ನ್ಯಾಮತಿ ಫಲವನಹಳ್ಳಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಬೇಕು ಎಂದು ಶ್ರೀಲಕ್ಷ್ಮೀರಂಗನಾಥ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ಟ್ರಸ್ಟಿ ಜೈರಂಗನಾಥ ತಿಳಿಸಿದರು.
ನ್ಯಾಮತಿ ತಾಲ್ಲೂಕು ಫಲವನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀಲಕ್ಷ್ಮೀರಂಗನಾಥ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಬೆಸ್ಕಾಂ ಎಂಜಿನಿಯರ್ ಎನ್.ವೆಂಕಟೇಶ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತಾಧಿಕಾರಿ ನಾಗರತ್ನ ಜೈರಂಗನಾಥ ಅಧ್ಯಕ್ಷತೆ ವಹಿಸಿದ್ದರು.
ಎಸ್ಬಿಎಂ ವ್ಯವಸ್ಥಾಪಕ ಸುನೀಲ್ಕುಮಾರ ಯಾದವ್, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಬಿಆರ್ಸಿ ಸಿ.ಮಲ್ಲೇಶ್, ಜಿ.ಸೋಮಶೇಖರ, ರಂಗಪ್ಪ, ಶಿವರಾಮಪ್ಪ, ಕಾರ್ಯದರ್ಶಿ ಅರವಿಂದ, ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
