ಪ್ರತಿಯೊಬ್ಬರು ಲಿಂಗ ಪೂಜೆ ಮಾಡುವ ಮೂಲಕ ತಮ್ಮ ಅಂತರಂಗ ಹಾಗೂ ಬಹಿರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹ್ಮನಮಠದ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಕ್ಷೇತ್ರದ ಹಾಲಸ್ವಾಮೀಜಿಯ ಮಹಾರಥೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಹಾಲಸ್ವಾಮೀಜಿಯÀವರ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಉಚಿತ ಶಿವದೀಕ್ಷಾ, ಹಾಲಸ್ವಾಮೀಜಿಯ , ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ, ಮಹಾರಥೋತ್ಸವದ ಕಂಕಣಧಾರಣೆ ಕಾರ್ಯಕ್ರಮದ ಶಿವದೀಕ್ಷೆ…