ದಾವಣಗೆರೆ, ಫೆ.17 : ಜಲಸಿರಿ ನೀರಿನ ಪೈಪುಗಳ ಮುಖಾಂತರ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರಿನ ತೊಟ್ಟಿಗಳಲ್ಲಿರುವ ಮಹಾನಗರ ಪಾಲಿಕೆಯಿಂದ ಈ ಹಿಂದೆ ನೀಡಲಾದ ನೀರಿನ ಪೈಪುಗಳಿಗೆ ಎಂಡ್ ಕ್ಯಾಪ್ ಹಾಕಿ ಸ್ಥಗಿತಗೊಳಿಸತಕ್ಕದ್ದು, ಇಲ್ಲವಾದಲ್ಲಿ ತಮ್ಮ ಗಮನಕ್ಕೆ ಬಾರದೆ ನೀರು ಹಳೆಯ ಪೈಪುಗಳ ಮುಖಾಂತರ ಹರಿದು ಹೋಗಿ ತಮ್ಮ ನೀರಿನ ಬಳಕೆ ಹೆಚ್ಚಾಗುವುದರಿಂದ ನೀರಿನ ಶುಲ್ಕವೂ ಹೆಚ್ಚಾಗುತ್ತದೆ. ನೀರಿನ ಶುಲ್ಕದ ಬಿಲ್ಲುಗಳನ್ನು ನಿಗದಿತ ಅವಧಿಯಲ್ಲಿ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಗ್ರಾಹಕರ ಸೇವಾ ಕೇಂದ್ರದಲ್ಲಿ ಅಥವಾ ಐಟಿಐ ಕಾಲೇಜು ಬಳಿಯ ನೀರಿನ ಟ್ಯಾಂಕ್ ಕೆಳಗಡೆ ಆಥವಾ ಆಶ್ರಯ ಆಸ್ಪತ್ರೆ ಪಕ್ಕದ ಮಹಾನಗರಪಾಲಿಕೆಯ ವಲಯ ಕಛೇರಿಯ ಜಲಸಿರಿ ಕೌಂಟರ್‌ನಲ್ಲಿ ನಗದು ರೂಪದಲ್ಲಿ ಪಾವತಿಸತಕ್ಕದ್ದು ಅಥವಾ ಆನ್ ಲೈನ್ www.Davangerewater.co.in ಮೂಲಕ ಹಾಗೂ phone-pay, Google-pay, Pay-TM ಅಥವಾ ಇತರೇ ಯುಪಿಐ ಗಳ ಮುಖಾಂತರ ಪಾವತಿಸಬಹುದಾಗಿರುತ್ತದೆ. ನಿಗದಿತ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು , ಜಲಸಿರಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಅಥವಾ ದೂರುಗಳಿದ್ದಲ್ಲಿ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9036544419 ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *