ಹರಿಹರ: ಭಾಯಾಗಡ್ ನಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ರ ಜಯಂತೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಮಾಡುವ ಸಂದರ್ಭದಲ್ಲಿ ಬಂಜಾರ ಸಮಾಜವನ್ನು ಹಗುರುವಾಗಿ ಮಾತನಾಡಿದಕ್ಕೆ ಸೇವಾಲಾಲ್ ಮಾಲಾಧಾರಿಗಳು ಮತ್ತು ಯುವಕರು ಒಳ ಮೀಸಲಾತಿ ಜಾರಿಯಲ್ಲಿ ರಾಜಕೀಯ ತೀರ್ಮಾನ ಮಾಡಿ ಸಮಾಜಕ್ಕೆ ಅನ್ಯಾಯ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದಕ್ಕೆ ಬಂಜಾರ ಮಾಲಾಧಾರಿಗಳು ಮತ್ತು ಯುವಕರ ಮೇಲೆ ಕೇಸ್ ದಾಖಲಿಸಿರುವುದನ್ನು ತಾಲೂಕು ಬಂಜಾರ ಸಮಾಜ ಖಂಡಿಸಿದೆ.
ಈ ಸಮಾಜದ ಮುಖಂಡರು ಪತ್ರಿಕಾ ಹೇಳಿಕೆ ನೀಡಿದ್ದು ಬಂಜಾರ ಸಮುದಾಯದ ಮಾಲಾದಾರಿಗಳು ಯುವಕರು ಫೆ.೧೪ ರಂದು ನಡೆದ ಸಂತ ಶ್ರೀ ಸೇವಾಲಾಲ್ ಜಯಂತೋತ್ಸವದಲ್ಲಿ ಸರ್ಕಾರದ ಆವೈಜ್ಞಾನಿಕ ಒಳ ಮಿಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ಗೊ-ಬ್ಯಾಕ್ ಎಂದು ಹಕ್ಕೋತ್ತಾಯ ಮಾಡಿದ್ದರು ಇದಕ್ಕೆ ಕೆರಳಲಿದ ಡಿಕೆಶಿ ವೇದಿಕೆಯಲ್ಲೇ ನಿಂತು ನಿಮ್ಮ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ ಎಂದು ಇಡೀ ಸಮಾಜವನ್ನೇ ಅವಮಾನಿಸಿದ್ದಾರೆ. ಇನ್ನು ಮುಂದುವರೆದು ಅವರ ಕೆಲವು ಹಿಂಬಾಲಕರ ಮಾತು ಕೇಳಿ ನಮ್ಮ ಸಮಾಜದ ಮಾಲಾಧಾರಿಗಳು, ಹೋರಾಟಗಾರರು ಮತ್ತು ಯುವಕರ ಮೇಲೆ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ ಮತ್ತು ನಮ್ಮ ಸಮಾಜದ ಹೋರಾಟ ಹತ್ತಿಕ್ಕುವ ಪ್ರಯತ್ನವಾಗಿದೆ.
ನಮ್ಮ ಸಮಾಜಕ್ಕೆ ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಮನಗಂಡು ನಮ್ಮ ಸಮುದಾಯದ ಭಾವನೆಗೆ ಬೆಲೆ ನೀಡಿ ಈ ಬಾರಿಯ ಜಯಂತಿಯಲ್ಲಿ ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ, ಪ್ರಭು ಚವ್ಹಾಣ್, ಬಾಬುರಾವ್ ಚವ್ಹಾಣ್ ಸೇರಿದಂತೆ ಬಹುತೇಕ ಶಾಸಕರು, ಮಾಜಿ ಶಾಸಕರು ಗೈರು ಆಗಿದ್ದರು.
ಈ ಜಯಂತಿಯಲ್ಲಿ ಸಮಾಜದ ಆಕ್ರೋಶ ಸ್ಫೋಟಗೊಳ್ಳಬಹುದು ಎಂಬುದು ರಾಜ್ಯ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಗೂ ಗೊತ್ತಿರುವುದರಿಂದ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಗೈರು ಆಗಿದ್ದರೂ ಕೂಡ ಸ್ವತಃ ಅವರೇ ಹೇಳಿಕೆ ನೀಡಿದಂತೆ ಉದ್ದೇಶಪೂರ್ವಕ ಬಂದು ನಮ್ಮ ಸಮಾಜಕ್ಕೆ ಆಗಿರುವ ನೋವನ್ನು ಆಲಿಸದೇ ಕನಿಷ್ಠ ಪಕ್ಷ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ನೀಡದೇ ನಾವು ನಿಮಗೆ ಮೀಸಲಾತಿಯಲ್ಲಿ ನ್ಯಾಯ ಕೊಟ್ಟಿದ್ದೇವೆ, ಬಂಜಾರ ನಿಗಮ ಮಾಡಿದ್ದೇವೆ ಎಂದು ಸುಳ್ಳು ಹೇಳಿ ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಲ್ಲದೇ ಈಗ ಕೇಸ್ ದಾಖಲಿಸಿರುವುದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ.
ಈ ಕೂಡಲೇ ರಾಜ್ಯ ಸರರ್ಕಾರ ಮಾಲಾಧಾರಿಗಳ ಮೇಲೆ ಹಾಕಿರುವ ಎಫ್.ಐ.ಆರ್‌. ರದ್ದುಪಡಿಸಬೇಕು ಮತ್ತು ನಮ್ಮ ಸಮಾಜದ ಕ್ಷಮೆ ಕೇಳಬೇಕು ಹಾಗೂ ನಮ್ಮ ಸಮಾಜಕ್ಕೆ ಒಳಮೀಸಲಾತಿ ಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ನಮ್ಮ ಸಮಾಜದ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ತಾಲ್ಲೂಕ ಬಂಜಾರ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಈ ಒಂದು ಪತ್ರಿಕಾ ಹೇಳಿಯಲ್ಲಿ ಸಮಾಜದ ಮುಖಂಡರಾದ ರಾಜನಾಯ್ಕ, ಸೋಮ್ಲನಾಯಕ, ಕೀರ್ಯಾನಾಯ್ಕ, ಮೂರ್ತಿನಾಯ್ಕ, ಮಂಜನಾಯ್ಕ, ರಘುನಾಯ್ಕ, ಅಣ್ಣಪ್ಪನಾಯ್ಕ್, ರಮೇಶ್ ನಾಯ್ಕ, ಹನುಮಂತನಾಯ್ಕ, ಸುರೇಶ್ ನಾಯ್ಕ, ಕೋಟಿನಾಯ್ಕ, ಕೃಷ್ಣನಾಯ್ಕ, ಸುಗ್ರೀವನಾಯ್ಕ, ಮೋಹನ್ ನಾಯ್ಕ, ಯೋಗಿಶ್ ನಾಯ್ಕ, ಕಿಶೋರ್ ಯಲವಟ್ಟಿ, ಜಗದೀಶ್ ಕೊಮಾರನಹಳ್ಳಿ ಸೇರಿದಂತೆ ಇತರೆ ಮುಖಂಡರು ಪತ್ರಿಕಾ ಹೇಳಿಕೆ ನೀಡಿದರು.

Leave a Reply

Your email address will not be published. Required fields are marked *