ಹೊನ್ನಾಳಿ ತಾಲೂಕಿನ ಕೂಲಂಬಿಯ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ಕೈಲಾಸ ಸಭಾ ಮಂಟಪದಲ್ಲಿ ಆಸೀನವಾಗಿರುವ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ.
ಹೊನ್ನಾಳಿ:ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ರಥೋತ್ಸವ, ಸಾಮೂಹಿಕ ವಿವಾಹ ಮತ್ತು ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಡಿ.8 ಮತ್ತು 9ರಂದು ನಡೆಯಲಿವೆ.8ರ ಗುರುವಾರ ಬೆಳಿಗ್ಗೆ 6ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಉರುಳು ಸೇವೆ, ಜವುಳ ಕಾರ್ಯಕ್ರಮ ನಡೆಯಲಿದೆ.…