ನ್ಯಾಮತಿ; ಪಟ್ಟಣದ ವಿಠ್ಠಲ ರುಕುಮಾಯಿ ಮಂದಿರದಲ್ಲಿ 38ನೇ ವರ್ಷದ ವಿಠ್ಠಲ ರುಕುಮಾಯಿ ದಿಂಡಿ ಉತ್ಸವ ಫೆ.28 ಮತ್ತು ಮಾರ್ಚ್ 1ರಂದು ನಡೆಯಲಿದೆ.
ಫೆ. 28ರಂದು ವಿಠ್ಠಲ ರುಕುಮಾಯಿ ಶಿಲಾಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮತ್ತು ಬೆಣ್ಣೆ ಆಲಂಕಾರ, ಪೋತಿ ಸ್ಥಾಪನೆ, ನಾಮಜಪ ಮತ್ತು ಪ್ರವಚನ ನಡೆಯಲಿದೆ. ಶಿವಮೊಗ್ಗ ವಿಠ್ಠಲರಾವ್ ತೇಲ್ಕರ್ ಪ್ರವಚನ, ಕೀರ್ತನಕಾರರು ಆರ್.ಹನುಮಂತರಾವ್ ರಂಗಧೋಳ್, ರಾತ್ರಿ ಅಖಂಡ ಜಾಗರಣೆ ಸಂತವಾಣಿ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಪಾಳಿಭಜನೆ, ಭಾರೂಡ್, ಮಹಿಳಾ ಮಂಡಳಿಯಿಂದ ಭಜನೆ, ಆಕಾಶವಾಣಿ ಕಲಾವಿದ ಸುಧೀರ್ ಬೇಂಗ್ರೆ, , ತುಕಾರಾಮ್ ರಾವ್ ರಂಗಧೋಳ್, ವಿಠ್ಠಲ ರಂಗಧೋಲ್ ಅವರಿಂದ ಗಾಯನ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರಂಗೋಲಿ ಸ್ಪರ್ಧೆ ವಿಜೇತರಿಗೆ ಸನ್ಮಾನ ಕಾರ್ಯಕ್ರಮ.
ಮಾರ್ಚ್ 1ರಂದು ಕಾಕಡಾರತಿ ಹಾಗೂ ವಿಠ್ಠಲ ರುಕುಮಾಯಿ ಉತ್ಸವ ಮೂರ್ತಿಗಳ ರಾಜಬೀದಿ ಮೆರವಣಿಗೆ, ಕಾಲಾಕೀರ್ತನೆ ಹಾಗೂ ಮಹಾಮಂಗಳಾರತಿ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ನಾಮದೇವ ಸಿಂಪಿ ಸಮಾಜ, ದಿಂಡಿ ಉತ್ಸವ ಸಮಿತಿ ಹಾಗೂ ಭಜನಾ ಮಂಡಳಿ, ಯುವಕ ಮಂಡಳಿ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
