ ಮಂಟಪದಲ್ಲಿ ಜಾಲಿ ಮುಳ್ಳು ಪ್ರೇರಿಸಿ ಸಿದ್ದಪಡಿಸಿದ ಗದ್ಗುಗೆ ಮತ್ತು ಮಂಟಪವನ್ನು ಹೂವಿನಿಂದ ಆಲಂಕರಿಸಲಾಗಿತ್ತು. ಪಟ್ಟಾಧಿಕಾರದ ನಂತರ 2ನೇ ಬಾರಿ ನಡೆಯುತ್ತಿರುವ ಮುಳ್ಳು ಗದ್ಗುಗೆ ಉತ್ಸವಕ್ಕೆ ಸಂಬಂಧಿಸಿದಂತೆ ಧಾರ್ಮಿಕ ವಿಧಿ ವಿದಾನಗಳನ್ನು ಪೂರೈಸಿದ ನಂತರ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿ ಅವರು ಬಾಳೆಪಟ್ಟೆಯಿಂದ ತಯಾರಿಸಿದ ಕೌಪಿನವನ್ನು ಮಾತ್ರ ಧರಿಸಿ ಸಾವಿರಾರು ಭಕ್ತರು ಹಾಲೇಶ ಮಹಾರಾಜ ಕೀ ಜಯ್, ಹಾಲೇಶ ನಿನಗಾರೂ ಸರಿಯೇ ಎಂಬ ಘೋಷಣೆಯೊಂದಿಗೆ, ಮುಳ್ಳು ಗದ್ಗುಗೆ ಏರಿ ಕುಪ್ಪಳಿಸಿ ಕುಣಿಯುವ ಮೂಲಕ ಪವಾಡ ಮೆರೆದರು.
ಮುಳ್ಳುಗದ್ಗುಗೆ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಾಗುತ್ತದೆ. ಭಕ್ತರ ಸಂಕಷ್ಟ ನೀಗಿಸಲು ಸ್ವಾಮೀಜಿ ಮುಳ್ಳು ಗದ್ದಿಗೆ ಮೇಲೆ ಕುಳಿತು ಕುಣಿಯುತ್ತಾರೆ. ಮಠದ ಹಿರಿಯ ಶ್ರೀಗಳ ಲಿಂಗೈಕ್ಯ ನಂತರ ಹಲವು ವರ್ಷಗಳಿಂದ ಗ್ರಾಮದಲ್ಲಿ ಮುಳ್ಳು ಗದ್ಗಿಗೆ ಉತ್ಸವ ನಡೆದಿರಲಿಲ್ಲ. ಈಗಿನÀ ಶ್ರೀಗಳು ಉತ್ಸವ ಆರಂಭ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಭಕ್ತರು ಹೇಳಿದರು.
ಹರಗುರು ಮೂರ್ತಿಗಳ ಸಮ್ಮುಖದಲ್ಲಿ ಗ್ರಾಮ ದೇವತೆಗಳಾದ ಲಕ್ಷ್ಮಿನರಸಿಂಹ, ದುರ್ಗಾದೇವಿ, ಆಂಜನೇಯ ಮತ್ತು ಹಿರಿಯ ಶ್ರೀಗಳ ಪಾದುಕೆ ಹೊತ್ತ ಪಲ್ಲಕ್ಕಿ, ಮಠದ ತೇಜಿ ಉತ್ಸವಕ್ಕೆ ಸಾಕ್ಷಿಯಾದರು.
