Category: ದಾವಣಗೆರೆ

ಪಾರ್ಸಲ್ ಮೂಲಕ ಮಾತ್ರ ಸರಬರಾಜು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಗಧಿತ ಹೋಟೆಲ್‍ಗಳನ್ನು ತೆರೆಯಲು ಅನುಮತಿ

ದಾವಣಗೆರೆ, ಏ.08 ಕೋವಿಡ್-19 ಸಾಂಕ್ರಾಮಿಕ ರೋಗವು ತ್ರೀವ್ರತರವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಸರ್ಕಾರವು ಹಲವು ರೀತಿಯ ಪ್ರಯತ್ನಗಳಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಶ್ಯಕ ಸಾಮಗ್ರಿಗಳನ್ನು ತಲುಪಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಚÀಲನೆಗೆ ಅವಕಾಶ ನೀಡಲಾಗಿರುತ್ತದೆ. ವಾಹನ ಚಾಲಕರಿಗೆ…

ಕುರಿ, ಮೇಕೆ ಮಾಂಸ ಪ್ರತಿ ಕೆ.ಜಿ.ಗೆ ರೂ.500 ನಿಗದಿ

ದಾವಣಗೆರೆ ಏ.06 ಏಪ್ರಿಲ್ 5 ರಿಂದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುರಿ, ಮೇಕೆ ಮಾಂಸ ಮಾರಾಟ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಕುರಿ, ಮೇಕೆ ಮಾಂಸ ಮಾರಾಟಗಾರರು ಅತೀ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪ್ರತೀ ಕೆ.ಜಿಗೆ ರೂ.…

ದಾವಣಗೆರೆ ವಿಪತ್ತು ನಿರ್ವಹಣೆಗೆ 16 ತಂಡ ರಚನೆ ಸಮರ್ಥವಾಗಿ ವಿಪತ್ತು ನಿರ್ವಹಣೆಗೆ ಶ್ರಮಿಸಲು ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ, ಏ.04 ಜಿಲ್ಲಾದ್ಯಂತ ಕೊರೊನಾ ರೋಗ ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಸಮಿತಿಯು ಒಟ್ಟು 16 ತಂಡಗಳನ್ನು ರಚಿಸಿದೆ. ಈ ವಿಪತ್ತು ನಿರ್ವಹಣಾ ತಂಡಗಳು ಅತ್ಯಂತ ಕ್ರಿಯಾಶೀಲವಾಗಿ ವಿಪತ್ತು ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಡಳಿತ…

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ 60 ವರ್ಷ ಮೇಲ್ಪಟ್ಟ ಹಿರಿಯ ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ

ದಾವಣಗೆರೆ ಏ.04 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಇಂದು ಹೆಚ್ಚು ವರದಿಯಾಗಿದ್ದು ಎಲ್ಲ ಜಿಲ್ಲೆಗಳಲ್ಲಿ ಇದನ್ನು ನಿಯಂತ್ರಿಸಲು ಜಾಗರೂಕರಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ಸೋಂಕಿತರನ್ನು ಹೆಚ್ಚಿನ ಗಮನ ಹರಿಸಿ ಶುಶ್ರೂಷೆ ಮಾಡಿ ಜೀವ ಉಳಿಸಬೇಕೆಂದು…

ದೆಹಲಿಯ ನಿಜಾಮುದ್ದಿನ್ ತಬ್ಲಿಕ್ ಜಮಾತಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಎಲ್ಲಾ ಮುಸಲ್ಮಾನ್ ಭಾಂಧವರು ಕೂಡಲೇ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಸದಸ್ಯ ಎಸ್.ಅಬ್ದುಲ್ ಮಜೀದ್ ಮನವಿ ಮಾಡಿದ್ದಾರೆ.

ದೆಹಲಿಯ ನಿಜಾಮುದ್ದಿನ್ ತಬ್ಲಿಕ್ ಜಮಾತಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ವೈರಸ್ ಹರಡಿರುವ ಶಂಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಯುತ್ತಿದ್ದು, ಮುಸನ್ಮಾನ್ ಭಾಂಧವರು ಸ್ವ ಇಚ್ಛೆಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಕೊರೋನಾ ವೈರಸ್ ತಡೆಗಟ್ಟಲು ಎಲ್ಲರೂ ಸಹಕರಾರ ನೀಡಬೇಕು ಎಂದು…

ಸಂತೆ ಮೈದಾನದಲ್ಲಿ ಸಾಮಾಜಿಕ ಅಂತರ ವ್ಯವಸ್ಥೆ ವೀಕ್ಷಣೆ

ದಾವಣಗೆರೆ ಏ.02 ಹರಿಹರ ನಗರಸಭೆಯ ಸಭಾಂಗಣದಲ್ಲಿ ಇಂದು ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಸಭೆಯ ಮುನ್ನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪನವರು ಹರಿಹರದ ಸಂತೆ ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸಾರ್ವಜನಿಕರು ತರಕಾರಿ ಕೊಂಡುಕೊಳ್ಳಲು…

ಚನ್ನಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೊರೊನಾ ಸೋಂಕು ನಿಯಂತ್ರಣ ಕುರಿತು ಸಭೆ

ದಾವಣಗೆರೆ, ಏ.02 ಚನ್ನಗಿರಿ ನಗರದ ಜವಳಿ ಕಾಂಪ್ಲೆಕ್ಸ್‍ನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರ ಅಧ್ಯಕ್ಷತೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಕೊರೊನಾ…

ರೈತ ದಂಪತಿಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ

ದಾವಣಗೆರೆ ಏ.1 ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಹಾಗೂ ಈ ರೋಗದ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರ ಮುಖಾಂತರ ದೊಡ್ಡಬಾತಿಯ ರೈತ ದಂಪತಿಗಳಾದ ದ್ಯಾಮನಾಯ್ಕ್ ಚವ್ಹಾಣ್ ಮತ್ತು ನಾಗರತ್ನಮ್ಮ ಇವರು ಮುಖ್ಯಂಮಂತ್ರಿಗಳ ಪರಿಹಾರ ನಿಧಿಗೆ ರೂ.50 ಸಾವಿರಗಳ…

ತೋಟಗಾರಿಕೆ ಉತ್ಪನ್ನ ಬೆಳೆದ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ

ದಾವಣಗೆರೆ ಏ.01 ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದ ರೈತರುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ ಕೊರತೆಯಿಂದಾಗಿ ತೊಂದರೆ ಉಂಟಾಗಿದ್ದು, ಬೆಳೆ ಕಟಾವಿಗೆ ಬಂದಂತಹ ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ಜಿಲ್ಲೆಯ ರೈತರು ಅವರಿಗೆ ಸಂಬಂಧಿಸಿದ…

16ನೇ ವಾರ್ಡ್‍ನ ವಿನೋಬನಗರದಲ್ಲಿ ಪಾಲಿಕೆ ಸದಸ್ಯ ಎ.ನಾಗರಾಜ್‍ರವರ ನೇತೃತ್ವದಲ್ಲಿ ರಸಾಯನಿಕ ಸಿಂಪರಣೆ

ದಾವಣಗೆರೆ ಮಹಾನಗರ ಪಾಲಿಕೆಯ 16ನೇ ವಾರ್ಡ್‍ನ ವಿನೋಬನಗರದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎ.ನಾಗರಾಜ್ ಅವರ ನೇತೃತ್ವದಲ್ಲಿ ರಸಾಯನಿಕ ಸಿಂಪರಣೆ ಮಾಡಲಾಯಿತು. ನಿನ್ನೆ ಸಂಜೆ ಮತ್ತು ಇಂದು ವಿನೋಬನಗರದ ಮನೆಮನೆಗೆ ಖುದ್ದು ಎ.ನಾಗರಾಜ್ ಅವರೇ ತೆರಳಿ ರಸಾಯನಿಕ ಸಿಂಪರಣೆ ಮಾಡುವುದರ ಜೊತೆಗೆ ಕೊರೋನಾ…