2025-26ನೇ ಸಾಲಿನ ಕರ ವಸೂಲಾತಿಯ ಪ್ರಸಕ್ತ ಸಾಲಿನ ಕಂದಾಯ ಬೇಡಿಕೆಯು
ರೂ.31,48,97,169.82.86ಗಳಿದ್ದು, ರೂ.31,64,77,420.29ಗಳನ್ನು ವಸೂಲಿ ಮಾಡುವ ಮೂಲಕ ಶೇ.100.50ರಷ್ಟು ಸಾಧನೆ ಮಾಡಲಾಗಿದೆ ಎಂದು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ನಿವಾಸದಲ್ಲಿ ಜನಗಣತಿ ಸ್ವಯಂ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ
ಕರಸಂಗ್ರಹದಲ್ಲಿ ಆಗಿರುವ ಅಭೂತಪೂರ್ವ ಸಾಧನೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 194 ಗ್ರಾಮ
ಪಂಚಾಯತಿಗಳ ಪೈಕಿ 120 ಗ್ರಾಮ ಪಂಚಾಯತಿಗಳು ಶೇ.100ಕ್ಕಿಂತ ಹೆಚ್ಚು ಕರ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರುವುದು ವಿಶೇಷವಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದಿತ್ತೀಚೆಗೆ ಆರಂಭಿಸಿದ “ಬೆಳಗಿನ ನಡೆ ಹಳ್ಳಿಯ ಕಡೆ” ಅಭಿಯಾನ ಈ ಸಾಧನೆಗೆ
ಮುಖ್ಯ ಕಾರಣವಾಗಿದೆ ಎಂದು ತಿಳಿಸಿದ ಅವರು, ಈ ಅಭಿಯಾನದಲ್ಲಿ ಪಂಚಾಯಿತಿ ಅಧಿಕಾರಿ-ಸಿಬ್ಬಂಧಿಗಳು ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದಲೇ ಗ್ರಾಮ
ಪಂಚಾಯತಿ ವ್ಯಾಪ್ತಿಯೊಳಗಿನ ಮನೆಮನೆಗೆ ತೆರಳಿ ಸಾರ್ವಜನಿಕರಲ್ಲಿ ಕರ ಪಾವತಿ, ಗ್ರಾಮಾಭಿವೃದ್ಧಿ ಮತ್ತು ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಕುರಿತಾಗಿ ಅರಿವು
ಮೂಡಿಸಲು ಶ್ರಮಿಸಿದ್ದರು. ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ, ತೆರಿಗೆ ಪಾವತಿಯ ಅಗತ್ಯತೆ ಹಾಗೂ ಅದರ ಪ್ರಯೋಜನಗಳನ್ನು ತಿಳಿಸುವ ಮೂಲಕ
ಹಾಗೂ ಪ್ರತಿ ತಿಂಗಳು ಕಂದಾಯ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳುವುದರ ಮೂಲಕ ಕರ ವಸೂಲಾತಿಯಲ್ಲಿ ಗಣನೀಯ ಏರಿಕೆ ಕಾಣಲು
ಸಾಧ್ಯವಾಗಿದೆ ಎಂದರು.
ಮಾರ್ಚ್ ಆರಂಭದಲ್ಲಿ ಶೇ.70.49ರಷ್ಟಿದ್ದ ವಸೂಲಾತಿ ಪ್ರಮಾಣವು, ಅಭಿಯಾನದ ಪರಿಣಾಮವಾಗಿ ಮಾರ್ಚ್ ಅಂತ್ಯದ ವೇಳೆಗೆ ಶೇ.100
ಮೀರಿರುವುದು ವಿಶೇಷವಾಗಿದೆ. ಕೇವಲ ಮಾರ್ಚ್ ತಿಂಗಳಲ್ಲೇ ರೂ.7,57,21,082.95 ವಸೂಲಾತಿ ಮಾಡಲಾಗಿದೆ ಎಂದವರು ತಿಳಿಸಿದರು.
ಚನ್ನಗಿರಿ ತಾಲೂಕು ರುದ್ರಾಪುರ ಗ್ರಾಮ ಪಂಚಾಯತಿಯು ಶೇ.170.06ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಗಳೂರು
ತಾಲೂಕು ಅಣಬೂರು ಗ್ರಾಮ ಪಂಚಾಯತಿಯು ಶೇ.157.57ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮಾರ್ಚ್
31ರಂದು ಒಂದೇ ದಿನದಲ್ಲಿ ರೂ. 1,06,70,650.00ಗಳ ಕರ ವಸೂಲಾತಿ ಮಾಡಲಾಗಿದ್ದು, 6232 ವಹಿವಾಟುಗಳು ಪಂಚತಂತ್ರ 2.0 ತಂತ್ರಾಂಶದಲ್ಲಿ
ದಾಖಲಾಗಿದೆ ಎಂದರು.
ಅಭಿನಂದನೆಗಳು:- ಈ ಅಪೂರ್ವ ಸಾಧನೆಗೆ ಶ್ರಮಿಸಿದ ಎಲ್ಲಾ ಸಾರ್ವಜನಿಕರಿಗೂ, ಜಿಲ್ಲೆಯ ಎಲ್ಲಾ ತಾಲೂಕು ನೋಡಲ್ ಅಧಿಕಾರಿಗಳಿಗೂ,
ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಪಂ.ರಾಜ್)/ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿ
ಗ್ರೇಡ್-1 & 2 / ದ್ವಿತೀಯ ದರ್ಜೆ ಲೆಕ್ಕ ಸಹಾಯಕರು/ ಕರ ವಸೂಲಿಗಾರರು, ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸ್ವಸಹಾಯ ಮಹಿಳಾ
ಸಂಘದ ಸದಸ್ಯರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
2026-27ನೇ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಸಾರ್ವಜನಿಕರು ತೆರಿಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಸೌಲಭ್ಯವಿದ್ದು,
ಸಾರ್ವಜನಿಕರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
2025-2026 ನೇ ಸಾಲಿನಲ್ಲಿ ತೆರಿಗೆ ವಸೂಲಾತಿ ವಿವರ :
- ಚನ್ನಗಿರಿಯ 61 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 19,88,66,948.49 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
11,41,38,688.89 ಸೇರಿ ಒಟ್ಟು 31,30,05,637.38 ಗಳಲ್ಲಿ 11,48,88,561.01 ತೆರಿಗೆ ಸಂಗ್ರಹಿಸಲಾಗಿದ್ದು ರೂ. 19,78,83,288.65 ಬಾಕಿ
ಇದ್ದು ಶೇ. 100.66 ಪ್ರಗತಿ ಸಾಧಿಸಲಾಗಿದೆ. - ದಾವಣಗೆರೆಯ 42 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 11,99,73,757.21 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
7,65,11,043.13 ಸೇರಿ ಒಟ್ಟು 19,64,84,800.34 ಗಳಲ್ಲಿ 7,81,09,839.82 ತೆರಿಗೆ ಸಂಗ್ರಹಿಸಲಾಗಿದ್ದು ರೂ. 11,81,10,252.88 ಬಾಕಿ
ಇದ್ದು ಶೇ. 102.09 ಪ್ರಗತಿ ಸಾಧಿಸಲಾಗಿದೆ. - ಹರಿಹರ 23 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 4,54,39,182.11 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
3,45,58,208.03 ಸೇರಿ ಒಟ್ಟು 7,99,97,390.14 ಗಳಲ್ಲಿ 3,61,02,707.30 ತೆರಿಗೆ ಸಂಗ್ರಹಿಸಲಾಗಿದ್ದು ರೂ. 4,36,23,797.05.73 ಬಾಕಿ
ಇದ್ದು ಶೇ. 104.47 ಪ್ರಗತಿ ಸಾಧಿಸಲಾಗಿದೆ. - ಹೊನ್ನಾಳಿ 29 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 9,30,08,674.39 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
4,40,29,056.73 ಸೇರಿ ಒಟ್ಟು 13,70,37,731.12 ಗಳಲ್ಲಿ 4,17,83,869.01 ತೆರಿಗೆ ಸಂಗ್ರಹಿಸಲಾಗಿದ್ದು ರೂ. 9,51,94,477.78 ಬಾಕಿ ಇದ್ದು
ಶೇ. 94.90 ಪ್ರಗತಿ ಸಾಧಿಸಲಾಗಿದೆ. - ಜಗಳೂರು 22 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 5,48,65,584.78 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
2,34,71,941.26 ಸೇರಿ ಒಟ್ಟು 7,83,37,526.04 ಗಳಲ್ಲಿ 2,32,71,192.41 ತೆರಿಗೆ ಸಂಗ್ರಹಿಸಲಾಗಿದ್ದು ರೂ. 5,50,38,0836.51 ಬಾಕಿ ಇದ್ದು
ಶೇ. 99.14 ಪ್ರಗತಿ ಸಾಧಿಸಲಾಗಿದೆ. - ನ್ಯಾಮತಿ 17 ಗ್ರಾಮಪಂಚಾಯಿತಿಗಳಲ್ಲಿ ಬಾಕಿ ತೆರಿಗೆ ರೂ. 6,96,06,727.32 ಹಾಗೂ ಸದರಿ ಸಾಲಿನ ತೆರಿಗೆ ವಸೂಲಾತಿ ಗುರಿ ರೂ.
2,21,88,231.78 ಸೇರಿ ಒಟ್ಟು 9,17,94,959.10 ಗಳಲ್ಲಿ 2,23,21,250.74 ತೆರಿಗೆ ಸಂಗ್ರಹಿಸಲಾಗಿದ್ದು ರೂ. 6,94,38,893.49.82 ಬಾಕಿ
ಇದ್ದು ಶೇ. 100.60 ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯ ಒಟ್ಟು 194 ಗ್ರಾಮ ಪಂಚಾಯಿತಿಗಳಿಂದ ಒಟ್ಟು ರೂ. 31,64,77,420.29 ಗಳಷ್ಟು ತೆರಿಗೆ ಸಂಗ್ರಹಿಸಿ ಶೇ. 100.50 ರಷ್ಟು
ಪ್ರಗತಿಸಾಧಿಸಿದೆ ಹಾಗೂ ದಿನಾಂಕ:31-03-2026ರ ಒಂದೇ ದಿನದಲ್ಲಿ ಒಟ್ಟು 6232 ವಹಿವಾಟಿನಲ್ಲಿ ರೂ.1,06,70,650 ಗಳನ್ನು ಸಂಗ್ರಹಿಸಲಾಗಿದೆ ಎಂದು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ತಿಳಿಸಿದ್ದಾರೆ.
